ಬೆಂಗಳೂರು: ರಿಷಬ್ ಶೆಟ್ಟಿ (Rishab Shetty) ಅಭಿನಯಿಸಿ, ನಿರ್ದೇಶನ ಮಾಡಿರುವಂತಹ ಬಹುನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ನೋಡಿದ ಹೆಚ್ಚಿನವರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.. ನಿನ್ನೆಯಷ್ಟೇ ಬೆಂಗಳೂರಿ ನಲ್ಲಿ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡದವರು ಸುದ್ದಿಗೋಷ್ಠಿ ಮಾಡಿದ್ದು ಈ ಚಿತ್ರದ ಬಗ್ಗೆ ಅನೇಕ ಇಂಟ್ರಸ್ಟಿಂಗ್ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಇದೇ ವೇಳೆ ರಿಷಬ್ ಶೆಟ್ಟಿ ಸಿನಿಮಾದ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಹಂತದ ಸವಾಲುಗಳು, ಸಿನಿಮಾಕ್ಕಾಗಿ ಯಾವ ರೀತಿ ರಿಸ್ಕ್ ಇತ್ತು, ತಮ್ಮ ಮೇಲೆ ದೈವದ ಕೃಪೆ ಹೇಗಿತ್ತು ಎಂದು ಹಲವು ವಿಚಾರಗಳ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.
'ಕಾಂತಾರ ಚಾಪ್ಟರ್ 1' ಚಿತ್ರಕ್ಕಾಗಿ ಇಡೀ ದೇಶದ ಸಿನಿ ಪ್ರಿಯರೇ ಕಾದು ಕುಳಿತಿದ್ದಾರೆ. ಹೀಗಾಗಿ ಅದಕ್ಕೆ ಸರಿಯಾದ ಪ್ರತಿಫಲವನ್ನು ನಾವು ನೀಡಬೇಕಾಗುತ್ತದೆ. ಕಳೆದ ಮೂರು ತಿಂಗಳಿನಿಂದ ಇಡೀ ಚಿತ್ರ ತಂಡ ಈ ಸಿನಿಮಾಕ್ಕಾಗಿ ಕೆಲಸ ಮಾಡಿದೆ. ಸಿನಿಮಾ ತಂಡವೂ ಬಹಳಷ್ಟು ಶ್ರಮ ಪಟ್ಟಿದ್ದಾರೆ. ಕಾಂತಾರ ಸೆಟ್ನಲ್ಲಿ ಹಾಗಾಯ್ತು, ಹೀಗಾಯ್ತು ಅಂತ ಸೋಷಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿತ್ತು. ಆದರೆ ಸಿನಿಮಾ ಸೆಟ್ ನಲ್ಲಿ ನಾನೇ ನಾಲ್ಕೈದು ಬಾರಿ ಹೋಗಿ ಬಿಡ್ತಿದ್ದೆ ಅಂತಹ ಸನ್ನಿವೇಶ ಬಂದಿತ್ತು. ಆದರೆ ಬದುಕಿ ಬಂದಿದ್ದೇನೆ. ದೈವ ನನ್ನ ಹಿಂದೆ ನಿಂತಿದೆ ಅನ್ನುವ ಸಾಕ್ಷಿ ನನಗಿದೆ.ಇಡೀ ಚಿತ್ರ ತಂಡದ ಪ್ರತಿಯೊಬ್ಬರಿಗೆ ದೈವವ ಆಶೀರ್ವಾದ ಇದೆ ಎನ್ನುವ ನಂಬಿಕೆ ಇದೆ. ನನ್ನ ಹೆಂಡ್ತಿ ಅದೆಷ್ಟು ಹರಕೆ ಹೊತ್ತಿದ್ದಾಳೋ.. ನಾನು ಶೂಟಿಂಗ್ ಹೋಗಿದಾಗಲೆಲ್ಲಾ ದೇವರ ಮುಂದೆ ಪ್ರಾರ್ಥನೆ ಮಾಡ್ತಿದ್ಲು ಎಂದು ವೇದಿಕೆ ಮೇಲೆಯೆ ರಿಷಬ್ ಭಾವುಕರಾಗಿದ್ದಾರೆ.
ಕಾಂತಾರ ಸಿನಿಮಾ 5 ವರ್ಷದ ದೊಡ್ಡ ಜರ್ನಿ, ತಾನೊಬ್ಬನಿಂದ ಈ ಚಿತ್ರ ಕಂಪ್ಲಿಟ್ ಆಗಿಲ್ಲ. ಈ ಸಿನಿಮಾಕ್ಕೆ ಈಡೀ ಚಿತ್ರ ತಂಡ ಶ್ರಮ ಪಟ್ಟಿದೆ. ಸಿನಿಮಾಕ್ಕಾಗಿ ಅಷ್ಟು ಅಡೆತಡೆಗಳು ಎದುರಿಸಿದ್ದೀವಿ. ನಾವ್ಯಾರೂ ಸರಿಯಾಗಿ ನಿದ್ದೆ ಮಾಡದೇ ಮೂರು ತಿಂಗಳಾಯ್ತು. ಒಂದು ಗಂಟೆ, ಎರಡು ಗಂಟೆ ನಿದ್ದೆ ಮಾಡಿರಬಹುದು. ಈ ಚಿತ್ರಕ್ಕಾಗಿ ಕೆಲಸ ಮಾಡಿರುವವರು ನನ್ನ ಸಿನಿಮಾ ಅಂತ ಮಾಡಿಲ್ಲ. ಎಲ್ಲರೂ ತಮ್ಮದೇ ಸಿನಿಮಾ ಅಂತ ಮಾಡಿದ್ದಾರೆ ಎಂದು ಸಿನಿಮಾ ತಂಡ ಬಗ್ಗೆ ಖುಷಿ ವ್ಯಕ್ತ ಪಡಿಸಿದ್ದಾರೆ.
ಇದನ್ನು ಓದಿ:Rishab shetty: ಐತಿಹಾಸಿಕ ಸಿನಿಮಾಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಾಯಕ
‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ಬಿಡುಗಡೆಯಾಗುತ್ತಿದ್ದು ಟ್ರೇಲರ್ ನೋಡಿದ ವೀಕ್ಷಕರು ಬಹಳಷ್ಟು ಎಕ್ಸೈಟ್ ಆಗಿದ್ದಾರೆ. ಹಲವು ಅದ್ಭುತ ಲೊಕೇಶನ್ಗಳಲ್ಲಿ ಸಿನಿಮಾದ ಶೂಟ್ ನಡೆದಿದ್ದು ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರೇ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿ ಜೀವ ತುಂಬಿದ್ದಾರೆ.