ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Diljit Dosanjh: 'ಕಾಂತಾರ' ಚಿತ್ರ ವೀಕ್ಷಿಸಲು ಕಾನ್ಸರ್ಟ್ ರದ್ದುಗೊಳಿಸಿದ್ದ ದಿಲ್ಜಿತ್ ದೋಸಾಂಜ್; ಅಪರೂಪದ ವಿಚಾರ ಬಹಿರಂಗಪಡಿಸಿದ ರಿಷಬ್‌ ಶೆಟ್ಟಿ

Rishab Shetty: ʼಕಾಂತಾರ ಚಾಪ್ಟರ್ 1ʼ ಚಿತ್ರದ ʼರೆಬೆಲ್‌ʼ ಹಾಡಿಗೆ ನಟ, ಗಾಯಕ ದಿಲ್ಜಿತ್ ದೋಸಾಂಜ್ ಧ್ವನಿ ನೀಡಿದ್ದು, ಟ್ರೆಂಡಿಂಗ್‌ನಲ್ಲಿದೆ. ರಿಲೀಸ್‌ಗೆ ಮೊದಲೇ ರಿಲೀಸ್‌ ಆದ ಈ ಹಾಡು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಸದ್ಯ ನಟ ರಿಷಬ್‌ ಶೆಟ್ಟಿ ಗಾಯಕ ದಿಲ್ಜಿತ್ ದೋಸಾಂಜ್ ಜತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

Rishab Shetty

ಬೆಂಗಳೂರು: 'ಕಾಂತಾರ ಚಾಪ್ಟರ್ 1' (Kantara: Chapter 1) ಸಿನಿಮಾ ಭರ್ಜರಿ ನಿರೀಕ್ಷೆಯ ನಡುವೆ ರಿಲೀಸ್ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ರಿಷಬ್‌ ಶೆಟ್ಟಿ (Rishab Shetty) ನಟಿಸಿ ನಿರ್ದೇಶಿಸಿರುವ ಸಿನಿಮಾಕ್ಕೆ ಪ್ರೇಕ್ಷಕರಿಂದ ಮತ್ತು ಸಿನಿಮಾ ಸೆಲೆಬ್ರಿಟಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಕಥೆ, ಫೈಟಿಂಗ್, ಸಂಗೀತ, ಕ್ಯಾಮರಾ ವರ್ಕ್‌ ಎಲ್ಲವೂ ಅದ್ಭುತವಾಗಿದ್ದು ಪ್ರೇಕ್ಷಕರ ಮನಮುಟ್ಟುವಂತಿದೆ. ಈ ಚಿತ್ರದಲ್ಲಿ ರೆಬೆಲ್‌ ಹಿಂದಿ ಹಾಡಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕ, ನಟ ದಿಲ್ಜಿತ್ ದೋಸಾಂಜ್ ಧ್ವನಿ ನೀಡಿದ್ದಾರೆ. ಸದ್ಯ ನಟ ರಿಷಬ್‌ ಶೆಟ್ಟಿ ಅವರೊಂದಿಗೆ ದಿಲ್ಜಿತ್ ದೋಸಾಂಜ್ ಉತ್ತಮ ಒಡನಾಟ ಹೊಂದಿದ್ದಾರೆ. ಅವರೊಂದಿಗಿನ ಗೆಳೆತನದ ಬಗ್ಗೆ ರಿಷಬ್‌ ಮನಬಿಚ್ಚಿ ಮಾತನಾಡಿದ್ದಾರೆ.

ಗಾಯಕ ದಿಲ್ಜಿತ್ 2022ರಲ್ಲಿ ತೆರೆಕಂಡ ʼಕಾಂತಾರʼ ಸಿನಿಮಾದ ʼವರಾಹ ರೂಪಂʼ ಹಾಡಿಗೆ ಮನಸೋತಿದ್ದರು. ಅದನ್ನು ಕೇಳಿ ಸಂತೋಷದಿಂದ ಕಣ್ಣೀರು ಹಾಕಿದ್ದರು. ಇದೀಗ ಅವರಿಗೆ ʼಕಾಂತಾರ ಚಾಪ್ಟರ್ 1ʼನಲ್ಲಿ ಹಾಡುವ ಅವಕಾಶ ಸಿಕ್ಕಿದೆ. ʼಕಾಂತಾರʼಕ್ಕೆ ಸಂಗೀತ ಸಂಯೋಜಿಸಿದ್ದ ಬಿ. ಅಜನೀಶ್‌ ಲೋಕನಾಥ್‌ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಸದ್ಯ ದಿಲ್ಜಿತ್ ಹಾಡಿರುವ ರೆಬೆಲ್‌ ಹಾಡು ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಕಾಣುತ್ತಿದ್ದು, ಟ್ರಂಡಿಂಗ್‌ನಲ್ಲಿದೆ. ಸಂದರ್ಶನವೊಂದರಲ್ಲಿ ರಿಷಬ್‌ ಈ ಬಗ್ಗೆ ಮಾತನಾಡಿದ್ದಾರೆ.



