ನವದೆಹಲಿ: ನಟ ಶ್ರೀನಗರ್ ಕಿಟ್ಟಿ ಅಭಿನಯದ ಸಂಜುವೆಡ್ಸ್ ಗೀತಾ (Sanju Weds Geetha) ಸಿನಿಮಾ 2011ರಲ್ಲಿ ತೆರೆ ಕಂಡಿದ್ದು ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ರಮ್ಯಾ ಮತ್ತು ಶ್ರೀನಗರ್ ಕಿಟ್ಟಿ ಅವರ ಕಾಂಬಿನೇಶನ್ ನಲ್ಲಿ ವಿಭಿನ್ನವಾಗಿ ಮೂಡಿ ಬಂದ ಈ ಕಥೆ ಪ್ರೇಕ್ಷಕರ ಮನಗೆದ್ದಿತ್ತು. ಇದಾದ ಬಳಿಕ ಮತ್ತೆ ಸಂಜುವೆಡ್ಸ್ ಗೀತಾ ಸಿನಿಮಾದ ಭಾಗ 2ನ್ನು ತೆರೆ ಇದೇ ವರ್ಷದ ಜನವರಿಯಂದು ರಿಲೀಸ್ ಮಾಡಲಾಗಿದೆ. ನಟ ಶ್ರೀನಗರ್ ಕಿಟ್ಟಿ ಈ ಸಿನಿಮಾದ ನಾಯಕನಾಗಿ ನಟಿಸಿದ್ದರೆ, ಸ್ಯಾಂಡಲ್‌ವುಡ್ ಕ್ವೀನ್ ರಚಿತಾ ರಾಮ್ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ಭರ್ಜರಿ ಪ್ರಚಾರದೊಂದಿಗೆ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಂಜು ವೆಡ್ಸ್ ಗೀತಾ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಯಶಸ್ಸುಗಳಿಸಲಿಲ್ಲ.
ಅದರಲ್ಲಿಯೂ ಈ ಸಿನಿಮಾದ ಕಟ್ಟಿಂಗ್ ಸೀನ್ ಕೂಡ ಹಾಕಿ ರೀ ರಿಲೀಸ್ ಕೂಡ ಮಾಡಲಾಗಿತ್ತು. ಹಾಗಿದ್ದರೂ ಜನರಿಗೆ ಮಾತ್ರ ಈ ಸಿನಿಮಾ ರೀಚ್ ಆಗಲಿಲ್ಲ ಎನ್ನಬಹುದು. ಇದೀಗ ಇದೇ ಸಂಜು ವೆಡ್ಸ್ ಗೀತಾ ಪಾರ್ಟ್2 ಒಟಿಟಿಯಲ್ಲಿ ರಿಲೀಸ್ ಆಗಿದ್ದು ಥಿಯೇಟರ್ ನಲ್ಲಿ ಸಿನಿಮಾ ನೋಡಲು ಮಿಸ್ ಮಾಡಿಕೊಂಡವರಿಗೆ ಈ ಸಿನಿಮಾ ನೋಡಲು ಅವಕಾಶ ಸಿಕ್ಕಂತಾಗಿದೆ.
ಶ್ರೀನಗರ ಕಿಟ್ಟಿ ಹಾಗೂ ಮೋಹಕ ತಾರೆ ರಮ್ಯಾ ನಟಿಸಿದ್ದ 'ಸಂಜು ವೆಡ್ಸ್ ಗೀತಾ' ಸಿನಿಮಾವು ಉತ್ತಮ ಕಥೆ, ಸಂಗೀತ ಇತರೆ ಕಾರಣದಿಂದ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಹಾಡು ಕೂಡ ಬಹಳ ಫೇಮಸ್ ಆಗಿತ್ತು. ಅದೇ ಟೈಟಲ್‌ನಲ್ಲಿ ವಿಭಿನ್ನ ಕಥೆಯನ್ನು ತೆರೆ ಮೇಲೆ ತರಲು ನಿರ್ದೇಶಕ ನಾಗಶೇಖರ್ ಅವರು ಮುಂದಾಗಿದ್ದರು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಈ ಸಿನಿಮಾ ಎಡವಿತ್ತು ಎನ್ನಬಹುದು.
ನಿರ್ದೇಶಕ ನಾಗಶೇಖರ್ ಈ ಚಿತ್ರವನ್ನು ರೈತಪರ ಕಾಳಜಿ ಹಾಗೂ ರೋಮ್ಯಾಂಟಿಕ್ ಲವ್ ಸ್ಟೋರಿ ಎರಡು ಎಳೆಯಲ್ಲಿ ಸಿನಿಮಾ ಕಥೆ ಹೇಳಿದ್ದಾರೆ. ರೇಷ್ಮೇ ಬೆಳೆಗಾರರ ಸಂಕಷ್ಟಗಳ ಬಗ್ಗೆ ಈ ಸಿನಿಮಾ ದಲ್ಲಿ ಬೆಳಕು ಚೆಲ್ಲಲಾಗಿದೆ. ರೇಷ್ಮೆ ಕೈಮಗ್ಗ ವ್ಯಾಪಾರಿ ರೈತನಾದ ಸಂಜು ಹಾಗೂ 'ಮಿಸ್ ಕರ್ನಾಟಕ' ಗೀತಾ ನಡುವೆ ಪ್ರೀತಿ ಹುಟ್ಟುತ್ತದೆ. ಇವರ ಪ್ರೀತಿ ಉಳಿಯುತ್ತದಾ ಇಲ್ಲವಾ ಎನ್ನುವುದು ಈ ಸಿನಿಮಾದ ಮುಖ್ಯ ಕಥೆ ಎನ್ನಬಹುದು.ಸತ್ಯಾ ಹೆಗಡೆ ಛಾಯಾಗ್ರಹಣ ಹಾಗೂ ಶ್ರೀಧರ್ ಸಂಭ್ರಮ್ ಸಂಗೀತ ಚಿತ್ರಕ್ಕಿದೆ. ಭಾಗ 1ಕ್ಕೆ ಹೋಲಿಸಿದರೆ ಈ ಚಿತ್ರದಲ್ಲಿ ಹಾಡುಗಳು ಅಷ್ಟಾಗಿ ಹಿಟ್ ಆಗಲಿಲ್ಲ.
ಸಂಜು ವೆಡ್ಸ್ ಗೀತಾ 2 ಸಿನಿಮಾಕ್ಕೆ ಚಲವಾದಿ ಕುಮಾರ್ ಬಂಡವಾಳ ಹೂಡಿದ್ದರು. ಮೊದಲ ಬಾರೀ ಥೀಯೆಟರ್ ನಲ್ಲಿ ಯಶಸ್ಸು ಸಿಗದಕ್ಕೆ ಸಿನಿಮಾ ರೀ ಎಡಿಟ್ ಮಾಡಿ 20 ನಿಮಿಷ ಎಡಿಷನಲ್ ಕಟ್ಟಿಂಗ್ ಅನ್ನು ಕಥೆಗೆ ಸೇರ್ಪಡೆ ಮಾಡಿ ಈ ಸಿನಿಮಾ ರೀ ರಿಲೀಸ್ ಕೂಡ ಮಾಡಲಾಗಿತ್ತು. ಆದರೆ ಚಿತ್ರತಂಡ ಪ್ರಚಾರಕ್ಕೆ ಚಿತ್ರದ ನಾಯಕಿ ರಚಿತಾ ರಾಮ್ ಬರ್ತಿಲ್ಲ ಎಂದು ಚಿತ್ರತಂಡ ಆರೋಪಿಸಿ ಕೆಲವು ವಿವಾಧ ಕೂಡ ಆಗಿತ್ತು. ನಾನು ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದೀನಿ. ಹಾಗಾಗಿ ಪ್ರಚಾರಕ್ಕೆ ಹೋಗಲು ಆಗಲಿಲ್ಲ ಎಂದು ರಚಿತಾ ಸ್ಪಷ್ಟನೆ ಕೂಡ ನೀಡಿದ್ದರು.
ಇದನ್ನು ಓದಿ:45 Movie: ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ʼ45ʼ ಸಿನಿಮಾ ಬಿಡುಗಡೆ ಯಾವಾಗ?
ಈ ಸಿನಿಮಾ ನಟ ಶ್ರೀನಗರ್ ಕಿಟ್ಟಿ ಹಾಗೂ ರಚಿತಾ ರಾಮ್ ಗೆ ಬಿಗ್ ಸಕ್ಸಸ್ ನೀಡುತ್ತೆ ಎಂದೇ ಹೇಳ ಲಾಗಿತ್ತು. ಸಿನಿಮಾ ಬಿಡುಗಡೆಯಾಗಿ ಬಹುನಿರೀಕ್ಷೆ ಹುಟ್ಟಿಸಿದ್ದರೂ ಅಂದು ಕೊಂಡ ಮಟ್ಟಕ್ಕೆ ಈ ಸಿನಿಮಾ ಮೋಡಿ ಮಾಡಲೇ ಇಲ್ಲ. ಹೀಗಾಗಿ ಅಮೇಜಾನ್ ಪ್ರೈಮ್ ನಲ್ಲಿ ಒಟಿಟಿ ನಲ್ಲಿ ಈ ಸಿನಿಮಾ ಬಿಡಲಾಗಿದೆ. ಇತ್ತೀಚೆಗಷ್ಟೆ ಕುಬೇರ, ಇತರ ಸಿನಿಮಾ ಹಾಗೂ ವೆಬ್ ಸೀರಿಸ್ ಕೂಡ ತೆರೆ ಮೇಲೆ ಬಂದಿದೆ ಎನ್ನಬಹುದು