ನವದೆಹಲಿ: ಅಮೆಜಾನ್ ಇಂಡಿಯಾ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಎಚ್.ಪಿ.ಸಿ.ಎಲ್.) ಜೊತೆಯಲ್ಲಿ ಸಹಯೋಗ ಪ್ರಕಟಿಸಿದ್ದು ದೇಶಾದ್ಯಂತ 40 ಹೊಸ ಆಶ್ರಯ ಕೇಂದ್ರಗಳನ್ನು ಪ್ರಾರಂಭಿಸಲಿದೆ. ದೆಹಲಿ ವಾಯುವ್ಯ ಕ್ಷೇತ್ರದ ಸಂಸದ ಯೋಗೇಂದರ್ ಚಂದೋಲಿಯಾ ಅವರು ನವದೆಹಲಿಯ ರೋಹಿಣಿ ಪ್ರದೇಶದಲ್ಲಿ ಈ ಹೊಸ ಸೌಲಭ್ಯವನ್ನು ಉದ್ಘಾಟಿಸಿದರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಚ್.ಪಿ.ಸಿ.ಎಲ್.ನ ನಾನ್-ಫ್ಯೂಯೆಲ್ ಬಿಸಿನೆಸ್ ಎಕ್ಸಿಕ್ಯೂ ಟಿವ್ ಡೈರೆಕ್ಟರ್ ಶ್ರೀ ಮುರಳೀಕೃಷ್ಣ ವಿ. ವಾಡ್ರೇವು, ಭಾರತದ ಅಮೆಜಾನ್ ಆಪರೇಷನ್ಸ್ ನಿರ್ದೇಶಕ ಸಲೀಂ ಮೆಮೊನ್; ಮತ್ತು ಅಮೆಜಾನ್ ಯು.ಎಸ್.ಟ್ರಾನ್ಸ್ ಪೋರ್ಟೇಷನ್, ಸಸ್ಟೇನಬಿಲಿಟಿ ಅಂಡ್ ಕ್ಯೂಪರ್ ಪಬ್ಲಿಕ್ ಪಾಲಿಸಿಯ ಉಪಾಧ್ಯಕ್ಷ ಅಶ್ಲೀಘ್ ಡಿ ಲಾ ಟೊರ್ರೆ ಉಪಸ್ಥಿತರಿದ್ದರು.
ಈ ಸೇರ್ಪಡೆ ಯಿಂದ ಅಮೆಜಾನ್ ಈಗ 13 ನಗರಗಳಲ್ಲಿ 65 ಆಶ್ರಯ ಕೇಂದ್ರಗಳನ್ನು ಹೊಂದಿ ದಂತಾಗಿದ್ದು 2025ರ ಅಂತ್ಯದ ವೇಳೆಗೆ 100 ಅಂತಹ ಕೇಂದ್ರಗಳನ್ನು ಸ್ಥಾಪಿಸುವ ತನ್ನ ಗುರಿಗೆ ಹತ್ತಿರವಾಗಿದೆ. ದೆಹಲಿ ಎನ್.ಸಿ.ಆರ್.ನಲ್ಲಿ ಅಮೆಜಾನ್ ಈಗ ಒಟ್ಟಾಗಿ 24 ಆಶ್ರಯ ಕೇಂದ್ರಗಳನ್ನು ನಿರ್ವಹಿಸುತ್ತಿದೆ.
ಇದನ್ನೂ ಓದಿ: Vishweshwar Bhat Column: ಸಂಪಾದಕರು ತಲೆತಗ್ಗಿಸುವುದು ಯಾವಾಗ ?
ಆಶ್ರಯ ಕೇಂದ್ರಗಳು ಏರ್-ಕಂಡೀಷನ್ಡ್ ಸೀಟು, ಶುದ್ಧ ಕುಡಿಯುವ ನೀರು, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಗಳು, ವಾಷ್ ರೂಂಗಳು, ಪ್ರಥಮ ಚಿಕಿತ್ಸಾ ಕಿಟ್ ಮತ್ತಿತರೆ ಹೊಂದಿರುವ ವಿಶೇಷ ವಿಶ್ರಾಂತಿಯ ನಿಲುಗಡೆಗಳಾಗಿವೆ. ಭಾರತದ ಇಕಾಮರ್ಸ್ ಜಾಲದ ಎಲ್ಲ ಡೆಲಿವರಿ ಪಾಲುದಾರರೂ ಇಲ್ಲಿಗೆ ಭೇಟಿ ನೀಡಬಹುದು ಮತ್ತು ಆಶ್ರಯ ಕೇಂದ್ರಗಳ ಸೌಲಭ್ಯಗಳನ್ನು ಉಚಿತವಾಗಿ ಬಳಸ ಬಹುದು. 2024ರ 3ನೇ ತ್ರೈಮಾಸಿಕದಲ್ಲಿ ಪ್ರಾರಂಭವಾದ ದಿನದಿಂದ ಅವುಗಳ ಬಳಕೆಯಲ್ಲಿ ಶೇ.70ರಷ್ಟು ಹೆಚ್ಚಳ ಅನುಭವಿಸಿವೆ.
