ಹೈದರಾಬಾದ್: ತೆಲುಗು ಬಿಗ್ ಬಾಸ್ ಸೀಸನ್ 9 ಇತ್ತೀಚೆಗಷ್ಟೇ ಆರಂಭವಾಗಿದೆ. ತನುಜಾ ಗೌಡ, ರಿತು ಚೌಧರಿ, ಸಂಜನಾ ಗಲ್ರಾನಿ, ಭರಣಿ ಶಂಕರ ಹೀಗೆ ಹಲವು ಸ್ಪರ್ಧಿಗಳು ಈ ಬಾರಿ ಆಯ್ಕೆಯಾಗಿದ್ದಾರೆ. ಅಂತೆಯೇ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಿತು ಚೌಧರಿ (Rithu Chowdary) ಕೂಡ ತೆಲುಗು ಬಿಗ್ ಬಾಸ್‌ಗೆ ಆಯ್ಕೆಯಾಗಿದ್ದು ಇದೀಗ ಈಕೆಯ ವಿರುದ್ಧ ಖ್ಯಾತ ನಟನ ಪತ್ನಿಯೊಬ್ಬರು ಗಂಭೀರ ಆರೋಪ ಹೊರಿಸಿದ್ದಾರೆ. ತನ್ನ ಪತಿಗೆ ರಿತು ಚೌಧರಿ ಜತೆ ಸಂಬಂಧ ಇರುವುದರಿಂದ ತನ್ನ ದಾಂಪತ್ಯ ಜೀವನವೇ ಕಿತ್ತು ಹೋಗಿದೆ ಎಂದು ಗಂಭೀರ ಆರೋಪ ಮಾಡಿದ್ದು ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ನಟ ಧರ್ಮ ಮಹೇಶ್ ಅವರ ಪತ್ನಿ ಗೌತಮಿ, ಬಿಗ್ ಬಾಸ್ ತೆಲುಗು 9ರ ಸ್ಪರ್ಧಿ ರಿತು ಚೌಧರಿ ಅವರ ಮೇಲೆ ಆರೋಪ ಮಾಡಿದ್ದಾರೆ. ತಮ್ಮ ಪತಿಯೊಂದಿಗೆ ಅವರು ಅಫೇರ್ ಹೊಂದಿದ್ದಾರೆ ಎಂದು ಆರೋಪಿಸಿ ಗೌತಮಿ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಇದು ತನ್ನ ಪತಿ ಮತ್ತು ರಿತು ಚೌಧರಿ ಒಟ್ಟಿಗೆ ಇರುವುದನ್ನು ತೋರಿಸುವ ಸಿಸಿಟಿವಿ ದೃಶ್ಯ ಎಂದು ಹೇಳಿದ್ದಾರೆ. ರಿತು ಚೌಧರಿ ತಮ್ಮ ದಾಂಪತ್ಯ ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಹಿಂದೆ, ಗೌತಮಿ ತಮ್ಮ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಅಫೇರ್ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಿದ್ದರು. ಆದರೆ ಆಗ ಆಕೆಯ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಈಗ ಗೌತಮಿ ಅವರು ರಿತು ಚೌಧರಿ ಮತ್ತು ಧರ್ಮ ಮಹೇಶ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳುವ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ರಿತು ಚೌಧರಿ ಬಗ್ಗೆ ಪತಿ ಮಹೇಶ್ ಜತೆ ವಾಟ್ಸ್‌ಆ್ಯಪ್ ಚಾಟ್ ಮಾಡಿರುವ ಸ್ಕ್ರೀನ್ ಶಾಟ್ ಅನ್ನು ಕೂಡ ಗೌತಮಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಇದನ್ನು ಓದಿ:Vrusshabha Movie: ರಾಜನಾಗಿ ಖಡಕ್ ಎಂಟ್ರಿ ಕೊಟ್ಟ ಮೋಹನ್ ಲಾಲ್: ವೃಷಭ ಚಿತ್ರದ ಟೀಸರ್ ರಿಲೀಸ್
ಧರ್ಮ ಮಹೇಶ್ ಅನ್ನು ಪ್ರೀತಿಸಿ ಮದುವೆಯಾದ ಗೌತಮಿ 2023ರಲ್ಲಿ ಗರ್ಭಿಣಿಯಾದರು. ಆದರೆ ಅದೇ ಸಮಯದಲ್ಲಿ ತನ್ನ ಪತಿಗೆ ರಿತು ಚೌಧರಿ ಜತೆ ಆಫೇರ್ ಇತ್ತು. ರಿತು ಕಾರಣದಿಂದಾಗಿ ಧರ್ಮ ಮಹೇಶ್ ತನ್ನೊಂದಿಗೆ ಜಗಳವಾಡಿದ್ದಕ್ಕೆ ಕೆಲವು ಪುರಾವೆಗಳು ಇವೆ ಇಂದು ಹೇಳಿಕೆ ನೀಡಿದ್ದಾರೆ. ಧರ್ಮ ಮಹೇಶ್ ಸಿಂಧುರಾಮ್ ಮತ್ತು ಡ್ರಿಂಕರ್ ಸಾಯಿ ಚಿತ್ರಗಳಲ್ಲಿ ನಾಯಕನಾಗಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದರು. ಅವರಿಗೆ 2023ರಲ್ಲಿ ಗಂಡು ಮಗು ಜನಿಸಿತ್ತು. ಆದರೆ ಕೆಲವು ದಿನಗಳ ಹಿಂದೆ ಗೌತಮಿ ಧರ್ಮ ಮಹೇಶ್ ವಿರುದ್ಧ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ಗೆ ದೂರು ನೀಡಿದ್ದರು.