ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijayalakshmi Darshan: ದರ್ಶನ್‌ ಜತೆಗಿನ ಫೋಟೊ ಶೇರ್‌ ಮಾಡಿ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ ವಿಜಯಲಕ್ಷ್ಮೀ

ಗೌರಿ ಗಣೇಶ ಹಬ್ಬದ ಪ್ರಯುಕ್ತ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಶುಭಾಶಯ ತಿಳಿಸಿದ್ದಾರೆ. ದರ್ಶನ್‌ ಜತೆಗಿನ ಹಳೆ ಫೋಟೊವನ್ನು ಶೇರ್‌ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ದರ್ಶನ್‌ ಅವರ ಸಂದೇಶವನ್ನು ವಿಜಯಲಕ್ಷ್ಮೀ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಮತ್ತೆ ಜೈಲು ಸೇರಿದ್ದಾರೆ. ದರ್ಶನ್‌ ಅಭಿನಯದ ʼದಿ ಡೆವಿಲ್‌ʼ (The Devil) ಚಿತ್ರದ ಬಿಡುಗಡೆ ಹೊಸ್ತಿಲಿನಲ್ಲೇ ಅವರ ಜಾಮೀನು ರದ್ದಾಗಿರುವುದು ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ʼಡೆವಿಲ್‌ʼ ಚಿತ್ರದ ಪ್ರಚಾರ ಕೈಗೆತ್ತಿಕೊಂಡಿದ್ದಾರೆ. ವಿಜಯಲಕ್ಷ್ಮೀ ಇದೀಗ ದರ್ಶನ್‌ ಜತೆಗಿನ ಹಳೆ ಫೋಟೊವನ್ನು ಶೇರ್‌ ಮಾಡಿ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ದರ್ಶನ್‌ ಅವರ ಸಂದೇಶವನ್ನು ವಿಜಯಲಕ್ಷ್ಮೀ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ʼʼನಾನು ವಿಜಯಲಕ್ಷ್ಮೀ ದರ್ಶನ್‌, ನಿಮ್ಮ ಪ್ರೀತಿಯ ದರ್ಶನ್‌ ಕಳಿಸಿರುವ ಸಂದೇಶʼʼ ಎಂದು ಹೇಳಿ ʼದಿ ಡೆವಿಲ್‌ʼ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದರು.



ಈ ಸುದ್ದಿಯನ್ನೂ ಓದಿ: The Devil: ಜೋರಾಗ್ತಿದೆ ಡೆವಿಲ್‌ ಆರ್ಭಟ; ಸಾಂಗ್‌ ಬಿಡುಗಡೆಯಾಗಿ ಒಂದೇ ದಿನಕ್ಕೆ 10 ಮಿಲಿಯನ್ಸ್‌ ವ್ಯೂವ್ಸ್‌!

ವಿಜಯಲಕ್ಷ್ಮೀ ಪತ್ರದಲ್ಲಿ ಏನಿತ್ತು?

ʼʼಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ‌ ಪ್ರೀತಿಯ ದಾಸನ ಶಿರ ಸಾಷ್ಟಾಂಗ ನಮಸ್ಕಾರಗಳು. ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ‌ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಆಭಾರಿ. ನಾನು ಎಲ್ಲೆ ಇದ್ದರು ಹೇಗೆ ಇದ್ದರು ನಿಮ್ಮ ಶ್ರೇಯೋಭಿಲಾಷೆಯನ್ನೆ ಬಯಸುತ್ತೇನೆʼʼ.

ʼʼಪ್ರಸಕ್ತ ವಿದ್ಯಮಾನ ಏನೇ ಇದ್ದರು, ನನ್ನ ನಂಬಿ‌ ಕನಸು ಕಂಡಿರುವ ನಿರ್ದೇಶಕರ ಹಾಗೂ ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ . ಹಾಗಾಗಿ ನನ್ನ ʼದಿ ಡೆವಿಲ್ʼ ಚಿತ್ರದ ಎಲ್ಲ ಕೆಲಸ ಕಾರ್ಯಗಳು ಯಾವುದೆ ಅಡೆತಡೆ ಇಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಹಾಗಾಗಿ ಅದಕ್ಕೆ ನನ್ನ ಸಂಪೂರ್ಣಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ. ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ದೃಢವಾಗಿ ನಂಬಿದ್ದೇನೆ. ಸಿನಿಮಾ ಒಂದು ಮನರಂಜನೆಯ ಮಾಧ್ಯಮ. ಅದನ್ನ ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಬೇಕುʼʼ ನಿಮ್ಮ ಪ್ರೀತಿಯ ದಾಸ ಎಂದು ವಿಜಯಲಕ್ಷ್ಮೀ ಬರೆದುಕೊಂಡಿದ್ದರು.

ದಾಖಲೆ ಬರೆದ ʼಇದ್ರೆ ನೆಮ್ಮದಿಯಾಗ್‌ ಇರ್ಬೇಕ್‌ʼ ಹಾಡು

ಸದ್ಯ ʼದಿ ಡೆವಿಲ್‌ʼ ಸಿನಿಮಾದ ಮೊದಲ ಹಾಡು ʼಇದ್ರೆ ನೆಮ್ಮದಿಯಾಗ್‌ ಇರ್ಬೇಕ್‌ʼ ರಿಲೀಸ್‌ ಆಗಿದ್ದು, ದರ್ಶನ್‌ ಅಭಿಮಾನಿಗಳ ಮನ ಗೆದ್ದಿದೆ. ಬಿ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನದ ಈ ಹಾಡು ರಿಲೀಸ್‌ ಆಗಿ ಒಂದು ಗಂಟೆಯಲ್ಲಿ 10 ಮಿಲಿಯನ್‌ ವ್ಯೂವ್ಸ್‌ ಪಡೆದುಕೊಂಡಿದೆ.

ಈ ಹಾಡಿನ ದರ್ಶನ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಅವರ ಡ್ಯಾನ್ಸ್ ಸಹ ಇಷ್ಟಪಟ್ಟಿದ್ದಾರೆ. ಈ ಹಾಡಿನ ಅದ್ಭುತವಾದ ರೆಸ್ಪಾನ್ಸ್ ಬಂದಿದ್ದು, ಈ ಬಗ್ಗೆ ʼದಿ ಡೆವಿಲ್ʼ ಸಿನಿಮಾ ನಿರ್ಮಾಣ ಮಾಡಿರುವ ಶ್ರೀಮಾತ ಕಂಬೈನ್ಸ್ ಸಹ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಒಂದೇ ದಿನದಲ್ಲಿ 1 ಕೋಟಿ ವ್ಯೂವ್ಸ್‌ ಆಗಿದೆ ಎಂಬ ಸಂತೋಷ ವಿಚಾರವನ್ನು ಹಂಚಿಕೊಂಡಿದೆ.