ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay's Rally Stampede: ಕಾಲ್ತುಳಿತದ ಶಾಕಿಂಗ್‌ ವಿಡಿಯೋ ವೈರಲ್‌; ಮೃತರ ಸಂಖ್ಯೆ 39 ಕ್ಕೇರಿಕೆ

ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ (Vijay) ಆಯೋಜಿಸಿದ್ದ ಪ್ರಚಾರದ ರ‍್ಯಾಲಿಯ ವೇಳೆ (Vijay's Rally Stampede) ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 39 ಕ್ಕೇರಿದೆ. ಮೃತರಲ್ಲಿ ಒಂಬತ್ತು ಮಕ್ಕಳು ಮತ್ತು 17 ಮಹಿಳೆಯರು ಸೇರಿದ್ದು, 60 ಕ್ಕೂ ಮಂದಿಗೆ ಗಂಭೀರ ಗಾಯಗಳಾಗಿವೆ.

ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ (Vijay) ಆಯೋಜಿಸಿದ್ದ ಪ್ರಚಾರದ ರ‍್ಯಾಲಿಯ ವೇಳೆ (Vijay's Rally Stampede) ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 39 ಕ್ಕೇರಿದೆ. ಮೃತರಲ್ಲಿ ಒಂಬತ್ತು ಮಕ್ಕಳು ಮತ್ತು 17 ಮಹಿಳೆಯರು ಸೇರಿದ್ದು, 60 ಕ್ಕೂ ಮಂದಿಗೆ ಗಂಭೀರ ಗಾಯಗಳಾಗಿವೆ. ಕೆಲವು ಜನರು ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬಂದಿದ್ದರಿಂದ ಕಾಲ್ತುಳಿತ ಉಂಟಾಯಿತು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು "ಕನಿಷ್ಠ 30,000 ಜನರು ಸೇರಿದ್ದರು" ಎಂದು ಅಂದಾಜಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕರೂರು ಪಟ್ಟಣ ಪೊಲೀಸರು ಟಿವಿಕೆ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ಮತಿಯಲಗನ್ ಸೇರಿದಂತೆ ಹಲವರ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 109,110,125ಬಿ, 223 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಈ ಕಾಲ್ತುಳಿತ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಘೋಷಿಸಿದ್ದಾರೆ. ಇತ್ತ ದುರಂತದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ವಿಜಯ್‌ ಕರೂರಿನಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ.



ಮಧ್ಯರಾತ್ರಿ 1 ಗಂಟೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮಿಳುನಾಡು ಉಸ್ತುವಾರಿ ಡಿಜಿಪಿ ಜಿ ವೆಂಕಟರಾಮನ್ ಮಾತನಾಡಿ, ವಿಜಯ್ ಅವರ ಪಕ್ಷವು ಮೊದಲು ಕರೂರ್ ಲೈಟ್‌ಹೌಸ್ ರೌಂಡಾನಾದಲ್ಲಿ ರ್ಯಾಲಿ ನಡೆಸಲು ಅನುಮತಿ ಕೇಳಿತ್ತು. "ಆದಾಗ್ಯೂ, ಕಳೆದ ಎರಡು ರ್ಯಾಲಿಗಳಲ್ಲಿ ಭಾರಿ ಜನಸಂದಣಿಯನ್ನು ಪರಿಗಣಿಸಿ, ನಾವು ಆ ಪ್ರದೇಶದಲ್ಲಿ ಅನುಮತಿ ನೀಡಲಿಲ್ಲ, ಅದು ಇದಕ್ಕಿಂತ ಕಿರಿದಾಗಿತ್ತು. ಅವರು 10,000 ಜನರು ಬರುತ್ತಾರೆ ಎಂದು ಹೇಳಿದರು, ಆದರೆ 27,000 ಕ್ಕೂ ಹೆಚ್ಚು ಜನರು ಬಂದರು ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Vijay's Rally Stampede: 6 ಗಂಟೆ ವಿಳಂಬ... 30ಸಾವಿರಕ್ಕೂ ಅಧಿಕ ಜನ; ವಿಜಯ್‌ ರ‍್ಯಾಲಿಯಲ್ಲಿ ಅಷ್ಟಕ್ಕೂ ನಡೆದಿದ್ದೇನು?

ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಅನುಮತಿ ಕೇಳಲಾಗಿತ್ತು, ಮತ್ತು ವಿಜಯ್ ಮಧ್ಯಾಹ್ನ 12.30 ರ ವೇಳೆಗೆ ಅಲ್ಲಿಗೆ ತಲುಪುತ್ತಾರೆ ಎಂದು ಘೋಷಿಸಲಾಯಿತು. ಬೆಳಿಗ್ಗೆ 11 ಗಂಟೆಯಿಂದ ಜನಸಮೂಹ ಸೇರಲು ಪ್ರಾರಂಭಿಸಿತು, ಆದರೆ ಅವರು ಸಂಜೆ 7.40 ಕ್ಕೆ ಮಾತ್ರ ಸ್ಥಳವನ್ನು ತಲುಪಿದರು. ಜನಸಮೂಹಕ್ಕೆ ನೀರು ಅಥವಾ ಆಹಾರ ಸಿಗಲಿಲ್ಲ ಎಂದು ಹೇಳಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಎಕ್ಸ್ ನಲ್ಲಿ ಪೋಸ್ಟ್ ಮಾಡಿ ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ದುರಂತ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ 10 ಲಕ್ಷ ರೂ. ಮತ್ತು ಆಸ್ಪತ್ರೆಗಳಲ್ಲಿ ತೀವ್ರ ಚಿಕಿತ್ಸೆ ಪಡೆಯುತ್ತಿರುವವರಿಗೆ 1 ಲಕ್ಷ ರೂ. ಪರಿಹಾರ ನೀಡಲು ನಾನು ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.