“ಪ್ರಾಜೆಕ್ಟ್ ಆಶ್ರಯ್ ಭಾರತದ ತೀವ್ರವಾಗಿ ವಿಸ್ತರಿಸುತ್ತಿರುವ ಗಿಗ್ ಅರ್ಥವ್ಯವಸ್ಥೆಯ ಅತ್ಯಂತ ಅಗತ್ಯವಾಗಿದೆ. ಮತ್ತು ಅಮೆಜಾನ್ ಗೆ ಅದರ ದೂರದೃಷ್ಟಿಗೆ ಪ್ರಶಂಸಿಸುತ್ತೇನೆ” ಎಂದು ದೆಹಲಿ ವಾಯುವ್ಯ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಯೋಗೇಂದರ್ ಚಾಂದೋಲಿಯಾ ಹೇಳಿದರು. “ನಮ್ಮ ದೇಶವು ತನ್ನ ಡಿಜಿಟಲ್ ಕಾಮರ್ಸ್ ಮೂಲಸೌಕರ್ಯವನ್ನು ಸದೃಢಗೊಳಿಸಿ ಕೊಳ್ಳುತ್ತಿದ್ದಂತೆ ಈ ಕೇಂದ್ರಗಳು ನಮ್ಮ ಉದ್ಯಮಗಳನ್ನು ಪ್ರತಿನಿತ್ಯ ಲಕ್ಷಾಂತರ ಉದ್ಯಮಗಳಿಗೆ ಸಂಪರ್ಕ ಒದಗಿಸುವ ಡೆಲಿವರಿ ವೃತ್ತಿಪರರಿಗೆ ಅಗತ್ಯ ಬೆಂಬಲ ನೀಡುತ್ತವೆ. ಸರ್ಕಾರವು ಕೆಲಸಗಾರರ ಕಲ್ಯಾಣ ಹೆಚ್ಚಿಸುವ ಹಾಗೂ ಭಾರತದ ಆರ್ಥಿಕ ಪ್ರಗತಿಯನ್ನು ಸುಧಾರಿಸುವ ಅಂತಹ ಆವಿಷ್ಕಾರ ಗಳ ಹಿಂದೆ ದೃಢವಾಗಿ ನಿಲ್ಲುತ್ತದೆ. ಈ ಉಪಕ್ರಮವು ಕೆಲಸಕ್ಕೆ ನಿಮ್ಮ ಬದ್ಧತೆಯು ನಿಜಕ್ಕೂ ಗಮನಾರ್ಹವಾದುದು ಮತ್ತು ಅದು ಮಹತ್ತರವಾದ ಪ್ರಶಂಸನೀಯವಾದುದು ಎನ್ನುವುದನ್ನು ಬಿಂಬಿಸುತ್ತದೆ” ಎಂದರು.

“ನಮ್ಮ ಡೆಲಿವರಿ ಪಾಲುದಾರರ ಸೌಖ್ಯವು ಅಮೆಜಾನ್ ನಲ್ಲಿ ನಮ್ಮ ಮೊದಲ ಮತ್ತು ಅತ್ಯಂತ ಪ್ರಮುಖ ಆದ್ಯತೆಯಾಗಿದೆ” ಎಂದು ಅಮೆಜಾನ್ ಆಪರೇಷನ್ಸ್ ಇಂಡಿಯಾದ ನಿರ್ದೇಶಕ ಸಲೀಂ ಮೆಮೊನ್ ಹೇಳಿದರು. “ಈ ಆಶ್ರಯ ಕೇಂದ್ರಗಳು ಒತ್ತಡದ ಟ್ರಾಫಿಕ್ ಮತ್ತು ತೀವ್ರವಾದ ವಾತಾ ವರಣದ ಪರಿಸ್ಥಿತಿಗಳಲ್ಲಿ ಮುನ್ನಡೆಯುವಾಗ ಡೆಲಿವರಿ ಪಾಲುದಾರರು ಎದುರಿಸುವ ಪ್ರತಿನಿತ್ಯದ ಸವಾಲುಗಳನ್ನು ಎದುರಿಸಲು ನೆರವಾಗುತ್ತವೆ.
ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮತ್ತು ಈ ಸೌಲಭ್ಯಗಳನ್ನು ಎಲ್ಲ ಕಂಪನಿಗಳಿಗೆ ಡೆಲಿವರಿ ಮಾಡುತ್ತಿರುವವರಿಗೂ ಮುಕ್ತವಾಗಿಸುವ ಮೂಲಕ ನಾವು ಡೆಲಿವರಿ ಅಸೋಸಿಯೇಟ್ ಗಳ ಕಲ್ಯಾಣಕ್ಕೆ ನಮ್ಮ ಬದ್ಧತೆಯನ್ನು ಮರು ದೃಢೀಕರಿಸಿದ್ದೇವೆ. ಎಚ್.ಪಿ.ಸಿ.ಎಲ್. ಜೊತೆಯಲ್ಲಿ ನಮ್ಮ ಸಹಯೋಗವು ನಮಗೆ ಈ ಜಾಲವನ್ನು ತೀವ್ರವಾಗಿ ವಿಸ್ತರಿಸಲು ಹಾಗೂ ಭಾರತದ ಡಿಜಿಟಲ್ ಅರ್ಥವ್ಯವಸ್ಥೆಗೆ ಶಕ್ತಿ ತುಂಬಲು ಮೊದಲ ಸಾಲಿನ ಕೆಲಸಗಾರರಿಗೆ ಬೆಂಬಲಿಸಲು ಸನ್ನದ್ಧವಾಗಿಸಿದೆ” ಎಂದರು.
