ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Protima Bedi: ಡ್ಯಾನ್ಸರ್‌, ನಟಿ ಪ್ರೊತಿಮಾ ಬೇಡಿ ನಿಧನದ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ಪುತ್ರಿ ಪೂಜಾ ಬೇಡಿ

ನಟಿ ಪೂಜಾ ಬೇಡಿ ಅವರ ತಾಯಿ ಪ್ರೊತಿಮಾ ಕೇವಲ 49ನೇ ವಯಸ್ಸಿಗೆ ಮರಣ ಹೊಂದಿದ್ದರು. ಅವರ ಮರಣದ 27ವರ್ಷದ ಬಳಿಕ ಅವರ ಪುತ್ರಿ ಪೂಜಾ ತಮ್ಮ ತಾಯಿಯ ನಿಧನದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ತಮ್ಮ ತಾಯಿಯು ಸ್ವ-ಇಚ್ಛೆಯಿಂದಲೇ ಮರಣ ಹೊಂದಿರುವುದಾಗಿ ಹೇಳಿದ್ದಾರೆ.

Protima

ಮುಂಬೈ: ಭಾರತೀಯ ನಟಿ, ದೂರದರ್ಶನ ಟಾಕ್ ಶೋ ನಿರೂಪಕಿ ಪೂಜಾ ಬೇಡಿ (Pooja Bedi) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ʼಝಲಕ್ ದಿಕ್ಲಾಜಾʼ, ʼಫಿಯರ್ ಫ್ಯಾಕ್ಟರಿʼ, ʼನಾಚ್ ಬಲಿಯೇʼ, ʼಖತ್ರೋಂ ಕೆ ಖಿಲಾಡಿʼ ಹಾಗೂ ʼಬಿಗ್ ಬಾಸ್ʼ ಮೂಲಕ ಕಿರುತೆರೆ ಪ್ರೇಕ್ಷಕರ ಗಮನವನ್ನೂ ಸೆಳೆದಿದ್ದಾರೆ. ಇವರ ತಾಯಿ ಪ್ರೊತಿಮಾ ಬೇಡಿ (Protima Bedi) ಭಾರತೀಯ ಶಾಸ್ತ್ರೀಯ ನೃತ್ಯದ ಮೂಲಕ ಜನಪ್ರಿಯರಾಗಿ ಬಳಿಕ ಸಿನಿಮಾ ರಂಗದಲ್ಲಿ ಮಿಂಚಿದರು. ಅಲ್ಲದೆ ಭಾರತದಲ್ಲಿ ಏಡ್ಸ್ ನಿರ್ಮೂಲನೆ ಹಾಗೂ ಜಾಗೃತಿಯ ಆದೋಂಲನದಲ್ಲಿ ಪ್ರಧಾನ ಪಾತ್ರ ವಹಿಸಿ ದರು‌. ಆದರೆ ಪ್ರೊತಿಮಾ ಕೇವಲ 49ನೇ ವಯಸ್ಸಿಗೆ ಮರಣ ಹೊಂದಿದ್ದರು. ಅವರ ಮರಣದ 27 ವರ್ಷಗಳ ಬಳಿಕ ಪುತ್ರಿ ಪೂಜಾ ತಮ್ಮ ತಾಯಿಯ ನಿಧನದ ವಿಚಾರದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ತಮ್ಮ ತಾಯಿಯು ಸ್ವ-ಇಚ್ಛೆಯಿಂದಲೇ ಮರಣ ಹೊಂದಿರುವುದಾಗಿ ವಿವರಿಸಿದ್ದಾರೆ.

1998ರಲ್ಲಿ ಪ್ರೊತಿಮಾ ಬೇಡಿ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಾನಸ ಸರೋವರಕ್ಕೆ ತೆರಳಿದ್ದರು‌. ಈ ಯಾತ್ರೆಯಲ್ಲಿ ಅವರು ಇರುವಾಗಲೇ ಅಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಭೂ ಕುಸಿತವಾದ ಕಾರಣ ಅನೇಕ ಜನರು ಮರಣ ಹೊಂದಿದ್ದರು. ಅವರಲ್ಲಿ ಪ್ರೊತಿಮಾ ಕೂಡ ಇದ್ದಿದ್ದರು ಎಂದು ವರದಿ ಹೇಳಿತ್ತು. ಇದಾಗಿ ಬರೋಬ್ಬರಿ 27 ವರ್ಷ ಕಳೆದಿದ್ದು ಇದೀಗ ಅವರ ಪುತ್ರಿ ಪ್ರೊತಿಮಾ ಸಾವಿನ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇತ್ತೀಚಿಗಷ್ಟೇ ಸಂದರ್ಶನದಲ್ಲಿ ಮಾತನಾಡಿದ ಪೂಜಾ, ʼʼತಾಯಿಯು ಪ್ರಕೃತಿಯೊಂದಿಗೆ ಒಂದಾಗುವ ಮೂಲಕ ನಿಧನ ಹೊಂದಲು ಬಯಸಿದ್ದರು. ಅವರಿಗೆ ತಮ್ಮ ಸಾವು ಸಂಭವಿಸುತ್ತದೆ ಎಂದು ಮೊದಲೇ ತಿಳಿದಿತ್ತು‌. ಹೀಗಾಗಿ ಸಾಯುವ ಮುನ್ನ ನನಗೆ ಬೇಕಾದ ಎಲ್ಲ ಸೌಲಭ್ಯ ಸೌಕರ್ಯ ಮಾಡಿಟ್ಟೆ ಯಾತ್ರೆ ಕೈಗೊಂಡರುʼʼ ಎಂದು ತಿಳಿಸಿದ್ದಾರೆ.

