ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss: ಸಲಿಂಗಿ ಜೋಡಿ ಬಿಗ್‌ಬಾಸ್‌ಗೆ ಎಂಟ್ರಿ! ಪ್ರೀತಿಗಾಗಿ ಇವ್ರ ಹೋರಾಟ ಹೇಗಿತ್ತು ಗೊತ್ತಾ?

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಸುಮಾರು 7 ಭಾರತೀಯ ಭಾಷೆಗಳಲ್ಲಿ ನಡೆಯುತ್ತಿರುವ ಬಿಗ್‌ಬಾಸ್‌ ರಿಯಾಲಿಟಿ ಶೋಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ. ಪ್ರತೀ ಸೀಸನ್‌ನಲ್ಲಿಯೂ ಸೆಲೆಬ್ರಿಟಿಗಳು, ಕಾಂಟ್ರವರ್ಸಿ ಕ್ಯಾರೆಕ್ಟರ್‌ಗಳನ್ನು ಪರಿಚಯಿಸಿ ಮನರಂಜನೆ ನೀಡುತ್ತಾ ಬಂದಿದೆ. ಇದೀಗ ಬಿಗ್‌ಬಾಸ್‌ ಶೋವೊಂದಕ್ಕೆ ಸಲಿಂಗಿ ಜೋಡಿಯೊಂದು ಎಂಟ್ರಿ ಕೊಟ್ಟಿದೆ.

ಆದಿಲಾ ನಸ್ರೀನ್ ಮತ್ತು ಫಾತಿಮಾ ನೂರಾ

ನವದೆಹಲಿ: ಭಾರತೀಯ ಟೆಲಿವಿಷನ್ ರಿಯಾಲಿಟಿ ಶೋಗಳಲ್ಲಿ ಬಿಗ್‌ಬಾಸ್ ಅತೀ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಸುಮಾರು 7 ಭಾರತೀಯ ಭಾಷೆಗಳಲ್ಲಿ ಈ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದು ಇದಕ್ಕೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆೆ. ಪ್ರತೀ ಸೀಸನ್‌ನಲ್ಲಿಯೂ ಸೆಲೆಬ್ರಿಟಿಗಳು, ಕಾಂಟ್ರವರ್ಸಿ ಕ್ಯಾರೆಕ್ಟರ್‌ಗಳನ್ನು ಪರಿಚಯಿಸಿ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಜನರಿಗೆ ಮನೋರಂಜನೆ ನೀಡುತ್ತಾ ಬರಲಾಗಿದೆ‌. ಅಂತೆಯೇ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಿಗ್‌ಬಾಸ್‌ ಸೀಸನ್ 7 (Biggboss season 7) ಈಗಾಗಲೇ ಆರಂಭವಾಗಿದೆ. ಇದೇ ಸೀಸನ್ ಗೆ ತಮ್ಮ ಪ್ರೇಮಕಥೆಯ ಮೂಲಕ ಇಡೀ ದೇಶದ ಗಮನ ಸೆಳೆದ ಸಲಿಂಗಿ ಜೋಡಿಯೊಂದು ಸ್ಪರ್ಧೆಗೆ ಪ್ರವೇಶ ಮಾಡಿದ್ದಾರೆ. ಸದ್ಯ ಇವರ ಪ್ರೇಮಕಥೆಯ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೇರಳ ಮೂಲದ ಆದಿಲಾ ನಸ್ರೀನ್ ಮತ್ತು ಫಾತಿಮಾ ನೂರಾ ಅವರು ಈ ಬಾರಿ ಮಲಯಾಳಂ ಬಿಗ್ ಬಾಸ್ ಸೀಸನ್ 7 ಗೆ ಗ್ರ್ಯಾಂಡ್ ಆಗಿ ಎಂಟ್ರಿ ನೀಡಿದ್ದಾರೆ. ಇವರಿಬ್ಬರು ಸಲಿಂಗಿ ಜೋಡಿಯಾಗಿದ್ದು ತಮ್ಮ ಪ್ರೀತಿಗಾಗಿ ಇಡೀ ಜಗತ್ತನ್ನೇ ಎದುರಿಸಿದ್ದಾರೆ, ಕಷ್ಟದ ದಿನಗಳನ್ನು ಜೊತೆಯಾಗಿ ಕಳೆದಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದು ಈ ವಿಚಾರ ತಿಳಿದು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಆದಿಲಾ ನಸ್ರೀನ್ ಮತ್ತು ಫಾತಿಮಾ ನೂರಾ ಅವರು ಸೌದಿ ಅರೇಬಿಯಾದಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾಗ ಒಬ್ಬರಿಗೊಬ್ಬರು ಪರಿಚಯವಾಗಿದ್ದರಂತೆ‌. ಬಳಿಕ ಸ್ನೇಹಿತರಾದರು, ಇದೇ ಸ್ನೇಹವು ನಂತರ ಪ್ರೀತಿಯಾಗಿ ಬದಲಾಯಿತಂತೆ. ಅನಂತರ ಇವರ ಪ್ರೀತಿ ವಿಚಾರ ಕುಟುಂಬಕ್ಕೂ ತಿಳಿದಿದ್ದು, ಮನೆಯವರು ಈ ಪ್ರೀತಿಯನ್ನು ವಿರೋಧಿಸಿದ್ದಾರೆ. ಇದನ್ನು ನಿಲ್ಲಿಸಲು ಕುಟುಂಬದ ಒತ್ತಡವು ಬಂದಿತು. ಹೀಗಾಗಿ ಮನೆ ಬಿಟ್ಟು ಹೊರಹೋಗಲು ನಿರ್ಧರಿಸಿದರು. ಹಾಗಿದ್ದರೂ ಅವರ ಕುಟುಂಬ ಈ ಪ್ರೀತಿಗೆ ಸಮ್ಮತಿನೀಡಲಿಲ್ಲ. ಈ ಮೂಲಕ ಅವರ ಕುಟುಂಬದವರೇ ಆದಿಲಾ ಮತ್ತು ಫಾತಿಮಾ ಅವರನ್ನು ಬೇರ್ಪಡಿಸಿದ್ದಾರೆ ಎಂಬುದನ್ನು ಬಿಗ್ ಬಾಸ್ ಶೋ ನಲ್ಲಿ ಇಬ್ಬರು ಸ್ಪರ್ಧಿಗಳು ಕೂಡ ಹೇಳಿಕೊಂಡಿದ್ದಾರೆ.

ಇದನ್ನು ಓದಿ:Coolie Movie: ಅಂದುಕೊಂಡ ದಿನಕ್ಕೆ ರಿಲೀಸ್‌ ಆಗಲ್ವಾ ರಜನಿಕಾಂತ್‌ ನಟನೆಯ ‘ಕೂಲಿ’ ಚಿತ್ರ? ಏನಿದು ಕೃತಿಚೌರ್ಯ ಆರೋಪ?

ಹೀಗಾಗಿ ಅವರಿಬ್ಬರೂ ಕೇರಳ ಹೈಕೋರ್ಟ್ ಮೊರೆ ಹೋಗಿ 'ಹೇಬಿಯಸ್ ಕಾರ್ಪಸ್' ಅರ್ಜಿಯನ್ನು ಸಲ್ಲಿಸಿದ್ದಾರೆ. ಇಚ್ಛೆಗೆ ವಿರುದ್ಧವಾಗಿ ಕುಟುಂಬದವರು ಗೃಹ ಬಂಧನ ಮಾಡಿದ್ದಾರೆ ಎಂದು ಆರೋಪಿಸಿದರು. ಹೈಕೋರ್ಟ್ ಇಬ್ಬರೊಂದಿಗೂ ಸಂವಾದ ನಡೆಸಿ ಬಳಿಕ ಅವರ ಪರವಾಗಿ ಐತಿಹಾಸಿಕ ತೀರ್ಪು ನೀಡಿತು. ನ್ಯಾಯಾಲಯವು ಅವರಿಗೆ ಒಟ್ಟಿಗೆ ವಾಸಿಸಲು ಅವಕಾಶ ನೀಡಿತು.

ನ್ಯಾಯಾಲಯದ ತೀರ್ಪು ಅವರ ಪರವಾಗಿ ಬಂದಿದ್ದರೂ ಕೂಡ ಅವರು ಖುಷಿಯಲ್ಲಿ ಜೀವನ ನಡೆಸಲು ಆಗಿರಲಿಲ್ಲವಂತೆ. ಈ ತೀರ್ಪಿನ ವಿಚಾರ ಇಡೀ ದೇಶಕ್ಕೆ ದೊಡ್ಡ ಸುದ್ದಿಯಾಗಿದ್ದ ಕಾರಣ ಇವರಿಬ್ಬರು ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಟ್ರೋಲಿಂಗ್ ಅನ್ನು ಕೂಡ ಎದುರಿಸ ಬೇಕಾಗಿತ್ತಂತೆ. ಆದರೆ ಅವರು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಒಬ್ಬರನ್ನೊಬ್ಬರು ಅನುಸರಿಸಿ ಕೊಂಡು ಜೊತೆಗೆ ಜೀವನ ಸಾಗಿಸುತ್ತಿರುವುದಾಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಇವರಿ ಬ್ಬರು ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದು ಲಕ್ಷಾಂತರ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಸದ್ಯ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅವರ ಪ್ರೇಮಕಥೆಯ ವಿಚಾರಗಳು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.