ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kantara Chapter 1 Collection: ಬಾಕ್ಸ್‌ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದ ʼಕಾಂತಾರ: ಚಾಪ್ಟರ್‌ 1'; 6 ದಿನಗಳಲ್ಲಿ 420 ಕೋಟಿ ರೂ. ದಾಟಿದ ಕಲೆಕ್ಷನ್‌

Rishab Shetty: ʼಕಾಂತಾರ: ಚಾಪ್ಟರ್‌ 1'ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಅಕ್ಟೋಬರ್‌ 2ರಂದು ವಿಶ್ವಾದ್ಯಂತ, ವಿವಿಧ ಭಾಷೆಗಳಲ್ಲಿ ತೆರೆಕಂಡ ಈ ಚಿತ್ರದ ಅಬ್ಬರಕ್ಕೆ ದಾಖಲೆಗಳೆಲ್ಲ ಉಡೀಸ್‌ ಆಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ರಿಲೀಸ್‌ ಆದ ಆರೇ ದಿನಕ್ಕೆ 400 ಕೋಟಿ ರೂ. ದಾಟಿದೆ.

ಬೆಂಗಳೂರು: ಸಿನಿಪಂಡಿತರ ಭವಿಷ್ಯ ನಿಜವಾಗಿಸಿ ರಿಷಬ್‌ ಶೆಟ್ಟಿ (Rishab Shetty) ಅವರ ಕನಸಿನ ಕೂಸು, 3 ವರ್ಷಗಳ ಕಠಿಣ ಪರಿಶ್ರಮದ ಫಲ ʼಕಾಂತಾರ: ಚಾಪ್ಟರ್‌ 1' (Kantara Chapter 1) ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಅಕ್ಟೋಬರ್‌ 2ರಂದು ವಿಶ್ವಾದ್ಯಂತ, ವಿವಿಧ ಭಾಷೆಗಳಲ್ಲಿ ತೆರೆಕಂಡ ಈ ಚಿತ್ರದ ಅಬ್ಬರಕ್ಕೆ ದಾಖಲೆಗಳೆಲ್ಲ ಉಡೀಸ್‌ ಆಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಬರೆದಿದೆ (Kantara Chapter 1 Collection). ರಿಲೀಸ್‌ ಆದ ಆರೇ ದಿನಕ್ಕೆ 400 ಕೋಟಿ ರೂ. ಅನಾಯಾಸವಾಗಿ ದಾಟಿದೆ. ವೀಕ್‌ಡೇಸ್‌ನಲ್ಲೂ ಕಲೆಕ್ಷನ್‌ ಉತ್ತಮವಾಗಿದ್ದು, ಹೀಗೆ ಸಾಗಿದರೆ ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರ ಎನಿಸಿಕೊಳ್ಳಲಿದೆ.

ಈಗ ಬಂದಿರುವ ಮಾಹಿತಿ ಪ್ರಕಾರ ಹೊಂಬಾಳೆ ಪಿಲ್ಮ್ಸ್‌ ನಿರ್ಮಾಣದ ʼಕಾಂತಾರ: ಚಾಪ್ಟರ್‌ 1' ಚಿತ್ರ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 427.5 ಕೋಟಿ ರೂ. ಗಳಿಸಿದೆ. ಈ ಪೈಕಿ ಭಾರತದ ಗಳಿಕೆ 290 ಕೋಟಿ ರೂ. ದಿನದ ಅಂತ್ಯಕ್ಕೆ ಇದು 300 ಕೋಟಿ ರೂ. ದಾಟಬಹುದು ಎನ್ನುವ ಲೆಕ್ಕಾಚಾರವಿದೆ.

ಈ ಸುದ್ದಿಯನ್ನೂ ಓದಿ: Rukmini Vasanth: 'ಕಾಂತಾರʼದ ಕನಕವತಿ ರುಕ್ಮಿಣಿ ವಸಂತ್‌ ಈಗ ಹೊಸ ನ್ಯಾಷನಲ್‌ ಕ್ರಶ್‌; ಅಪ್ಪಟ ಕನ್ನಡತಿಯ ಸಿನಿಜರ್ನಿ ಹೇಗಿದೆ?

