ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Post: ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತದೆ ಎಂದು ಊಹಿಸುವ ಶತಮಾನದಷ್ಟು ಹಳೆಯ ಕಾರ್ಟೂನ್ ವೈರಲ್

Political Cartoon: ಭಾರತ, ಚೀನಾ ಮತ್ತು ಆಫ್ರಿಕಾದ ಉದಯವನ್ನು ಊಹಿಸುವ ಶತಮಾನದಷ್ಟು ಹಳೆಯ ರಾಜಕೀಯ ವ್ಯಂಗ್ಯಚಿತ್ರವೊಂದು ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯಿಂದ ಉಂಟಾದ ಹೊಸ ವ್ಯಾಪಾರ ಉದ್ವಿಗ್ನತೆಗಳ ನಡುವೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಇದು ಚಿಕಾಗೋ ಮೂಲದ ಸಮಾಜವಾದಿ ಪತ್ರಿಕೆಯಾದ ಡೈಲಿ ವರ್ಕರ್‌ನಲ್ಲಿ ಪ್ರಕಟವಾಗಿತ್ತು.

ನವದೆಹಲಿ: ಭಾರತ, ಚೀನಾ ಮತ್ತು ಆಫ್ರಿಕಾದ ಉದಯವನ್ನು ಊಹಿಸುವ ಶತಮಾನದಷ್ಟು ಹಳೆಯ ರಾಜಕೀಯ ವ್ಯಂಗ್ಯಚಿತ್ರವೊಂದು ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಸುಂಕ ನೀತಿಯಿಂದ ಉಂಟಾದ ಹೊಸ ವ್ಯಾಪಾರ ಉದ್ವಿಗ್ನತೆಗಳ ನಡುವೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಸೆಂಟರ್ ಫಾರ್ ಇನ್ನೋವೇಶನ್ ಇನ್ ಎಜುಕೇಶನ್ ಅಂಡ್ ಎಂಪವರ್‌ಮೆಂಟ್ (CIIEE) ನ ಉಪಾಧ್ಯಕ್ಷ ಆರ್.ಎಲ್. ನಾರಾಯಣನ್ ಅವರು ಹಂಚಿಕೊಂಡಿರುವ ಈ 1925 ರ ವ್ಯಂಗ್ಯಚಿತ್ರವನ್ನು ಮೂಲತಃ ಅಮೆರಿಕದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಬಾಬ್ ಮೈನರ್ ಚಿತ್ರಿಸಿದ್ದರು. ಇದು ಚಿಕಾಗೋ ಮೂಲದ ಸಮಾಜವಾದಿ ಪತ್ರಿಕೆಯಾದ ಡೈಲಿ ವರ್ಕರ್‌ನಲ್ಲಿ ಪ್ರಕಟವಾಗಿತ್ತು.

ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ಭವಿಷ್ಯದಲ್ಲಿ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳು ಜಾಗತಿಕ ಪ್ರಾಬಲ್ಯವನ್ನು ಕಳೆದುಕೊಳ್ಳಬಹುದಾದ ಸಂದರ್ಭವನ್ನು ಈ ಚಿತ್ರವು ಚಿತ್ರಿಸುತ್ತದೆ. ಹಲವಾರು ವರ್ಷಗಳಿಂದ ಕಡೆಗಣಿಸಲ್ಪಟ್ಟಿದ್ದ ಇದರ ಸಂದೇಶವು ಇದೀಗ ಜಾಗತಿಕ ಶಕ್ತಿಯ ಚಲನಶೀಲತೆ ಬದಲಾದಂತೆ ಹೊಸ ಪ್ರಸ್ತುತತೆಯನ್ನು ಪಡೆದುಕೊಂಡಿದೆ.

ನಿಖರವಾಗಿ 100 ವರ್ಷಗಳ ನಂತರ, ಬ್ರಿಕ್ಸ್ ಬಹುಧ್ರುವೀಯ ಜಗತ್ತಾಗಿ ರೂಪುಗೊಳ್ಳುತ್ತಿದೆ. ಜಾಗತಿಕ ಜನಸಂಖ್ಯೆಯ ಶೇ. 40 ಮತ್ತು ಡಾಲರ್ 30 ಟ್ರಿಲಿಯನ್ ಜಿಡಿಪಿಯನ್ನು ಅವರು ಹೊಂದಿದ್ದಾರೆ ಎಂದು ನಾರಾಯಣನ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ನೀವು ಯುದ್ಧವನ್ನು ಪ್ರಾರಂಭಿಸುವ ಮೊದಲು, ವಿಜಯದ ವೆಚ್ಚವನ್ನು ಲೆಕ್ಕ ಹಾಕಿ ಮತ್ತು ಶತ್ರುಗಳ ಸೇಡಿನ ವೆಚ್ಚವನ್ನು ಲೆಕ್ಕ ಹಾಕಿ ಎಂದು ನಾರಾಯಣನ್ ತಿಳಿಸಿದ್ದಾರೆ.



ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತೀಯ ಸರಕುಗಳ ಮೇಲೆ ತೀವ್ರ ಸುಂಕಗಳನ್ನು ಘೋಷಿಸಿರುವ ಸಮಯದಲ್ಲಿ ಈ ವ್ಯಂಗ್ಯಚಿತ್ರ ವೈರಲ್‌ ಆಗುತ್ತಿದೆ. ಆಗಸ್ಟ್ 7 ರಿಂದ ಜಾರಿಗೆ ಬಂದ ಶೇ. 25 ಪರಸ್ಪರ ಸುಂಕ, ಆಗಸ್ಟ್ 27 ರಿಂದ ಮತ್ತೆ ಶೇ. 25 ರಷ್ಟು ಹೆಚ್ಚಳದೊಂದಿಗೆ, ಕೆಲವು ಭಾರತೀಯ ರಫ್ತುಗಳ ಮೇಲಿನ ಒಟ್ಟು ಸುಂಕವನ್ನು ದ್ವಿಗುಣಗೊಳಿಸಲಾಗಿದೆ. ಇದು ಶೇ. 50ಕ್ಕೆ ತಲುಪಿದೆ.

ಈ ಸುದ್ದಿಯನ್ನೂ ಓದಿ: Allu Arjun: ಏರ್‌ಪೋರ್ಟ್‌ನಲ್ಲಿ ಮಾಸ್ಕ್ ತೆಗೆಯಲು ಒಪ್ಪದ ನಟ ಅಲ್ಲು ಅರ್ಜುನ್; ವಿಡಿಯೊ ವೈರಲ್

ಸದ್ಯ ನಾರಾಯಣನ್ ಅವರು ಮಾಡಿರುವ ಈ ಪೋಸ್ಟ್ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದ್ದು, ಬಳಕೆದಾರರು ಜಾಗತಿಕ ಶಕ್ತಿಯ ಬದಲಾವಣೆ ಮತ್ತು ಕಾರ್ಟೂನ್‌ನ ಐತಿಹಾಸಿಕ ಮಹತ್ವದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ನಮ್ಮ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅರಿತುಕೊಳ್ಳುವುದು ಬಹಳ ಮುಖ್ಯ ಎಂದು ಬರೆದಿದ್ದಾರೆ. ಅವರ ಬ್ರ್ಯಾಂಡ್‌ಗಳು ಮತ್ತು ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿ, ಅವರನ್ನು ಮಂಡಿಯೂರುವಂತೆ ಮಾಡಿ ಎಂದು ಪ್ರತಿಕ್ರಿಯಿಸಿದ್ದಾರೆ.