ಬೆಂಗಳೂರು: ನಟಿ ರಮ್ಯಾ ಹಾಗೂ ಡಿ ಬಾಸ್ ಫ್ಯಾನ್ಸ್‌ಗಳ (D Boss Fans) ಸಮರ ಜೋರಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ವಾರ್ ನಡೆಯುತ್ತಿದೆ. ಅಶ್ಲೀಲ ಕಮೆಂಟ್ ಮಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳ ಮೇಲೆ ಆರೋಪಿಸಿದ ರಮ್ಯಾ, ಸೈಬರ್ ಕ್ರೈಂಗೆ ದೂರು ನೀಡಲು ಸಜ್ಜಾಗಿದ್ದಾರೆ. ಇದೀಗ ಡಿ ಬಾಸ್ ಅಭಿಮಾನಿಗ ಅಫೀಷಿಯಲ್ ಪೇಜ್‌ನಲ್ಲಿ ಮಾಡಿದ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಆ ಪೇಜ್‌ನಲ್ಲಿ ಯಾವುದೇ ವಿವಾದಕ್ಕೆ ಕಿವಿಗೊಡದಂತೆ ಅಭಿಮಾನಿಗಳಲ್ಲಿ ಡಿ ಫ್ಯಾನ್ಸ್ ಮನವಿ ಮಾಡಿದ್ದಾರೆ. ಯಾವುದೇ ರೀತಿಯ ತೊಂದರೆಯನ್ನು ಯಾರಿಗೂ ನೀಡಬೇಡಿ ಎಂದು ಅಲ್ಲಿ ಬರೆಯಲಾಗಿದೆ.
ಡಿ ಬಾಸ್ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ, ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ, ಯಾರಿಗೂ ಮೆಸೇಜ್ ಮಾಡಬೇಡಿ, ಪ್ರಚಾರ ಆಗಲಿ ಹನ್ನಾರ ಆಗಲಿ, ಯಾರೂ ಏನೇ ಎಂದರೂ ತಲೆ ಕೆಡಿಸಿಕೊಳ್ಳಬೇಡಿ. ದರ್ಶನ್ ಫ್ಯಾನ್ಸ್ ಏನೆಂದು ಎಲ್ಲರಿಗೂ ಗೊತ್ತು. ಫ್ಯಾನ್ಸ್ ಮಾಡಿರುವ ಸಮಾಜ ಮುಖಿ ಕಾರ್ಯಗಳು ಸಾಕ್ಷಿಯಿದೆ. ಇಂತ ಅವಮಾನಗಳು ಇನ್ನಷ್ಟು ಒಳ್ಳೆ ಕೆಲಸ ಮಾಡಲು ಅನುಕೂಲವಾಗಲಿ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಸೂಕ್ಷ್ಮ ಸಮಯದಲ್ಲಿ, ಆನ್‌ಲೈನ್‌ನಲ್ಲಿ ಯಾವುದೇ ರೀತಿಯ ಸಂಘರ್ಷಕ್ಕೆ ಇಳಿಯದೆ, ತಮ್ಮ ಸಂಘಟನೆಯ ಗೌರವವನ್ನು ಕಾಪಾಡಿಕೊಳ್ಳುವಂತೆ ಮತ್ತು ಸಕಾರಾತ್ಮಕ ಕೆಲಸಗಳತ್ತ ಗಮನಹರಿಸುವಂತೆ ಅಭಿಮಾನಿ ಸಂಘವು ತನ್ನ ಸದಸ್ಯರಿಗೆ ತಿಳಿಸಿದೆ. ಟೀಕೆಗಳನ್ನು ಸ್ವೀಕರಿಸಿ, ಅದನ್ನೇ ಸವಾಲಾಗಿ ತೆಗೆದುಕೊಂಡು ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Actress Ramya: D ಬಾಸ್ ಫ್ಯಾನ್ಸ್ Vs ರಮ್ಯಾ ಪೋಸ್ಟ್ ವಾರ್; ʼಪದ್ಮಾವತಿʼಗೆ ರಕ್ಷಿತಾ, ವಿಜಯಲಕ್ಷ್ಮಿ ಟಾಂಗ್
ಕಾನೂನು ಸಮರಕ್ಕಿಳಿದ ವಿಜಯಲಕ್ಷ್ಮಿ ?
ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇನ್ಸ್ಟಾಗ್ರಾಂ ಸ್ಟೋರಿ ಎಂದನ್ನು ಹಾಕಿದ್ದು, ಮೂರ್ಖರನ್ನ ಅವರ ಮಾತಿನಿಂದ ಗುರುತಿಸಹುದು, ಬುದ್ದಿವಂತನನ್ನ ಮೌನದಿಂದ ಗುರುತಿಸಬಹುದು ಎಂದು ಬುದ್ಧನ ಚಿತ್ರವಿರುವ ಫೋಟೋ ಒಂದನ್ನು ಹಾಕಿದ್ದಾರೆ. ಕೋರ್ಟ್ ಅಲ್ಲಿ ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ. ಆಗಲೇ ದರ್ಶನ್ ಅನ್ನು ದೋಷಿ ಎಂದು ಹೇಳುತ್ತಿದ್ದಾರೆ. ಕೋರ್ಟ್ ಅಲ್ಲಿ ಇರುವ ಪ್ರಕರಣಕ್ಕೆ ರಮ್ಯಾ ಕಾಮೆಂಟ್ ಮಾಡಿದ್ದು ಸರಿಯಲ್ಲ. ರಮ್ಯಾ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿ ಎಂದು ಹೇಳಲಾಗುತ್ತಿದೆ. ಸದ್ಯ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.