ಬಳಿಕ ಮಾತನಾಡಿ, ʼʼನನ್ನ ತಾಯಿ ಅವರು ಬಯಸಿದ ರೀತಿಯಲ್ಲಿ ಬದುಕಿದರು ಮತ್ತು ಬಯಸಿದ ರೀತಿಯಲ್ಲಿ ಮರಣ ಹೊಂದಿದರು. ಆಕೆ ತನ್ನ ದೇಹಕ್ಕೆ ಅಗ್ನಿ ಸ್ಪರ್ಶವಾಗಿ ಬೂದಿ ಗಂಗಾ ನದಿಗೆ ಸಮರ್ಪಣೆಯಾಗುವುದನ್ನು ಎಂದಿಗೂ ಬಯಸಿರಲಿಲ್ಲ. ಪ್ರಕೃತಿಯಲ್ಲಿ ಲೀನವಾಗಿ ಪಂಚಭೂತದಲ್ಲಿ ಲೀನವಾಗಬೇಕು ಎಂದೇ ಹೇಳುತ್ತಿದ್ದರು. ಹೀಗಾಗಿ ಪ್ರಕೃತಿಯೊಂದಿಗೆ ಒಂದಾಗಲು ಇಂತಹ ಸಾವುಗಳೇ ಬರಬೇಕು ಎಂಬಂತೆ ಕೂಡ ನನ್ನೊಡನೆ ಮಾತನಾಡುತ್ತಿದ್ದರು. ಅವರು ಬಯಸಿದ ಸಾವು ಅವರಿಗೆ ಸಿಕ್ಕಿದೆ. ಹೀಗಾಗಿ ಅವರ ಮೃತದೇಹ ಕೂಡ ನಮಗೆ ಸಿಗದಂತಾಯ್ತುʼʼ ಎಂದು ಪೋಜಾ ವಿವರಿಸಿದ್ದಾರೆ.

ʼʼನನ್ನ ತಾಯಿ ಮರಣ ಹೊಂದುವ ಮೊದಲೇ ನನ್ನ ಬಳಿಗೆ ಬಂದಿದ್ದರು. ಸಾವಿನ ಬಳಿಕ ಆಸ್ತಿ, ಇತರ ವಿಚಾರದ ಬಗ್ಗೆ ಮೊದಲೇ ಉಯಿಲು ಬರೆದಿದ್ದರು. ತನ್ನ ಆಭರಣಗಳನ್ನು ಹಾಗೂ ಇತರ ಎಲ್ಲ ದಾಖಲೆಗಳನ್ನು ನನಗೆ ಕೊಟ್ಟಿದ್ದರು. ಯಾಕೆ ಎಂದು ನಾನು ಪ್ರಶ್ನಿಸಿದರೆ ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ. ನಿನಗೆ ಗೊತ್ತಿಲ್ಲ‌ಎಂದು ಹೇಳಿದರು. ಅವಳು ತನ್ನ ಬಳಿ ಇದ್ದ ಎಲ್ಲವನ್ನೂ ನನಗೆ ಕೊಟ್ಟಳು. ಅವಳು, ಸಿದ್ಧಾರ್ಥ (ಪೂಜಾಳ ಸಹೋದರ) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚು ಚಿಂತಿಸಬೇಡ‌. ನಾನು ನೃತ್ಯಗ್ರಾಮವನ್ನು ಲಿನ್ ಫರ್ನಾಂಡಿಸ್‌ಗೆ ಹಸ್ತಾಂತರಿಸಿದ್ದೇನೆ ಎಂದು ತನ್ನ ತಾಯಿ ಹೇಳಿದ್ದಾರೆʼʼ ಪೂಜಾ ತಿಳಿಸಿದ್ದಾರೆ.

ಇದನ್ನು ಓದಿ:Nimbiya Banada Myaga Page 1 Movie: ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದುಕೊಂಡ ʼನಿಂಬಿಯಾ ಬನಾದ ಮ್ಯಾಗ ಪೇಜ್ 1ʼ ಚಿತ್ರ

ಪ್ರೊತಿಮಾ ಮೃತಪಡುವ ಮೊದಲು ಹುಟ್ಟಿನಿಂದ ಹಿಡಿದು, ಬಾಲ್ಯ, ಮದುವೆ, ಮಕ್ಕಳು, ನೃತ್ಯ ಪ್ರಯಾಣ ಹಾಗೂ ಈ ಮೊದಲು ಎಲ್ಲಿದ್ದರು ಎಂಬುದರ ಬಗ್ಗೆ 12 ಪುಟಗಳ ಪತ್ರವನ್ನು ಬರೆದಿದ್ದರು. ʼʼನಾನು ಕುಲುವಿನಲ್ಲಿದ್ದೇನೆ. ಕುಲು ಎಂದರೆ ದೇವರ ಕಣಿವೆ, ಇಲ್ಲಿರುವ ಎಲ್ಲ ದೇವರು ನನ್ನ ಶಾಶ್ವತ ಕೃತಜ್ಞತೆಯನ್ನು ತಿಳಿದುಕೊಳ್ಳಲಿ. ತುಂಬಾ ತುಂಬಾ ಸಂತೋಷವಾಗಿದ್ದೇನೆ'ʼ ಎಂದು ತಮ್ಮ ತಾಯಿ ಹೇಳಿರುವುದಾಗಿ ಪೂಜಾ ಬೇಡಿ ಸಂದರ್ಶನದಲ್ಲಿ ಹೇಳಿದ್ದಾರೆ.