ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election: ಬಿಹಾರದ ಮತದಾರರ ಪಟ್ಟಿಯಲ್ಲಿದೆ ಪಾಕ್‌ ಪ್ರಜೆಗಳ ಹೆಸರು!

ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಮಾಡುತ್ತಿದೆ. ಈ ಪ್ರಕ್ರಿಯೆಯಲ್ಲಿ . ನಕಲಿ ಮತದಾರರು ಒಬ್ಬೊಬ್ಬರೇ ಹೊರಗೆ ಬೀಳುತ್ತಿದ್ದಾರೆ. ಇದೀಗ ಬಿಹಾರದಲ್ಲಿ ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಿದೆ. 1956 ರಲ್ಲಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನದ ಇಬ್ಬರು ಮಹಿಳೆಯರನ್ನು ಬಿಹಾರದಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಪಟನಾ: ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿ ತೀವ್ರ (Bihar Election) ಪರಿಷ್ಕರಣೆ (SIR) ಮಾಡುತ್ತಿದೆ. ಈ ಪ್ರಕ್ರಿಯೆಯಲ್ಲಿ . ನಕಲಿ ಮತದಾರರು ಒಬ್ಬೊಬ್ಬರೇ ಹೊರಗೆ ಬೀಳುತ್ತಿದ್ದಾರೆ. ಇದೀಗ ಬಿಹಾರದಲ್ಲಿ ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಿದೆ. 1956 ರಲ್ಲಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನದ ಇಬ್ಬರು ಮಹಿಳೆಯರನ್ನು ಬಿಹಾರದಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಅವರ ಹೆಸರುಗಳನ್ನು ಪರಿಶೀಲಿಸಲಾಗಿದೆ. ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ಆರಂಭವಾಗಿದೆ. ಇಬ್ಬರೂ ಮಹಿಳೆಯರು ವಯಸ್ಸಾದವರಾಗಿದ್ದಾರೆ.

ವೀಸಾ ಅವಧಿ ಮುಗಿದ ನಂತರವೂ ವಿದೇಶಿಯರು ಇಲ್ಲಿ ನೆಲೆಸಿರುವ ಬಗ್ಗೆ ಗೃಹ ಸಚಿವಾಲಯ ನಡೆಸಿದ ತನಿಖೆಯ ಸಂದರ್ಭದಲ್ಲಿ ಅವರ ಹೆಸರುಗಳು ಬೆಳಕಿಗೆ ಬಂದಿವೆ. ಈ ಇಬ್ಬರು ಮಹಿಳೆಯರನ್ನು ಭಾಗಲ್ಪುರ ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದು, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಅವರ ಹೆಸರುಗಳಲ್ಲಿ ಒಂದು ಇಮ್ರಾನಾ ಖಾನಮ್, ಅವರಿಗೆ ವಯಸ್ಸಾಗಿರುವ ಕಾರಣ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ಆದೇಶದಂತೆ, ನಾನು ಫಾರ್ಮ್ ಅನ್ನು ಭರ್ತಿ ಮಾಡಿ ಅವರ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅವರ ಪಾಸ್‌ಪೋರ್ಟ್ 1956 ರದ್ದಾಗಿದ್ದು, ಅವರಿಗೆ 1958 ರಲ್ಲಿ ವೀಸಾ ಸಿಕ್ಕಿತ್ತು. ಅವರು ಪಾಕಿಸ್ತಾನದವರು. ತನಿಖೆಯ ಮುಂದಿನ ಹಂತವನ್ನು ಇಲಾಖೆ ನಡೆಸುತ್ತದೆ ಎಂದಿದ್ದಾರೆ. ಗೃಹ ಸಚಿವಾಲಯದ ತನಿಖೆಯ ಪ್ರಕಾರ, ಟ್ಯಾಂಕ್ ಲೇನ್‌ನಲ್ಲಿ ಇಬ್ತುಲ್ ಹಸನ್ ಅವರ ಪತ್ನಿ ಇಮ್ರಾನಾ ಖಾನಮ್ ಅಲಿಯಾಸ್ ಇಮ್ರಾನಾ ಖಾತೂನ್ ಮತ್ತು ಮುಹಮ್ಮದ್ ತಫ್ಜೀಲ್ ಅಹ್ಮದ್ ಅವರ ಪತ್ನಿ ಫಿರ್ದೌಸಿಯಾ ಖಾನಮ್ ಅವರ ಹೆಸರಿನಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: Rahul Gandhi: ಬಿಹಾರದ ರ‍್ಯಾಲಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಮೇಲೆ ಹರಿದ ರಾಹುಲ್‌ ಗಾಂಧಿ ಕಾರು; ವಿಡಿಯೋ ವೈರಲ್‌

ಭಾಗಲ್ಪುರ ಜಿಲ್ಲಾಡಳಿತವು ವಿಚಾರಣೆ ಆರಂಭಿಸಿದೆ. ಇಬ್ಬರೂ ಮಹಿಳೆಯರಿಗೆ ನೋಟಿಸ್ ಕಳುಹಿಸಲಾಗುವುದು ಮತ್ತು ಅವರು ಅಗತ್ಯ ದಾಖಲೆಗಳೊಂದಿಗೆ ಸರಿಯಾದ ಸಮಯದಲ್ಲಿ ತಮ್ಮ ಪರವಾಗಿ ಹಾಜರುಪಡಿಸಬೇಕಾಗುತ್ತದೆ. ಇಬ್ಬರೂ ಮಹಿಳೆಯರು ಇಶಾಕ್‌ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ಭಿಕಾನ್‌ಪುರ್ ಗುಮ್ಟಿ ನಂ. 3 ಟ್ಯಾಂಕ್ ಲೇನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಮತದಾರರ ಚೀಟಿಗಳನ್ನು ಸಹ ನೀಡಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ, ಜಿಲ್ಲಾಡಳಿತವು ಹೆಸರು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.