ಜೈಪುರ: ರಾಜಸ್ಥಾನದಲ್ಲಿ ರಾಜ್ಯ ಸರ್ಕಾರ ನೀಡಿದ ಉಚಿತ ಕಫ್ ಸಿರಪ್ (Cough syrup) ಸೇವಿಸಿ 5 ವರ್ಷದ ಮಗು ಮೃತಪಟ್ಟು, ಇನ್ನೊಂದು 3 ವರ್ಷದ ಮಗು ಚಿಂತಾಜನಕ ಸ್ಥಿತಿಯಲಿದೆ. ಸಿಕಾರ್‌ನಲ್ಲಿ 5 ವರ್ಷದ ಮಗು ಮೃತಪಟ್ಟರೆ, ಭರತ್‌ಪುರದ ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎರಡೂ ಮಕ್ಕಳು ಒಂದೇ ಬ್ರ್ಯಾಂಡ್‌ನ ಔಷದ ಸೇವಿಸಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರದ ಉಚಿತ ವೈದ್ಯಕಿಯ ಸವಲತ್ತು ಯೋಜನೆಯಡಿ ಈ ಕಫ್ ಸಿರಪ್ ವಿತರಿಸಲಾಗಿತ್ತು. ನಂತರ ಸಿರಪ್ ಸೇವಿಸಿದ ವೈದ್ಯರೂ ಅಸ್ವಸ್ಥತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ (Rajasthan Horror). ಘಟನೆಯ ಬಳಿಕ ರಾಜ್ಯ ಸರ್ಕಾರವು ಔಷಧ ಪೂರೈಕೆಯನ್ನು ಸ್ಥಗಿತಗೊಳಿಸಿ ತನಿಖೆಗೆ ಆದೇಶ ಹೊರಡಿಸಿದೆ.
ಮೃತ ಬಾಲಕನನ್ನು ಸಿಕಾರ್‌ನ ಬ್ರಹ್ಮನನ್ ಗ್ರಾಮದ 5 ವರ್ಷದ ನಿತ್ಯಾಂಸ್ ಎಂದು ಗುರುತಿಸಲಾಗಿದೆ. ಭಾನುವಾರ (ಸೆಪ್ಟೆಂಬರ್ 28) ರಾತ್ರಿ ಸುಮಾರು 11.30ರ ವೇಳೆಗೆ ಆತನಿಗೆ ಸಿರಪ್ ನೀಡಲಾಗಿತ್ತು. ಆತನ ಕುಟುಂಬಸ್ಥರ ಪ್ರಕಾರ ಮುಂಜಾನೆ 3.30ರ ವೇಳೆಗೆ ಆತನಲ್ಲಿ ಅಸ್ವಸ್ಥತೆ ಕಂಡುಬಂತು. ಗಾಬರಿಗೊಂಡ ಆತನ ತಾಯಿ ನೀರು ಕುಡಿಸಿದರು. ಆದರೂ ಆತನಿಗೆ ಎಚ್ಚರವೇ ಆಗಲಿಲ್ಲ.
ಈ ಸುದ್ದಿಯನ್ನೂ ಓದಿ: Viral Video: ಖುಷಿಯಿಂದ ಪತಿ ಜೊತೆ ಡಾನ್ಸ್ ಮಾಡ್ತಿರೋವಾಗ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ ನವವಧು
ಕೂಡಲೇ ಬಾಲಕನನ್ನು ಎಸ್.ಕೆ. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು. ಸಾವಿಗೆ ನಿಖರ ಕಾರಣ ಪೋಸ್ಟ್ ಮಾರ್ಟಮ್ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಆಸ್ಪತ್ರೆಯ ಡಾ. ಕೆ.ಕೆ. ಅಗರ್ವಾಲ್ ತಿಳಿಸಿದ್ದಾರೆ. ಮಗುವಿನ ತಂದೆ ಜಾರ್ಖಂಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸುದ್ದಿ ತಿಳಿದು ಊರಿಗೆ ಧಾವಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಅದೇ ದಿನ ಭರತ್‌ಪುರದ ಕಳಸದ ಗ್ರಾಮದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಕಫ್ ಸಿರಪ್ ಸೇವಿಸಿದ 3 ವರ್ಷದ ಬಾಲಕ ಗಗನ್ ಸ್ಥಿತಿ ಗಂಭೀರವಾಗಿದೆ. ಈ ಇಬ್ಬರು ಬಾಲಕರು Dextromethorphan Hydrobromide Syrup IP 13.5 mg/5 ml ಸೇವಿಸಿದ್ದಾರೆ ಎನ್ನಲಾಗಿದೆ. ಅಸ್ವಸ್ಥಗೊಂಡ ಗಗನ್‌ನ ಎದೆಬಡಿತ ಕಡಿಮೆಯಾಗಿದ್ದು, ಕೂಡಲೇ ಜೈಪುರ ಜೆ.ಕೆ. ಲಾನ್ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಆತನನ್ನು ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿರಪ್ ಸೇವಿಸಿದ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ. ತಾರಾಚಂದ್ ಯೋಗಿ ಕೂಡ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಅಂದಿನಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಸಿರಪ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ.
ಕುಟುಂಬದ ದೂರುಗಳ ನಂತರ, ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ. ತಾರಾಚಂದ್ ಯೋಗಿ ಕೂಡ ಸಿರಪ್ ಸೇವಿಸಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ. ಅಂದಿನಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿರಪ್ ಬ್ಯಾಚ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ.
ಬಯಾನಾ ಬ್ಲಾಕ್ ಮುಖ್ಯ ವೈದ್ಯಾಧಿಕಾರಿ ಡಾ. ಜೋಗೇಂದ್ರ ಗುರ್ಜರ್ ಘಟನೆ ಬಗ್ಗೆ ಮಾತನಾಡಿ, ʼʼಒಂದು ನಿರ್ದಿಷ್ಟ ಬ್ಯಾಚ್ ಸಿರಪ್ ಇದಕ್ಕೆ ಕಾರಣವಾಗಿರಬಹುದು. ಮುನ್ನೆಚ್ಚರಿಕೆ ಕ್ರಮವಾಗಿ, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಬ್ಯಾಚ್‌ನ ಪೂರೈಕೆ ಮತ್ತು ವಿತರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ" ಎಂದು ಅವರು ಹೇಳಿದ್ದಾರೆ. ರಾಜ್ಯ ಸರ್ಕಾರವು ಸಿರಪ್ ತಯಾರಿಯ ಬಗ್ಗೆ ತನಿಖೆಗೆ ಆದೇಶಿಸಿದೆ.