ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pariniti Chopra: ಗುಡ್‌ ನ್ಯೂಸ್‌ ಕೊಟ್ಟ ನಟಿ ಪರಿಣಿತಿ ಚೋಪ್ರಾ; ಅಪ್ಪನಾಗುತ್ತಿರುವ ಆಮ್‌ ಆದ್ಮಿ ಸಂಸದ

ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್‌ ಆದ್ಮಿ ಸಂಸದ ರಾಘವ್‌ ಚಡ್ಡಾ (Raghav Chadda) ದಂಪತಿ ಗುಡ್‌ ನ್ಯೂಸ್‌ ನೀಡಿದ್ದಾರೆ. ಹೌದು ಚಡ್ಡಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಾಘವ್‌ ಹಾಗೂ ಪರಿಣಿತಿ ಘೋಷಣೆ ಮಾಡಿದ್ದಾರೆ.

ಮುಂಬೈ: ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ (Pariniti Chopra) ಮದುವೆಯಾಗಿ ಒಂದೂವರೆ ವರ್ಷ ಕಳೆದಿದೆ. 2023ರ ಸೆಪ್ಟೆಂಬರ್​ನಲ್ಲಿ ನಟಿ ಆಮ್​ ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ವಿವಾಹವಾಗಿದ್ದರು. ಗುಡ್​ನ್ಯೂಸ್​ ಇಲ್ವಾ ಎಂದು ನೆಟ್ಟಿಗರು ಪದೇ ಪದೇ ಅವರನ್ನು ಪ್ರಶ್ನೆ ಮಾಡುತ್ತಿದ್ದರು. ಇದೀಗ ಕೊನೆಗೂ ನಟಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಹೌದು ಚಡ್ಡಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಾಘವ್‌ ಹಾಗೂ ಪರಿಣಿತಿ ಘೋಷಣೆ ಮಾಡಿದ್ದಾರೆ. ಅವರು ಕೈಕೈ ಹಿಡಿದು ನಡೆಯುತ್ತಿರುವ ಮುದ್ದಾದ ವೀಡಿಯೊವನ್ನು ಸಹ ಹಂಚಿಕೊಂಡರು, ಅದರ ಶೀರ್ಷಿಕೆ " ನಮ್ಮ ಪುಟ್ಟ ವಿಶ್ವವು ದಾರಿಯಲ್ಲಿದೆ. ಅಳತೆ ಮೀರಿ ಆಶೀರ್ವಾದ ಪಡೆದಿದೆ ಎಂಬ ಶೀರ್ಷಿಕೆಯಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಚೋಪ್ರಾ ಈ ಸುದ್ದಿಯನ್ನು ರಿವೀಲ್‌ ಮಾಡುತ್ತಲೇ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸೋನಮ್ ಕಪೂರ್, ಭೂಮಿ ಪೆಡ್ನೇಕರ್, ಹುಮಾ ಖುರೇಷಿ ಮತ್ತು ನೇಹಾ ಧೂಪಿಯಾ ಸೇರಿದಂತೆ ಹಲವರು ಶುಭಕೋರಿದ್ದಾರೆ. ದಿ ಕಪಿಲ್​ ಶರ್ಮಾ ಷೋನಲ್ಲಿ ಮಗುವಿನ ವಿಷಯ ಬಂದಾಗ, ಶೀಘ್ರದಲ್ಲಿಯೇ ಗುಡ್​ನ್ಯೂಸ್​ ಕೊಡುತ್ತೇವೆ ಎಂದು ರಾಘವ್​ ಚಡ್ಡಾ ಹೇಳಿದರು. ಇದೀಗ ಗುಡ್‌ ನ್ಯೂಸ್‌ ಹಂಚಿಕೊಂಡಿದ್ದಾರೆ.

ಕೆಲ ತಿಂಗಳ ಹಿಂದೆ ನಟಿ ಅಮ್ಮನಾಗುವ ವಿಷಯದ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ತಮಗೆ ಮಗುವನ್ನು ಹೆರುವುದಕ್ಕಿಂತಲೂ ದತ್ತು ತೆಗೆದುಕೊಳ್ಳಬೇಕು ಎನ್ನುವ ಆಸೆಯಿದೆ ಎಂದು ಹೇಳಿದ್ದರು. ಒಂದಲ್ಲ, ಎರಡಲ್ಲ ಅನೇಕ ಮಕ್ಕಳನ್ನು ದತ್ತಕಕ್ಕೆ ಪಡೆಯುವ ಆಸೆಯನ್ನು ನಟಿ ಬಿಚ್ಚಿಟ್ಟಿದ್ದರು. ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವೆ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ನನಗೆ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟ. ನನಗೆ ಸಾಕಷ್ಟು ಮಕ್ಕಳು ಬೇಕು. ನನಗೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಅದಕ್ಕಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Priyanka Chopra: ಮೆಟ್‌ಗಾಲ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್‌ ಫುಲ್‌ ಮಿಂಚಿಂಗ್‌! ವಿಡಿಯೊ ‌ಇಲ್ಲಿದೆ

ಈ ಹಿಂದೆ ಪರಿಣಿತಿ ಗರ್ಭಿಣಿ ಎನ್ನುವ ಸುದ್ದಿ ಕುರಿತು ಅವರು ಕಿಡಿ ಕಾರಿದ್ದರು. ತಾವು ಧರಿಸಿರುವ ಸಡಿಲವಾಗಿರುವ ಬಟ್ಟೆ ಎನ್ನುವ ಹಿನ್ನೆಲೆಯಲ್ಲಿ ನಟಿಯರು ಜನರ ಬಾಯಲ್ಲಿ ಗರ್ಭಿಣಿ ಯಾವಾಗ ಆಗುತ್ತಾರೆ ಎಂಬ ಬಗ್ಗೆ ಮಾರ್ಮಿಕವಾಗಿ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಸ್ವತಃ ಅವರೇ ಮಗುವಿನ ವಿಷಯವನ್ನು ರಿವೀಲ್‌ ಮಾಡಿದ್ದಾರೆ.