ʼಕಾಂತಾರ ಚಾಪ್ಟರ್ 1ʼ ಸಿನಿಮಾದ ಅನೇಕ ಕುತೂಹಲಕಾರಿ ವಿಚಾರಗಳನ್ನು ರಿಷಬ್‌ ಶೆಟ್ಟಿ ಬಹಿರಂಗಪಡಿಸಿದ್ದಾರೆ‌. ʼʼನಮ್ಮ ಚಿತ್ರದ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರುವಾಗ ನಾನು ಕೊಚ್ಚಿಯಲ್ಲಿದ್ದೆ. ಆ ಸಮಯದಲ್ಲಿ, ನಮ್ಮ ಸಿನಿಮಾದಲ್ಲಿ ಬೇರೆ ಭಾಷೆಯ ಗಾಯಕನನ್ನು ಹಾಡಿಸಲು ಬಯಸಿದ್ದೆವು. ಆಗ ನನಗೆ ದಿಲ್ಜಿತ್ ಅವರ ನೆನಪಾಯಿತು. ಆದರೆ ಅವರ ಸಂಪರ್ಕ ಸಾಧಿಸಲು ಕಷ್ಟವಾಯ್ತುʼʼ ಎಂದು ರಿಷಬ್‌ ವಿವರಿಸಿದ್ದಾರೆ. ಮುಂದುವರಿದು, ʼʼಕಾಂತಾರ ಚಾಪ್ಟರ್ 1ʼ ಸಿನಿಮಾದ 'ರೆಬೆಲ್‌' ಹಾಡು ಹಾಡಲು ದಿಲ್ಜಿತ್ ಅವರೆ ಸೂಕ್ತ ವ್ಯಕ್ತಿ ಎಂದು ನಾನು ಭಾವಿಸಿದೆ. ನಮ್ಮ ಸಿನಿಮಾದ ನಿರ್ಮಾಪಕರೊಂದಿಗೆ ಮತ್ತು ಸಂಗೀತ ಸಂಯೋಜಕರೊಂದಿಗೆ ಕಾನ್ಫರೆನ್ಸ್ ಕರೆ ಮಾಡಿ ಈ ಬಗ್ಗೆ ಅಭಿಪ್ರಾಯ ತಿಳಿಸಿದೆ. ದಿಲ್ಜಿತ್ ಅವರ ಧ್ವನಿಯು ಟ್ರ್ಯಾಕ್‌ಗೆ ಸೂಕ್ತ ಆಯ್ಕೆಯಾಗಿದೆ ಎಂದು ನಾನು ಅವರಿಗೆ ಹೇಳಿದೆ. ಅವರೆಲ್ಲರಿಗೂ ಇದಕ್ಕೆ ಸಮ್ಮತಿಸಿದ್ದಾರೆʼʼ ಎಂದಿದ್ದಾರೆ.

ಇದನ್ನು ಓದಿ:Devara 2 Movie: ಜೂ. ಎನ್‌ಟಿಆರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್: 'ದೇವರʼ ಸೀಕ್ವೆಲ್ ಘೋಷಣೆ

ʼʼಬಳಿಕ ದಿಲ್ಜಿತ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಿದೆ‌. ಆಗ ನನಗೆ ಒಂದು ಅಚ್ಚರಿಯ ವಿಚಾರ ತಿಳಿಯಿತು. ದಿಲ್ಜಿತ್‌ಗೆ ನನ್ನ ಮತ್ತು ನನ್ನ ಸಿನಿಮಾದ ಬಗ್ಗೆ ತುಂಬ ಪ್ರೀತಿ ಇದೆ. ಅವರು ತಮ್ಮ ಇಡೀ ತಂಡದೊಂದಿಗೆ 'ಕಾಂತಾರ' ಸಿನಿಮಾವನ್ನು ಮರು ವೀಕ್ಷಿಸಲು ಶೋಗಳನ್ನೇ ರದ್ದುಗೊಳಿಸಿದ್ದರು" ಎಂದು ರಿಷಬ್ ಬಹಿರಂಗಪಡಿಸಿದ್ದಾರೆ. ʼʼದಿಲ್ಜಿತ್ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಡೀ ತಂಡವನ್ನು ಕರೆದುಕೊಂಡು ಹೋಗಿ ʼಕಾಂತಾರʼ ಸಿನಿಮಾವನ್ನು ವೀಕ್ಷಿಸಿದ್ದರು. ಆ ವಿಚಾರ ತಿಳಿದು ನನಗೆ ಖುಷಿಯಾಯಿತುʼʼ ಎಂದು ಹೇಳಿದ್ದಾರೆ.

ʼʼಅದಾದ ಬಳಿಕ ದಿಲ್ಜಿತ್ ನಮ್ಮೊಂದಿಗೆ ಮಾತುಕತೆ ನಡೆಸಿದರು. ವೈಆರ್‌ಎಫ್‌ಗೆ ಬಂದು ಹಾಡನ್ನು ರೆಕಾರ್ಡ್ ಮಾಡಿದರು. ರೆಕಾರ್ಡಿಂಗ್ ನಂತರ, 5 ನಿಮಿಷಗಳ ಕಾಲ ಆಪ್ತವಾಗಿ ಮಾತನಾಡಿದರು. ಅವರ ಹಾಡು 'ಕಾಂತಾರ' ಸಿನಿಮಾಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ. ದಿಲ್ಜಿತ್ ಅವರಂತಹ ಪ್ರತಿಭಾನ್ವಿತರ ಜತೆ ಕೆಲಸ ಮಾಡಿದ್ದು ಖುಷಿ ಇದೆʼʼ ಎಂದು ರಿಷಬ್‌ ಶೆಟ್ಟಿ ತಿಳಿಸಿದ್ದಾರೆ.