ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Terror Attack alert: 14 ಪಾಕ್‌ ಉಗ್ರರು... 400 kg RDX- ಬರೋಬ್ಬರಿ 1ಕೋಟಿ ಜನರ ಹತ್ಯೆಗೆ ಭಾರೀ ಸಂಚು- ಮುಂಬೈನಲ್ಲಿ ಹೈ ಅಲರ್ಟ್‌

Bomb Threat: ನಾಳೆ ಅನಂತ ಚತುರ್ದಶಿಯಂದು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಮುಂಬೈ ನಗರದಾದ್ಯಂತ ಬಾಂಬ್ ಸ್ಫೋಟಿಸುವ ಬೆದರಿಕೆ ಬಂದಿರುವ ಬೆನ್ನಲ್ಲೇ ಮುಂಬೈ ಪೊಲೀಸರು ಹೈ ಅಲರ್ಟ್‌ ಘೋಷಿಸಿದ್ದಾರೆ. ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಯಲ್ಲಿ ಬಂದ ಸಂದೇಶದಲ್ಲಿ ಮುಂಬೈನಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟಗಳಿಂದ ಇಡೀ ನಗರವು ನಡುಗುತ್ತದೆ ಎಂದು ಹೇಳಲಾಗಿದೆ.

ಮುಂಬೈ: ಅನಂತ ಚತುರ್ದಶಿ ಸಂದರ್ಭದಲ್ಲಿ ನಗರದ ಕೆಲವು ಭಾಗಗಳಲ್ಲಿ ಬಾಂಬ್ ದಾಳಿ(Terror Attack alert) ನಡೆಸುವುದಾಗಿ ಮುಂಬೈ ಸಂಚಾರಿ ಪೊಲೀಸರಿಗೆ ಬೆದರಿಕೆಯೊಂದು ಬಂದಿದೆ. ಸಂಚಾರ ಕಂಟ್ರೋಲ್‌ ರೂಂಗೆ ಗುರುವಾರ ತನ್ನ ಅಧಿಕೃತ ವಾಟ್ಸಾಪ್ ಸಂಖ್ಯೆಯ ಮೂಲಕ ಬಾಂಬ್ ಸ್ಫೋಟ ಬೆದರಿಕೆ ಸಂದೇಶ ಬಂದಿದೆ. ಅಧಿಕೃತ ಮಾಹಿತಿ ಪ್ರಕಾರ, ನಗರದಾದ್ಯಂತ ವಾಹನಗಳಲ್ಲಿ ಅನೇಕ ಮಾನವ ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು 400 ಕೆಜಿ ಆರ್‌ಡಿಎಕ್ಸ್ ಒಳಗೊಂಡ ದೊಡ್ಡ ಪ್ರಮಾಣದ ದಾಳಿ ನಡೆಸಲಾಗುತ್ತದೆ. ಬರೋಬ್ಬರಿ ಒಂದು ಕೋಟಿ ಜನರನ್ನು ಕೊಲ್ಲುವ ಟಾರ್ಗೆಟ್‌ ಇದೆ ಎಂದು ಬೆದರಿಕೆ ಸಂದೇಶದಲ್ಲಿ ದುಷ್ಕರ್ಮಿಗಳು ತಿಳಿಸಿದ್ದಾರೆ.

ನಾಳೆ ಅನಂತ ಚತುರ್ದಶಿಯಂದು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಮುಂಬೈ ನಗರದಾದ್ಯಂತ ಬಾಂಬ್ ಸ್ಫೋಟಿಸುವ ಬೆದರಿಕೆ ಬಂದಿರುವ ಬೆನ್ನಲ್ಲೇ ಮುಂಬೈ ಪೊಲೀಸರು ಹೈ ಅಲರ್ಟ್‌ ಘೋಷಿಸಿದ್ದಾರೆ. ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಯಲ್ಲಿ ಬಂದ ಸಂದೇಶದಲ್ಲಿ ಮುಂಬೈನಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟಗಳಿಂದ ಇಡೀ ನಗರವು ನಡುಗುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಸಂದೇಶ ಕಳುಹಿಸಿದವರು ತಮ್ಮನ್ನು "ಲಷ್ಕರ್-ಎ-ಜಿಹಾದಿ" ಎಂದು ಗುರುತಿಸಿಕೊಂಡಿದ್ದಾರೆ ಮತ್ತು ಪೊಲೀಸರ ಪ್ರಕಾರ 14 ಪಾಕಿಸ್ತಾನಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಿದ್ದಾರೆ. ಅವರ ಬಳಿ ಇರುವ 400 ಕೆಜಿ ಆರ್‌ಡಿಎಕ್ಸ್ ಸ್ಫೋಟಿಸಲಾಗುವುದು ಮತ್ತು "ಒಂದು ಕೋಟಿ ಜನರು" ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಬೆದರಿಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಮೇಲ್ನೋಟಕ್ಕೆ ಇದೊಂದು ಹುಸಿಬಾಂಬ್‌ ಬೆದರಿಕೆ ಸಂದೇಶದಂತೆ ಕಾಣುತ್ತಿದೆ. ಆದರೂ ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು. ಅಧಿಕಾರಿಗಳು ಈ ವಿಷಯವನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ ಮತ್ತು ಸಂದೇಶ ಕಳಿಸಿರುವ ವ್ಯಕ್ತಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Digital Arrest: ಅಶ್ಲೀಲ ಫೋಟೋ ವೈರಲ್‌ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ

ಮುಂಬೈ 10 ದಿನಗಳ ಗಣೇಶ ಹಬ್ಬವನ್ನು ಆಚರಿಸುತ್ತಿರುವ ಸಮಯದಲ್ಲಿ ಈ ಬೆದರಿಕೆ ಸಂದೇಶ ಬಂದಿದೆ. ಕೊನೆಯ ದಿನವಾದ ಶನಿವಾರ ನಗರದ ಬೀದಿಗಳಲ್ಲಿ ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದ್ದು, ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ವಿವಿಧ ಸ್ಥಳಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವದಂತಿಗಳನ್ನು ನಂಬಬೇಡಿ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡುವಂತೆ ಪೊಲೀಸರು ಮುಂಬೈ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.

ಅನಂತ ಚತುರ್ದಶಿಯಂದು ವಿಗ್ರಹ ವಿಸರ್ಜನೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು 21,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಮೊದಲ ಬಾರಿಗೆ, ಪೊಲೀಸರು ಮಾರ್ಗ ನಿರ್ವಹಣೆ ಮತ್ತು ಇತರ ಸಂಚಾರ ಸಂಬಂಧಿತ ನವೀಕರಣಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಾರೆ. ನಿಯೋಜನೆಯಲ್ಲಿ 12 ಹೆಚ್ಚುವರಿ ಪೊಲೀಸ್ ಆಯುಕ್ತರು, 40 ಉಪ ಆಯುಕ್ತರು, 61 ಸಹಾಯಕ ಆಯುಕ್ತರು, 3,000 ಅಧಿಕಾರಿಗಳು ಮತ್ತು 18,000 ಪೊಲೀಸ್ ಸಿಬ್ಬಂದಿ ಸೇರಿದ್ದಾರೆ.