ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amir Khan Muttaqi: ಭಾರತಕ್ಕೆ ಭೇಟಿ ನೀಡಲಿದ್ದಾರೆ ತಾಲಿಬಾನ್ ವಿದೇಶಾಂಗ ಸಚಿವ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದನೆಯ ಬಳಿಕ ಇದೀಗ ಅಕ್ಟೋಬರ್ 9 ರಿಂದ 16 ರವರೆಗೆ ಅಫ್ಘಾನ್ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಭೇಟಿ ನೀಡಲಿಲಿದ್ದಾರೆ. ರಷ್ಯಾಕ್ಕೆ ಭೇಟಿ ನೀಡಿದ ಬಳಿಕ ಅವರು ಭಾರತಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ನವದೆಹಲಿ: ಅಫ್ಘಾನ್ ತಾಲಿಬಾನ್ ವಿದೇಶಾಂಗ ಸಚಿವ (Afghan Taliban Foreign Minister) ಅಮೀರ್ ಖಾನ್ ಮುತ್ತಕಿ (Amir Khan Muttaqi) ಅವರು ಅಕ್ಟೋಬರ್ 9 ರಿಂದ 16 ರವರೆಗೆ ಭಾರತಕ್ಕೆ (India) ಭೇಟಿ ನೀಡಲಿದ್ದಾರೆ. ಇವರ ದೆಹಲಿ ಭೇಟಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UN Security Council) ಅನುಮೋದನೆ ನೀಡಿದೆ. 1988ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯದ ಅಡಿಯಲ್ಲಿ ತಾಲಿಬಾನ್ ನಾಯಕರು ಅಂತಾರಾಷ್ಟ್ರೀಯ ಪ್ರಯಾಣ ಮಾಡಬೇಕಾದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಮಿತಿಯ ಪೂರ್ವಾನುಮತಿ ಪಡೆಯುವ ಅಗತ್ಯವಿದೆ. ಅಂತೆಯೇ ಇದೀಗ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿಗೆ ನವದೆಹಲಿ ಅನುಮತಿ ಕೋರಿದ ಬಳಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುವಾರ ಅನುಮೋದನೆ ನೀಡಿದೆ ಎನ್ನಲಾಗಿದೆ.

ಅಮೀರ್ ಖಾನ್ ಮುತ್ತಕಿ ಅವರು ಅಕ್ಟೋಬರ್ 6 ರಂದು ರಷ್ಯಾಕ್ಕೆ ಭೇಟಿ ನೀಡಲಿದ್ದು, ಬಳಿಕ ಅಲ್ಲಿಂದ ಅಕ್ಟೋಬರ್ 9ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಇಲ್ಲಿ ಅವರು ಅ. 16 ರವರೆಗೆ ನವದೆಹಲಿಯಲ್ಲಿರುತ್ತಾರೆ ಎಂಬುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ದೃಢಪಡಿಸಿದೆ. ಈ ಹಿಂದೊಮ್ಮೆ ಅವರ ಭೇಟಿಗೆ ವಿಶ್ವಸಂಸ್ಥೆ ಅನುಮತಿ ನಿರಾಕರಿಸಿತ್ತು.

ತಾಲಿಬಾನ್ ನಾಯಕರಿಗೆ ಅನುಮೋದಿತ ಸ್ಥಾನ ನೀಡಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅವರ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ 1988ರ ಆಡಳಿತದ ಅಡಿಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಹೀಗಾಗಿ ತಾಲಿಬಾನ್ ನಾಯಕರಿಗೆ ವಿದೇಶ ಪ್ರಯಾಣ ಮಾಡಬೇಕಾದರೆ ಭದ್ರತಾ ಮಂಡಳಿ ಸಮಿತಿಯಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿದೆ.

ಅಮೀರ್ ಖಾನ್ ಮುತ್ತಕಿ ಅವರು ನವದೆಹಲಿಗೆ ಆಗಮಿಸುತ್ತಿರುವುದು ಭಾರತ- ತಾಲಿಬಾನ್ ಸಂಬಂಧದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಯಾಕೆಂದರೆ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಭಾರತದ ಕಾರ್ಯತಂತ್ರದ ನಡೆಯಾಗಿದೆ. ಮುತ್ತಕಿ ಅವರು 2021ರಿಂದ ಅಫ್ಘಾನ್ ನ ವಿದೇಶಾಂಗ ಸಚಿವರಾಗಿದ್ದಾರೆ.

ಇದನ್ನೂ ಓದಿ: Earthquake: ಮ್ಯಾನ್ಮಾರ್‌, ಅರ್ಜೆಂಟೀನಾದಲ್ಲಿ ಭೂಕಂಪನ

ಕಳೆದ ಮೇ ತಿಂಗಳಲ್ಲಿ ಅವರು ಬೀಜಿಂಗ್‌ನಲ್ಲಿ ಚೀನಾ ಮತ್ತು ಪಾಕಿಸ್ತಾನದ ರಾಯಭಾರಿಗಳೊಂದಿಗೆ ಅನೌಪಚಾರಿಕ ಸಭೆಯನ್ನು ನಡೆಸಿದ್ದರು. ಈ ವೇಳೆ 60 ಬಿಲಿಯನ್ ಡಾಲರ್ ವೆಚ್ಚದ ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸುವ ಕುರಿತು ಚರ್ಚೆ ನಡೆಸಲಾಗಿತ್ತು. ಇದರಿಂದ ಭಾರತದ ಸುರಕ್ಷತೆಗೆ ಅಡ್ಡಿಯಾಗುವ ಆತಂಕದ ಹಿನ್ನೆಲೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಸಾಗುವಈ ಯೋಜನೆಯನ್ನು ಭಾರತ ವಿರೋದಿಸುತ್ತಿದೆ.

ವಿದ್ಯಾ ಇರ್ವತ್ತೂರು

View all posts by this author