“ಅಮೆಜಾನ್ ನಲ್ಲಿ ನಮ್ಮ ಇಂಧನ ಕೇಂದ್ರಗಳನ್ನ ಮರು ಕಲ್ಪಿಸುವ ಮೂಲಕ ನಾವು ಭಾರತ ದಾದ್ಯಂತ ಡೆಲಿವರಿ ಪಾಲುದಾರರಿಗೆ ಅಗತ್ಯ ಆಶ್ರಯ ತಾಣಗಳನ್ನು ಸೃಷ್ಟಿಸುತ್ತಿದ್ದೇವೆ” ಎಂದು ಎಚ್.ಪಿ.ಸಿ.ಎಲ್.ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮುರಳಿ ಕೃಷ್ಣ ವಿ. ವಾಡ್ರೇವ ಹೇಳಿದರು. “ಈ ಉಪ ಕ್ರಮವು ಡೆಲಿವರಿ ಪಾಲುದಾರರಿಗೆ ಅವರ ಒತ್ತಡದ ದಿನಗಳಲ್ಲಿ ವಿರಮಿಸುವ ಕ್ಷಣಗಳನ್ನು ನೀಡು ತ್ತದೆ. ಈ ಆಶ್ರಯ ಕೇಂದ್ರಳು ಭಾರತದ ಗಿಗ್ ಅರ್ಥವ್ಯವಸ್ಥೆಯ ಉದ್ಯೋಗಪಡೆಗೆ ಘನತೆಯಿಂದ ಬೆಂಬಲಿಸಲು ಮತ್ತು ಭಾರತೀಯರ ಮನೆಬಾಗಿಲುಗಳಿಗೆ ಪೂರೈಸುವ ಪ್ರತಿ ಪ್ಯಾಕೇಜ್ ಹಿಂದೆ ಇರುವ ಮಾನವತೆಯನ್ನು ಗುರುತಿಸಲು ನಮ್ಮ ಬದ್ಧತೆಯನ್ನು ಬಿಂಬಿಸುತ್ತವೆ” ಎಂದರು.
ಅಮೆಜಾನ್ ಈ ಹಬ್ಬದ ಋತುವಿಗೆ ಸಜ್ಜಾಗುತ್ತಿದೆ
ಕಳೆದ ವಾರ ಅಮೆಜಾನ್ ಮುಂದಿನ ಹಬ್ಬದ ಋತುವಿಗೆ ಲಕ್ಷಾಂತರ ಗ್ರಾಹಕರಿಗೆ ಸೇವೆ ಒದಗಿಸಲು ಫುಲ್ ಫಿಲ್ಮೆಂಟ್ ಕೇಂದ್ರಗಳು, ಸಾರ್ಟ್ ಕೇಂದ್ರಗಳು ಮತ್ತು ಕೊನೆಯ ಹಂತದ ಡೆಲಿವರಿ ಜಾಲ ದಾದ್ಯಂತ 150,000ಕ್ಕೂ ಹೆಚ್ಚು ಋತು ಆಧರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವುದಾಗಿ ಪ್ರಕಟಿಸಿತ್ತು. ಈ ಅವಕಾಶಗಳಲ್ಲಿ ಭಾರತದಾದ್ಯಂತ 400+ ನಗರಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಒಳಗೊಂಡಿದ್ದು ಅದರಲ್ಲಿ ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಲಖನೌ, ಕೊಚ್ಚಿ, ಕೊಯಮತ್ತೂರು, ಇಂದೋರ್, ರಾಯ್ಪುರ, ಜಲಂಧರ್, ಜೋಧ್ಪುರ್, ರಾಂಚಿ, ಅನಂತ್ ನಾಗ್, ಜಲಗಾಂವ್ ಮತ್ತಿತರೆ ನಗರಗಳಿವೆ.
ವಿಶೇಷವೆಂದರೆ ಅಮೆಜಾನ್ ಸಾವಿರಾರು ಮಹಿಳಾ ಅಸೋಸಿಯೇಟ್ ಗಳು ಹಾಗೂ 2000ಕ್ಕೂ ಹೆಚ್ಚು ಪಿಡಬ್ಲ್ಯೂಡಿ (ವಿಶೇಷ ಚೇತನರು)ಗಳಿಗೆ ತನ್ನ ಜಾಲದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಅಮೆಜಾನ್ ಇಂಡಿಯಾ ಈಗಾಗಲೇ ಇವರಲ್ಲಿ ಬಹಳಷ್ಟು ಹೊಸ ಅಸೋಸಿಯೇಟ್ ಗಳ ಸೇರ್ಪಡೆ ಮಾಡಿಕೊಂಡಿದೆ.