2 ಅತೀ ಹೆಚ್ಚು ಗಳಿಸಿದ ಕನ್ನಡ ಚಿತ್ರ

2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್‌ ಇದಾಗಿದ್ದು, ತೆರೆಮೇಲೆ ಮೂಡಿ ಬಂದಿರುವ ದೃಶ್ಯ ವೈಭವಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಜತೆಗೆ 3 ವರ್ಷಗಳ ಹಿಂದಿನ 'ಕಾಂತಾರ' ಚಿತ್ರದ ಒಟ್ಟು ಗಳಿಕೆಯನ್ನು ಆರೇ ದಿನಗಳಲ್ಲಿ ಮೀರಿ ಬಿಟ್ಟಿದೆ. ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದ ʼಕಾಂತಾರʼ ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 412 ಕೋಟಿ ರೂ. ಗಳಿಸಿ 2 ಅತೀ ಹೆಚ್ಚು ಗಳಿಸಿದ ಕನ್ನಡ ಚಿತ್ರ ಎನಿಸಿಕೊಂಡಿತ್ತು. ಇದೀಗ ʼಕಾಂತಾರ: ಚಾಪ್ಟರ್‌ 1' ಅದನ್ನು ಮೀರಿ ಮುಂದ ಸಾಗಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಪ್ರಶಾಂತ್‌ ನೀಲ್‌-ಯಶ್‌-ಶ್ರೀನಿಧಿ ಶೆಟ್ಟಿ ಕಾಂಬಿನೇಷನ್‌ನ ʼಕೆಜಿಎಫ್‌ 2' ಇದೆ. ಇದು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 1,215 ಕೋಟಿ ರೂ. ದೋಚಿಕೊಂಡಿದೆ.

ಈ ವರ್ಷ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಭಾರತೀಯ ಚಿತ್ರಗಳು

ಈ ವರ್ಷ ರಿಲೀಸ್‌ ಆದ ಚಿತ್ರಗಳ ಪೈಕಿ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಹಿಂದಿಯ ʼಛಾವಾʼ (801 ಕೋಟಿ ರೂ.), ʼಸೈಯಾರʼ (570 ಕೋಟಿ ರೂ.), ತಮಿಳಿನ ʼಕೂಲಿʼ (515 ಕೋಟಿ ರೂ.), ಹಿಂದಿಯ ʼವಾರ್‌ 2' (365 ಕೋಟಿ ರೂ.) ಗಳಿಸಿವೆ. ಸದ್ಯ ʼಕಾಂತಾರ: ಚಾಪ್ಟರ್‌ 1' ಮುಂದೆ ಮೊದಲ 3 ಚಿತ್ರಗಳ ಮಾತ್ರವಿದ್ದು, ಸದ್ಯದಲ್ಲೇ ಇವನ್ನು ಹಿಂದಿಕ್ಕುವ ಸಾಧ್ಯತೆ ಇದೆ.

1,000 ಕೋಟಿ ರೂ. ಕ್ಲಬ್‌ ಸೇರುತ್ತಾ?

ಸದ್ಯ ಚಿತ್ರ 1,000 ಕೋಟಿ ರೂ. ಕ್ಲಬ್‌ ಸೇರುತ್ತಾ ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಈ ಸಾಧ್ಯತೆ ಬಗ್ಗೆ ಸಿನಿತಜ್ಞರು ಭವಿಷ್ಯ ನುಡಿದಿದ್ದಾರೆ. ಒಂದುವೇಳೆ ನಿಜವಾದರೆ ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಹೊಸದೊಂದು ಇತಿಹಾಸ ಬರೆಯಲಿದೆ. ಕನ್ನಡದ 2 ಚಿತ್ರಗಳು 1 ಸಾವಿರ ಕೋಟಿ ರೂ. ಕ್ಲಬ್‌ ಸೇರಿದಂತಾಗುತ್ತದೆ. ಈಗಾಗಲೇ ದಕ್ಷಿಣ ಭಾರತದಲ್ಲಿ ತೆಲುಗು ಚಿತ್ರರಂಗ ಈ ಮೈಲಿಗಲ್ಲು ನೆಟ್ಟಿದೆ. ಟಾಲಿವುಡ್‌ನ 4 ಚಿತ್ರಗಳು (ʼಬಾಹುಬಲಿ 2ʼ, ʼಆರ್‌ಆರ್‌ಆರ್‌ʼ, ʼಪುಷ್ಪ 2ʼ ಮತ್ತು ʼಕಲ್ಕಿ 2898 ಎಡಿʼ) 1,000 ಕೋಟಿ ರೂ. ಕ್ಲಬ್‌ ಸೇರಿವೆ.