ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಭರತ್ ಸಾಗರ್ ಡಿಸೈನರ್‌ವೇರ್‌ನಲ್ಲಿ ಕಿಚ್ಚ ಸುದೀಪ್ ಅತ್ಯಾಕರ್ಷಕ ಲುಕ್

Star Fashion 2025: ಕನ್ನಡ ಬಿಗ್‌ ಬಾಸ್ ರಿಯಾಲಿಟಿ ಶೋ ನ ಆರಂಭದ ಎಪಿಸೋಡ್‌ನಲ್ಲಿ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್ ವಿಶೇಷ ಔಟ್‌ಫಿಟ್‌ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಏನಿದು ಸ್ಪೆಷಲ್ ಔಟ್‌ಫಿಟ್ಸ್? ಇದರ ವಿಶೇಷತೆಯೇನು? ಈ ಕುರಿತಂತೆ ಖುದ್ದು ಡಿಸೈನರ್ ವಿಶ್ವವಾಣಿ ಟಿವಿ ಸ್ಪೆಷಲ್‌ಗೆ ವಿವರಿಸಿದ್ದಾರೆ.

ಚಿತ್ರಗಳು: ಭರತ್ ಸಾಗರ್ ಡಿಸೈನರ್‌ವೇರ್‌ನಲ್ಲಿ ನಟ ಸುದೀಪ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಿಗ್‌ ಬಾಸ್‌ನಲ್ಲಿನ ಕಿಚ್ಚ ಸುದೀಪ್ ಅವರ (Kiccha Sudeep) ಕೊರಿಯನ್ ಸ್ಟೈಲ್‌ನ ಕ್ರಿಸ್ಟಲ್ ಜಾಕೆಟ್ ಔಟ್‌ಫಿಟ್‌ ಸದ್ಯ ಯುವಕರನ್ನು ಸೆಳೆದಿದೆ. ಬಾಲಿವುಡ್‌ಗರನ್ನು ಮೀರಿಸುವಂತೆ ಕಾಣಿಸಿಕೊಂಡಿದ್ದ, ಸುದೀಪ್ ಅವರ ಔಟ್‌ಫಿಟ್ ಇದೀಗ ಮೆನ್ಸ್ ಫ್ಯಾಷನ್ ಲೋಕದಲ್ಲೂ (Star Fashion 2025) ವ್ಯಾಪಕ ಪ್ರಶಂಸೆ ಗಳಿಸಿದೆ. ಈ ಕುರಿತಂತೆ ವಿಶ್ವವಾಣಿ ನ್ಯೂಸ್ ಡಿಸೈನರ್ ಭರತ್ ಸಾಗರ್ ಅವರನ್ನು ಮಾತನಾಡಿಸಿದಾಗ ಅವರು ಔಟ್‌ಫಿಟ್ ಕುರಿತು ಒಂದಿಷ್ಟು ವಿಷಯವನ್ನು ಹಂಚಿಕೊಂಡರು.

ವಿಶ್ವವಾಣಿ ನ್ಯೂಸ್: ಮೊದಲ ಎಪಿಸೋಡ್‌ನಲ್ಲಿ ಸುದೀಪ್ ಧರಿಸಿದ್ದ ಔಟ್‌ಫಿಟ್ ಹೆಸರೇನು?

ಭರತ್ ಸಾಗರ್: ಲೂಸ್ ಫಿಟ್ ಕೊರಿಯನ್ ಸ್ಟೈಲ್ ಔಟ್‌ಫಿಟ್

Star Fashion 2025 2

ವಿಶ್ವವಾಣಿ ನ್ಯೂಸ್: ಇದೀಗ ಬಿಗ್‌ ಬಾಸ್‌ನಲ್ಲಿ ಕಿಚ್ಚ ಸುದೀಪ್ ಅವರಿಗೆ ಡಿಸೈನ್ ಮಾಡಿದ ಔಟ್‌ಫಿಟ್ ಮೆನ್ಸ್ ಫ್ಯಾಷನ್ ಲೋಕದಲ್ಲಿ ಸಖತ್ ಟ್ರೆಂಡಿಯಾಗಿದೆ! ಈ ಬಗ್ಗೆ ಏನು ಹೇಳುವಿರಿ?

ಭರತ್ ಸಾಗರ್: ಸಂತೋಷವಾಗಿದೆ. ಪ್ರತಿ ಬಾರಿ ಸುದೀಪ್ ಸರ್ ಧರಿಸುವ ಸಾಕಷ್ಟು ಔಟ್‌ಫಿಟ್ಸ್ ಯುವಕರ ಫ್ಯಾಷನ್ ಸ್ಟೇಟ್‌ಮೆಂಟ್ಸ್‌ನಲ್ಲಿ ಸೇರುತ್ತಿದೆ. ಇದು ಸಂತಸದ ಸಂಗತಿ.

ವಿಶ್ವವಾಣಿ ನ್ಯೂಸ್: ಸುದೀಪ್ ಅವರ ಈ ಬ್ಲ್ಯಾಕ್ ಔಟ್‌ಫಿಟ್ ಡಿಸೈನರ್‌ವೇರ್ ಬಗ್ಗೆ ವಿವರಿಸುವಿರಾ?

ಭರತ್ ಸಾಗರ್: ಕೊರಿಯನ್ ಸ್ಟೈಲ್ ಲೂಸ್ ಫಿಟ್ ಹೊಂದಿರುವ ಈ ಜಾಕೆಟ್ ಔಟ್‌ಫಿಟ್ ಸ್ವರೊಸ್ಕಿ ಕ್ರಿಸ್ಟಲ್‌ನಿಂದ ಡಿಸೈನ್‌ಗೊಂಡಿದೆ. ಒಳಗಿನ ಔಟ್‌ಫಿಟ್ ಹಾಗೂ ಪ್ಯಾಂಟ್ ಕೂಡ ಸೇಮ್ ಕಲರ್ ಹೊಂದಿದೆ. ವೆಲ್ವೆಟಿ ಲೆದರ್ ಫ್ಯಾಬ್ರಿಕ್ ಈ ಔಟ್‌ಫಿಟ್‌ನಲ್ಲಿ ಬಳಸಿರುವುದು ಈ ಡಿಸೈನರ್‌ವೇರ್ ಮತ್ತಷ್ಟು ಆಕರ್ಷಕವಾಗಿ ಕಾಣಿಸಲು ಕಾರಣವಾಗಿದೆ.



ವಿಶ್ವವಾಣಿ ನ್ಯೂಸ್: ಸುದೀಪ್‌ರ ಫ್ಯಾಷನ್ ಸ್ಟೇಟ್‌ಮೆಂಟ್ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಭರತ್ ಸಾಗರ್: ಸುದೀಪ್ ಸರ್ ಸೂಪರ್ ಸ್ಟಾರ್! ಇನ್ನು ಅವರ ಫ್ಯಾಷನ್ ಸ್ಟೇಟ್‌ಮೆಂಟ್ ಬಗ್ಗೆ ಹೇಳಬೇಕೇ! ಅವರು ಯಾವುದೇ ಔಟ್‌ಫಿಟ್ ಧರಿಸಿದರೂ ಟ್ರೆಂಡಿ ಫ್ಯಾಷನ್‌ಗೆ ನಾಂದಿ ಹಾಡುತ್ತದೆ.

ವಿಶ್ವವಾಣಿ ನ್ಯೂಸ್: ಸುದೀಪ್ ಅವರ ಫ್ಯಾಷನ್ ಜ್ಞಾನ ದ ಬಗ್ಗೆ ಹೇಳಿ?

ಭರತ್ ಸಾಗರ್: ಸುದೀಪ್ ಸರ್‌ಗೆ ಅಗಾಧ ಫ್ಯಾಷನ್ ಜ್ಞಾನವಿದೆ. ನಾವು ಅವರಿಗೆ ಡಿಸೈನ್ ಮಾಡುವಾಗ, ಖುದ್ದು ಅವರೇ ಹೊಸ ಹೊಸ ವಿನ್ಯಾಸದ ಬಗ್ಗೆ ನಮಗೆ ಹೇಳುತ್ತಾರೆ. ಸಾಕಷ್ಟು ಫ್ಯಾಷನ್ ರಿಸರ್ಚ್ ಹಾಗೂ ಅವರ ಅಭಿಲಾಷೆಗೆ ತಕ್ಕಂತೆ ನಾವು ಡಿಸೈನ್ ಮಾಡುತ್ತೇವೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Dasara Holiday Fashion 2025: ದಸರಾ ರಜೆಯ ಮೋಜಿಗೂ ಬಂತು ಹಾಲಿಡೇ ಫ್ಯಾಷನ್ ವೇರ್ಸ್

ಶೀಲಾ ಸಿ ಶೆಟ್ಟಿ

View all posts by this author