ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nora Fatehi: ಶೂಟಿಂಗ್ ಸೆಟ್‌ನ ಹೊಸ ಫೋಟೊ ಶೇರ್ ಮಾಡಿದ ನೋರಾ ಫತೇಹಿ; ಲುಕ್ ನೋಡಿ ಫ್ಯಾನ್ಸ್ ಫಿದಾ

Nora Fatehi Look: ನೋರಾ ಅವರ ಆಲ್ಬಂ ಸಾಂಗ್ ಇತ್ತೀಚೆಗಷ್ಟೇ ಯೂಟ್ಯೂಬ್‌ನಲ್ಲಿ ಬಿಡುಗಡೆ ಯಾಗಿದೆ. ಈ ವಿಡಿಯೊದಲ್ಲಿ ನಟಿ ನೋರಾ ಫತೇಹಿ ತಮ್ಮ ಸೆಕ್ಸಿ ಲುಕ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಇದೀಗ ಅವರು ಇದೇ ಸಾಂಗ್ ಚಿತ್ರೀಕರಣದ ವೇಳೆಯಲ್ಲಿ ತೆಗೆಸಿಕೊಂಡಿದ್ದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Nora Fatehi

ಮುಂಬೈ: ಕೆನಡಿಯನ್ ಮೂಲದ ನೋರಾ ಫತೇಹಿ (Nora Fatehi) ತಮ್ಮ ಬೋಲ್ಡ್‌ ಲುಕ್‌ ಮತ್ತು ಡ್ಯಾನ್ಸ್ ಮೂಲಕ ಜನಪ್ರಿಯತೆ ಪಡೆದಿದ್ದಾರೆ. 'ರೋರ್: ಟೈಗರ್ಸ್ ಆಫ್ ದಿ ಸುಂದರಬನ್ಸ್' ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಅವರು ನಂತರ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರಗಂಕ್ಕೂ ಕಾಲಿಟ್ಟಿದ್ದಾರೆ. ʼಬಾಹುಬಲಿʼ, ʼಕಿಕ್ 2ʼ, ʼಟೆಂಪರ್ʼ ಸಿನಿಮಾದಲ್ಲಿ ನಟಿಸಿದ್ದ ನೋರಾ ಆಲ್ಬಂ ಸಾಂಗ್ ಮೂಲಕವು ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ನೋರಾ ಸೊಂಟ ಬಳುಕಿಸಿದ 'ಓ ಮಾಮಾ ಟೆಟೆಮಾ' ಆಲ್ಬಂ ಸಾಂಗ್ ಈಗಾಗಲೇ ಬಿಡುಗಡೆಯಾಗಿದ್ದು, ಹಾಡಿನ ಉತ್ಸಾಹಭರಿತ ಬೀಟ್ಸ್ ಮತ್ತು ಡ್ಯಾನ್ಸ್ ಅದ್ಭುತವಾಗಿ ಮೂಡಿ ಬಂದಿದೆ. ಇತ್ತೀಚೆಗಷ್ಟೆ ಅವರು ಶೂಟಿಂಗ್ ಸೆಟ್‌ನಲ್ಲಿದ್ದ ಅಪರೂಪದ ಫೋಟೊ ಹಂಚಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಫೋಟೊಗಳು ಬಹಳ ಬೋಲ್ಡ್ ಆಗಿದ್ದು ಇದನ್ನು ಕಂಡ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ನೋರಾ ಅವರ ಆಲ್ಬಂ ಸಾಂಗ್ ಇತ್ತೀಚೆಗಷ್ಟೇ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಈ ವಿಡಿಯೊದಲ್ಲಿ ನೋರಾ ಫತೇಹಿ ತಮ್ಮ ಸೆಕ್ಸಿ ಲುಕ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದಿದ್ದಾರೆ. ಇದೀಗ ಅವರು ಇದೇ ಸಾಂಗ್ ಚಿತ್ರೀಕರಣದ ವೇಳೆಯಲ್ಲಿ ತೆಗೆಸಿಕೊಂಡಿದ್ದ ಫೋಟೊಗಳನ್ನು ನೋರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಡಿಫರೆಂಟ್ ಕಾಸ್ಟ್ಯೂಮ್‌ ಹಾಗೂ ಮೇಕಪ್ ಲುಕ್‌ನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.



