ಅಮುಲ್ (Amul) ಬ್ರಾಂಡ್ ಅಡಿಯಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ಇಂದು ಜಿಎಸ್‌ಟಿ ದರ ಕಡಿತದ ಹಿನ್ನೆಲೆಯಲ್ಲಿ ತನ್ನ ಉತ್ಪನ್ನಗಳ ಮೇಲಿನ ಬೆಲೆಯನ್ನು ಕಡಿತಗೊಳಿಸಿದೆ. ತುಪ್ಪ, ಬೆಣ್ಣೆ ಐಸ್ ಕ್ರೀಮ್, ಬೇಕರಿ ಮತ್ತು ಫ್ರೋಜನ್ ಪದಾರ್ಥಗಳು ಸೇರಿದಂತೆ 700ಕ್ಕೂ ಹೆಚ್ಚು ಉತ್ಪನ್ನಗಳ ಪ್ಯಾಕ್‌ಗಳ ಮೇಲಿನ ಬೆಲೆಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಹೊಸ ಬೆಲೆ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಬಗ್ಗೆ ಹೇಳಿಕೆಯನ್ನು ನೀಡಿರುವ GCMMF 700ಕ್ಕೂ ಹೆಚ್ಚು ಉತ್ಪನ್ನಗಳ ಪ್ಯಾಕ್‌ಗಳ ಬೆಲೆ ಪಟ್ಟಿಯಲ್ಲಿ ಪರಿಷ್ಕರಣೆಯನ್ನು ಘೋಷಿಸಿದ್ದು, ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ ತನ್ನ ಗ್ರಾಹಕರಿಗೆ ಜಿಎಸ್‌ಟಿ ಕಡಿತದ ಸಂಪೂರ್ಣ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದೆ.
ಬೆಣ್ಣೆ, ತುಪ್ಪ, ಯುಎಚ್‌ಟಿ ಹಾಲು ಮತ್ತು ಐಸ್ ಕ್ರೀಮ್‌ನಂತಹ ಡೈರಿ ಅಗತ್ಯ ವಸ್ತುಗಳು ಹಾಗೂ ಬೇಕರಿ ವಸ್ತುಗಳು ಮತ್ತು ಫ್ರೋಜನ್ ತಿಂಡಿಗಳು ಸೇರಿದಂತೆ ಅಮುಲ್ ಉತ್ಪನ್ನಗಳ ಬೆಲೆ ಕಡಿತವಾಗಲಿದೆ. ಚೀಸ್, ಪನೀರ್, ಚಾಕೊಲೇಟ್‌ಗಳು, ಮಾಲ್ಟ್ ಆಧಾರಿತ ಪಾನೀಯಗಳು ಮತ್ತು ಕಡಲೆಕಾಯಿ ಸ್ಪ್ರೆಡ್‌ನಂತಹ ಇತರ ಉತ್ಪನ್ನಗಳ ಬೆಲೆಗಳು ಕಡಿಮೆಯಾಗಲಿದೆ. ಈ ಬೆಲೆ ಕಡಿತವು ಅಮುಲ್ ಬೆಣ್ಣೆಯ (100 ಗ್ರಾಂ) MRP ಅನ್ನು ಒಳಗೊಂಡಿದೆ. ಇದನ್ನು 62 ರೂ.ನಿಂದ 58 ರೂ.ಗೆ ಇಳಿಸಲಾಗುವುದು.
GCMMF, GST ಕಡಿತದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವ ನಿರ್ಧಾರವು ಉತ್ತಮ ಗುಣಮಟ್ಟದ ಡೈರಿ ಮತ್ತು ಆಹಾರ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುವ ತನ್ನ ಬದ್ಧತೆಗೆ ಅನುಗುಣವಾಗಿದೆ ಎಂದು ಒತ್ತಿ ಹೇಳಿದೆ. 700 ಕ್ಕೂ ಹೆಚ್ಚು ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ, ಅಮುಲ್ ಉತ್ಪನ್ನಗಳು ಕೈಗೆಟುಕುವ ಬೆಲೆ ನೀಡುತ್ತಿದೆ. KMF ಸಹ ಡೈರಿ ಉತ್ಪನ್ನಗಳ ಮೇಲಿನ ಬೆಲೆಯನ್ನು ಕಡಿಮೆ ಮಾಡಿದೆ.
ಈ ಸುದ್ದಿಯನ್ನೂ ಓದಿ: ಕಚ್ಚಾ ತೈಲ ಬೆಲೆ ಕಡಿಮೆ ಇದ್ರೂ ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ: ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ
1000 ಮಿಲಿ ಲೀಟರ್ ತುಪ್ಪ ಹಳೆಯ ದರ 650 ಇದ್ದರೆ, ಹೊಸ ದರ 610 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇನ್ನು 500 ಮಿಲಿ ಲೀಟರ್ ಬೆಣ್ಣೆ ಹಳೆಯ ದರ 306 ಇದ್ದರೆ ಹೊಸದರ 286 ರೂಪಾಯಿ ಇದೆ. ಇನ್ನು 1000 ಗ್ರಾಮ ಪನೀರ್ ಹಳೆಯ ದರ 425 ಇದ್ದರೆ, ಹೊಸ ದರ 408 ರೂಪಾಯಿ ಇದೆ. ಒಂದು ಲೀಟರ್ ಗುಡ್ ಲೈಫ್ ಹಾಲು, ಹಳೆಯ ದರೆ ರೂ.70 ಇದ್ದರೆ, ಹೊಸದರ 68 ರೂಪಾಯಿ ಇದೆ. ಚೀಸ್ ಒಂದಕ್ಕೆ ಹಳೆಯದರ 480 ಇದ್ದರೆ ಹೊಸದರ 450 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸಂಸ್ಕರಿಸಿದ ಚೀಸ್ ಹಳೆಯದರ 530 ಇದ್ದರೆ ಹೊಸದರ 497ಕ್ಕೆ ಇಳಿಕೆ ಮಾಡಲಾಗಿದೆ. ಇನ್ನು ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡುವ ವಿಚಾರವಾಗಿ ಹಾಲು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಲಿನ ಉತ್ಪನ್ನಗಳಿಗೆ ಮಾತ್ರ ದರ ಇಳಿಕೆ ಮಾಡಲಾಗಿದೆ