Nayanthara: ಸೌತ್ ಇಂಡಿಯಾದಲ್ಲೇ ಅತ್ಯಂತ ಶ್ರೀಮಂತ ನಟಿ ಈಕೆ... ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ!
ಭಾರತೀಯ ಚಲನಚಿತ್ರೋದ್ಯಮದ ಬೇಡಿಕೆಯ ನಟಿಯರಲ್ಲಿ ನಟಿ ನಯನತಾರ ಕೂಡ ಒಬ್ಬರಾಗಿದ್ದಾರೆ. ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದ ಇವರಿಗೆ ಭಾರತೀಯ ಸಿನಿರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂಬ ಫೇಮ್ ಕೂಡ ಇದೆ. ಇವರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿಯೂ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರ ಸಿನಿಮಾ ಹಿಟ್ ಆಗುತ್ತಿದ್ದಂತೆ ತಮ್ಮ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದು ಕಾಲಿವುಡ್ ನ ಶ್ರೀಮಂತ ನಟಿ ಎಂದು ಖ್ಯಾತಿ ಪಡೆದಿದ್ದಾರೆ.

Nayanthara


ಸೇನಾ ಅಧಿಕಾರಿ ಕುರಿಯನ್ ಕೋಡಿಯಾಟ್ಟು ಮತ್ತು ಉಮ್ಮನ್ ಕುರಿಯನ್ ಅವರ ಪುತ್ರಿಯಾಗಿ ನಯನತಾರ ಅವರು ಬೆಂಗಳೂರಿನಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದರು. ಡಯಾನಾ ಮರಿಯಮ್ ಕುರಿಯನ್ ಇವರ ಮೂಲ ಹೆಸರಾಗಿದ್ದು ಕಾಲ ಕ್ರಮೇಣ ಇವರು ನಯನತಾರ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಕಾಲೇಜು ದಿನಗಳಲ್ಲಿ ನಯನತಾರಾ ಪಾರ್ಟ್ ಟೈಮ್ ಮಾಡೆಲಿಂಗ್ ಕೆಲಸ ಮಾಡುತ್ತಿದ್ದರು. ನಿರ್ದೇಶಕ ಸತ್ಯಂ ಅಥಿಕ್ಕಾಡ್ ಅವರ ಮೂಲಕ ಮನಸ್ಸಿನಕ್ಕರೆ ಸಿನಿಮಾದಲ್ಲಿ ಮೊದಲು ಚಾನ್ಸ್ ಗಿಟ್ಟಿಸಿಕೊಂಡರು.

2003ರಲ್ಲಿ ಮಲಯಾಳಂನ ಮನಸ್ಸಿನಕ್ಕರೆ ಸಿನಿಮಾ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟಿದ್ದು 22 ವರ್ಷ ಸುದೀರ್ಘ ಸಿನಿ ಜರ್ನಿ ಮುಂದುವರಿಸಿಕೊಂಡು ಬಂದಿದ್ದಾರೆ. ಶಾರುಖ್ ಖಾನ್ ಜೊತೆಗೆ ಜವಾನ್ (2023) ಚಿತ್ರದಲ್ಲಿ ನಟಿಸಿದ್ದು ಈ ಮೂಲಕ ಆ ಸಿನಿಮಾ 1,000 ಕೋಟಿ ರೂ.ನಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದು ಇದು ಇವರ ಬದುಕಿನ ಟರ್ನಿಂಗ್ ಪಾಂಯ್ಟ್ ಚಿತ್ರ ಎನ್ನಬಹುದು.

ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದ ಇವರು ಇತ್ತೀಚೆಗೆ ವೈಯಕ್ತಿಕ ಜೀವನದ ವಿಚಾರಕ್ಕೆಹೆಚ್ಚು ಸುದ್ದಿಯಲ್ಲಿದ್ದಾರೆ. ಮೂಲತಃ ಕ್ರಿಶ್ಚಿಯನ್ ಹಿನ್ನೆಲೆಯಿಂದ ಬಂದ ಅವರು 27 ನೇ ವಯಸ್ಸಿನಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಹೀಗಾಗಿ ತಮ್ಮ ಕ್ರಿಶ್ಚಿಯನ್ ಹೆಸರನ್ನು ಬದಲಾಯಿಸಿಕೊಂಡು ನಯನತಾರ ಎಂಬ ಹೆಸರನ್ನು ಸ್ವೀಕಾರ ಮಾಡಿದ್ದಾರೆ.

ನಟ ಸಿಂಬು ಮತ್ತು ಪ್ರಭುದೇವ ಅವರೊಂದಿಗೆ ಲವ್ ರಿಲೇಶನ್ ಶಿಪ್ ವಿಚಾರಕ್ಕೂ ನಟಿ ನಯನತಾರ ಗಾಸಿಪ್ ಸುಳಿಯಲ್ಲಿ ಸಿಲುಕಿದ್ದರು. ಈ ಎಲ್ಲದರ ನಡುವೆ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು 2022ರಲ್ಲಿ ವಿವಾಹವಾದರು. ಈ ಮೂಲಕ ಎಲ್ಲ ಗಾಸಿಪ್ ಗೆ ತೆರೆ ಎಳೆದಿದ್ದಾರೆ. ನಯನತಾರಾ ಅವರಿಗೆ ಉಹಿರ್ ಮತ್ತು ಉಲಗ್ ಎಂಬ ಅವಳಿ ಗಂಡು ಮಕ್ಕಳಿದ್ದಾರೆ. ಅವರ ಜೊತೆಗಿನ ಫ್ಯಾಮಿಲಿ ಫೋಟೊ ಕೂಡ ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ನಯನತಾರ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದೇ ಖ್ಯಾತಿ ಪಡೆದಿದ್ದಾರೆ. ಈ ಮೂಲಕ ಪ್ರತಿ ಚಿತ್ರಕ್ಕೆ 5 ರಿಂದ10 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಿದ್ದಾರೆ. ಅವರ ಅಂದಾಜು ನಿವ್ವಳ ಮೌಲ್ಯ 200 ಕೋಟಿ ರೂ.ಗಳನ್ನು ಮೀರಿದೆ ಎನ್ನಲಾಗುತ್ತಿದೆ.

ನಟಿ ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಿದ್ದು, ಮುಂಬೈನಲ್ಲಿ 100 ಕೋಟಿ ರೂ.ಗಳ 4ಬಿಹೆಚ್ ಕೆ ಫ್ಲ್ಯಾಟ್, ಐಷಾ ರಾಮಿ ಕಾರುಗಳು ಮತ್ತು ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ. ಅವರು ಅನಿಲ್ ರವಿಪುಡಿ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಮುಂಬರುವ ಯೋಜನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅವರು ಟಾಕ್ಸಿಕ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ..