ದುಬೈ: ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2025 (SIIMA 2025) ಕಾರ್ಯಕ್ರಮ ದುಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಕನ್ನಡ ಚಿತ್ರರಂಗದಲ್ಲಿ ಮ್ಯಾಕ್ಸ್ ಸಿನಿಮಾ ನಟನೆಗೆ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದ್ದು, ‘ಯುಐ’ ನಿರ್ದೇಶನಕ್ಕೆ ಉಪೇಂದ್ರ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ.
ಶುಕ್ರವಾರ ರಾತ್ರಿ ದುಬೈಯಲ್ಲಿ ಸೈಮಾ 2025 ಸಮಾರಂಭ ಆಯೋಜಿಸಲಾಗಿತ್ತು. 2024ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಸುದೀಪ್ ಅವರು ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಇನ್ನು, ‘ಯುಐ’ ನಿರ್ದೇಶನಕ್ಕೆ ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಅವಾರ್ಡ್ ಪಡೆದಿದ್ದಾರೆ.
‘02’ ನಟನೆಗೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ‘ಭೀಮ’ ಸಿನಿಮಾ ನಟನೆಗೆ ದುನಿಯಾ ವಿಜಯ್ಗೆ ಅತ್ಯುತ್ತಮ ನಟ (ಕ್ರಿಟಿಕ್ಸ್) ಅವಾರ್ಡ್ ದೊರೆತಿದೆ. ‘ಕೃಷ್ಣಂ ಪ್ರಣಯ ಸಖಿ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿದೆ.
ಸೈಮಾ 2025 ಪ್ರಶಸ್ತಿ ಪುರಸ್ಕೃತರ ಪಟ್ಟಿ (ಕನ್ನಡ)
- ಅತ್ಯುತ್ತಮ ಸಂಗೀತ ಸಂಯೋಜನೆ: ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್)
- ಅತ್ಯುತ್ತಮ ಹಾಸ್ಯನಟ: ಜಾಕ್ ಸಿಂಗಂ (ಭೀಮ)
- ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ: ಸಂದೀಪ್ ಸುಂಕದ್ (ಶಾಖಾಹಾರಿ)
- ಅತ್ಯುತ್ತಮ ಚೊಚ್ಚಲ ನಟ- ಸಮರ್ಜಿತ್ ಲಂಕೇಶ್ (ಗೌರಿ)
- ಭರವಸೆ ಮೂಡಿಸಿದ ಹೊಸ ಪ್ರತಿಭೆ- ಸನ್ಯಾ ಅಯ್ಯರ್ (ಗೌರಿ)
- ಅತ್ಯುತ್ತಮ ಚೊಚ್ಚಲ ನಟಿ – ಅಂಕಿತಾ ಅಮರ್ (ಇಬ್ಬನಿ ತಬ್ಬಿದಾ ಇಳೆಯಲಿ)
- ಅತ್ಯುತ್ತಮ ಸಾಂಗ್ ಡಿಸೈನ್- ಇಮ್ರಾನ್ ಎಸ್ ಸರ್ಧಾರಿಯಾ
- ಅತ್ಯುತ್ತಮ ಛಾಯಾಗ್ರಹಣ: ಶ್ರೀವತ್ಸನ್ ಸೆಲ್ವರಾಜನ್ (ಇಬ್ಬನಿ ತಬ್ಬಿದ ಇಳೆಯಲಿ)
- ಅತ್ಯುತ್ತಮ ಹಿನ್ನೆಲೆ ಗಾಯಕಿ – ಐಶ್ವರ್ಯ ರಂಗರಾಜನ್
- ಅತ್ಯುತ್ತಮ ಗಾಯಕ – ಜಸ್ಕರನ್
- ಅತ್ಯುತ್ತಮ ಚಿತ್ರ ಸಾಹಿತಿ - ಡಾ. ವಿ. ನಾಗೇಂದ್ರ ಪ್ರಸಾದ್
ಸೈಮಾ 2025 ವಿಜೇತರು (ತೆಲುಗು)
ಟಾಲಿವುಡ್‌ನಲ್ಲಿ ಪುಷ್ಪ 2 ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಉತ್ತಮ ನಟ ಪ್ರಶಸ್ತಿ ಪಡೆದಿದ್ದು, ಉತ್ತಮ ನಟಿ ಪ್ರಶಸ್ತಿ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ. ಅದೇ ರೀತಿ ಇತರ ವಿಜೇತರ ಪಟ್ಟಿ ಇಲ್ಲಿದೆ.
ಉತ್ತಮ ನಟ : ಅಲ್ಲು ಅರ್ಜುನ್ (ಪುಷ್ಪ 2: ದ ರೂಲ್)
ಅತ್ಯುತ್ತಮ ನಟಿ : ರಶ್ಮಿಕಾ ಮಂದಣ್ಣ (ಪುಷ್ಪ 2: ದ ರೂಲ್)
ಉತ್ತಮ ಚಲನಚಿತ್ರ: ಕಲ್ಕಿ 2898 ಎಡಿ
ಉತ್ತಮ ಖಳನಟ: ಕಮಲ್ ಹಾಸನ್ (ಕಲ್ಕಿ 2898 ಎಡಿ)
ಉತ್ತಮ ಪೋಷಕ ನಟ : ಅಮಿತಾಭ್ ಬಚ್ಚನ್ (ಕಲ್ಕಿ 2898 ಎಡಿ)
ಉತ್ತಮ ಪೋಷಕ ನಟಿ : ಅನ್ನಾ ಬೆನ್ (ಕಲ್ಕಿ 2898 ಎಡಿ)
ಉತ್ತಮ ಹಾಸ್ಯನಟ: ಸತ್ಯಾ (ಮಾತು ವಧಲರ 2)
ಅತ್ಯುತ್ತಮ ಛಾಯಾಗ್ರಾಹಕ: ರತ್ನವೇಲು (ದೇವರ)
ಅತ್ಯುತ್ತಮ ಸಂಗೀತ ಸಂಯೋಜಕ: ದೇವಿ ಶ್ರೀ ಪ್ರಸಾದ್ (ಪುಷ್ಪಾ 2: ದಿ ರೂಲ್)
ಅತ್ಯುತ್ತಮ ಗೀತರಚನೆಕಾರ: ರಾಮಜೋಗಯ್ಯ ಶಾಸ್ತ್ರಿ (ಚುಟ್ಟಮಲ್ಲೆ-ದೇವರ)
ಅತ್ಯುತ್ತಮ ಗಾಯಕ (ಪುರುಷ): ಕಂಡುಕೂರಿ ಶಂಕರ್ ಬಾಬು (ಪೀಲಿಂಗ್ಸ್ – ಪುಷ್ಪಾ 2: ದಿ ರೂಲ್)
ಅತ್ಯುತ್ತಮ ಗಾಯಕಿ (ಮಹಿಳಾ ವಿಭಾಗ): ಶಿಲ್ಪಾ ರಾವ್ (ಚುಟ್ಟಮಲ್ಲೆ-ದೇವರ)
ಅತ್ಯುತ್ತಮ ನಟ (ಕ್ರಿಟಿಕ್ಸ್): ತೇಜ ಸಜ್ಜ (ಹನುಮಾನ್)
ಅತ್ಯುತ್ತಮ ನಟಿ (ಕ್ರಿಟಿಕ್ಸ್): ಮೀನಾಕ್ಷಿ ಚೌಧರಿ (ಲಕ್ಕಿ ಬಾಸ್ಕರ್)
ಅತ್ಯುತ್ತಮ ನಿರ್ದೇಶಕ (ಕ್ರಿಟಿಕ್ಸ್): ಪ್ರಶಾಂತ್ ವರ್ಮಾ (ಹನುಮಾನ್)
ಅತ್ಯುತ್ತಮ ಚೊಚ್ಚಲ ನಟ: ಸಂದೀಪ್ ಸರೋಜ್ (ಕಮಿಟಿ ಕುರ‍್ರೋಳ್ಳು)
ಈ ಸುದ್ದಿಯನ್ನೂ ಓದಿ | Ramayana Movie: 'ರಾಮಾಯಣ’ ಚಿತ್ರಕ್ಕೆ ಆಯ್ಕೆಯಾದ ಪ್ರಸಿದ್ಧ ಹಾಲಿವುಡ್ ತಂತ್ರಜ್ಞರು!