ವೈರಲ್ ಆದ ಫೋಟೊದಲ್ಲಿ ನಟಿ ನೋರಾ ಬ್ರೌನ್ ಕಲರ್ ಕ್ರಾಪ್ ಟಾಪ್ ಧರಿಸಿದ್ದು ಟೈನಿ ಸ್ಕರ್ಟ್‌ನಿಂದಾಗಿ ಸಂಪೂರ್ಣ ವಿಭಿನ್ನವಾಗಿ ಕಂಡಿದ್ದಾರೆ. ಸಿಂಪಲ್ ಮೇಕಪ್ ಹಾಗೂ ಕರ್ಲಿ ಹೇರ್ ಸ್ಟೈಲ್‌ನಿಂದ ಬಾರ್ಬಿ ಡಾಲ್‌ನಂತೆ ತುಂಬಾ ಸೆಕ್ಸಿಯಾಗಿ ನೋರಾ ಕಂಗೊಳಿಸಿದ್ದಾರೆ. ಪಾರ್ಟಿ ವೇರ್‌ನಂತೆ ಅವರು ರೆಡಿಯಾಗಿದ್ದು, ಈ ಡ್ರೆಸ್ ಆಲ್ಬಂ ಸಾಂಗ್‌ಗೆ ಮೆರುಗು ನೀಡಿದಂತಿದೆ.

ಇದನ್ನು ಓದಿ:Kantara Chapter 1 Movie: ಬಿಡುಗಡೆಗೆ ಮೊದಲೇ ರಿಷಬ್‌ ಶೆಟ್ಟಿಯ ʼಕಾಂತಾರ ಚಾಪ್ಟರ್‌ 1ʼ ಸೂಪರ್‌ ಹಿಟ್‌; ತೆಲುಗು ರಾಜ್ಯಗಳಲ್ಲಿ ಚಿತ್ರದ ಹಕ್ಕು ದಾಖಲೆಯ ಮೊತ್ತಕ್ಕೆ ಸೇಲ್‌?

ಇದರೊಂದಿಗೆ ಗೋಲ್ಡನ್ ಕಲರ್ ಹೊಂದಿದ್ದ ಟ್ರೆಡಿಷನಲ್ ಟಚ್ ಇರುವ ಕ್ರಾಪ್ ಟಾಪ್ ಹಾಗೂ ಚೈನ್ ವಿನ್ಯಾಸದ ಸ್ಕರ್ಟ್ ಅನ್ನು ಇವರು ಧರಿಸಿದ್ದಾರೆ. ಇದರಲ್ಲಿ ನೋರಾ ಸಖತ್ ಬೋಲ್ಡ್ ಆಗಿ ಕಂಡಿದ್ದಾರೆ. ವಿಭಿನ್ನ ಹೇರ್ ಸ್ಟೈಲ್‌ನಿಂದಾಗಿ ಈ ಡ್ರೆಸ್ ಹೈಲೈಟ್ ಆಗಿ ಕಂಡಂತಿದೆ. ನ್ಯಾಚುರಲ್ ಮೇಕಪ್‌ ನಿಂದ ಇವರು ಹೆಚ್ಚು ಗ್ಲೋವಿಂಗ್ ಆಗಿ ಕಂಡಿದ್ದು ತಮ್ಮ ಡ್ರೆಸ್‌ಗೆ ಹೊಂದುವ ಲೇಯರ್ಡ್ ಜುವೆಲ್ಲರಿ ಕೂಡ ತೊಟ್ಟಿದ್ದಾರೆ.

'ಓ ಮಾಮಾ ಟೆಟೆಮಾ'ವನ್ನು ಬೋಸ್ಕೊ ಲೆಸ್ಲಿ ಮಾರ್ಟಿಸ್ ನಿರ್ದೇಶಿಸುವ ಜತೆಗೆ ನೃತ್ಯ ಸಂಯೋಜಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟುಮಾಡಿದೆ. ಈ ಸಾಂಗ್‌ನಲ್ಲಿ ತಾಂಜೇನಿಯಾದ ಖ್ಯಾತ ಗಾಯಕ ರೇವಾನಿ ಜತೆಗೆ ನಟಿ ನೋರಾ ನೃತ್ಯ ಮಾಡಿದ್ದಾರೆ. ಪಾರ್ಟಿ ಥೀಮ್‌ನಲ್ಲಿ ಈ ಹಾಡು ಮೂಡಿ ಬಂದಿದೆ.