ಹೈದರಾಬಾದ್: ಆಂಧ್ರಪ್ರದೇಶದ 25 ವರ್ಷದ ಮಹಿಳೆಯೊಬ್ಬರು (Viral News) ಚಿಕಾಗೋದಲ್ಲಿ ಪೊಲೀಸ್ ಆಗಿರುವ ತನ್ನ ಪತಿ ಮಾನಸಿಕ ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಭಾರತ ಸರ್ಕಾರದ ನೆರವನ್ನು ಕೇಳಿದ್ದಾರೆ. ಈ ವಿಷಯದಲ್ಲಿ ತುರ್ತು ಮಧ್ಯಪ್ರವೇಶಿಸುವಂತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಆಗಸ್ಟ್ 22 ರಂದು ಶ್ರೀ ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ, ಸಂತ್ರಸ್ತೆ ಹನಾ ಅಹ್ಮದ್ ಖಾನ್, ಜೂನ್ 22, 2022 ರಂದು ಮದುವೆಯಾದಾಗಿನಿಂದ ತನ್ನ ಪತಿ ಮೊಹಮ್ಮದ್ ಜೈನ್ ಉದ್ದೀನ್, ತನ್ನನ್ನು ನಿರಂತರ "ಭಾವನಾತ್ಮಕ ಕಿರುಕುಳ, ದೈಹಿಕ ಕಿರುಕುಳ ಮತ್ತು ಮಾನಸಿಕ ಹಿಂಸೆ"ಗೆ ಒಳಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆಕೆಯ ಪತಿಯಿಂದ ಈ ವರೆಗೆ ಯಾವುದೇ ಹೇಳಿಕೆ ಬಂದಿಲ್ಲ. ಆದರೆ ಕೆಲ ವರದಿಗಳ ಪ್ರಕಾರ, ದಂಪತಿ ಪರಸ್ಪರ ಒಪ್ಪಿಗೆಯ ಮೇಲೆ ಬೇರ್ಪಟ್ಟಿದ್ದು, ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದೆ. ಭಾರತ ಮತ್ತು ಅಮೆರಿಕ ಎರಡೂ ದೇಶಗಳ ಅಧಿಕಾರಿಗಳು ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚಿಕಾಗೋ ಪೊಲೀಸ್ ಇಲಾಖೆಯ ಅಧಿಕಾರಿಯಾಗಿದ್ದ ಉದ್ದೀನ್ ಅವರು ಹೈದರಾಬಾದ್‌ನಲ್ಲಿ ತಮ್ಮ ವಿವಾಹದ ಸ್ವಲ್ಪ ಸಮಯದ ನಂತರ ಅಮೆರಿಕಕ್ಕೆ ಮರಳಿದರು ಮತ್ತು ಸುಮಾರು ಎರಡು ವರ್ಷಗಳ ಕಾಲ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ನನ್ನ ಪತಿ ಪಾಸ್‌ಪೋರ್ಟ್, ಗ್ರೀನ್ ಕಾರ್ಡ್ ಮತ್ತು ವೈಯಕ್ತಿಕ ಆಭರಣಗಳು ಸೇರಿದಂತೆ ಹಲವು ವಸ್ತುಗಳನ್ನು ತೆಗೆದುಕೊಂಡಿದ್ದಾರೆ. ತನ್ನ ಪತಿಯ ವಿರುದ್ಧದ ಪ್ರಕರಣವನ್ನು ಕಾನೂನುಬದ್ಧವಾಗಿ ಹೋರಾಡಲು ಸಾಧ್ಯವಾಗುವಂತೆ ತನ್ನ ದಾಖಲೆಗಳನ್ನು ಮರಳಿ ಪಡೆಯಲು ಮತ್ತು ಅಮೆರಿಕಕ್ಕೆ ಮರಳಲು ಮಹಿಳೆ ವಿದೇಶಾಂಗ ಸಚಿವರ ಸಹಾಯವನ್ನು ಕೋರಿದ್ದಾರೆ. ನಾನು ಹೈದರಾಬಾದ್‌ನಲ್ಲಿರುವ ದೂತಾವಾಸಕ್ಕೆ ಹೋಗಿದ್ದೆ ಆದರೆ ಹೆಚ್ಚಿನ ಸಹಾಯ ಸಿಗಲಿಲ್ಲ. ಕಳೆದ ನಾಲ್ಕೈದು ತಿಂಗಳಿನಿಂದ ನಾನು ಕಷ್ಟಪಡುತ್ತಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಪ್ರತ್ಯೇಕ ಪೊಲೀಸ್ ದೂರಿನಲ್ಲಿ, ಮಹಿಳೆ ತನ್ನ ಕುಟುಂಬವು ತನ್ನ ಮದುವೆಗೆ 20 ಲಕ್ಷ ರೂಪಾಯಿ ಖರ್ಚು ಮಾಡಿದೆ ಮತ್ತು ವರದಕ್ಷಿಣೆಯಾಗಿ ಚಿನ್ನ ಮತ್ತು ಉಡುಗೊರೆಗಳನ್ನು ನೀಡಿದೆ ಎಂದು ಆರೋಪಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ: Dowry Harassment: ವರದಕ್ಷಿಣೆ ಕಿರುಕುಳ ದೂರು, ನಿರ್ದೇಶಕ ಎಸ್. ನಾರಾಯಣ್ ಹೇಳುವುದೇನು?
ತನ್ನ ಪತಿಯ ವಿರುದ್ಧದ ಪ್ರಕರಣವನ್ನು ಕಾನೂನುಬದ್ಧವಾಗಿ ಹೋರಾಡಲು ಸಾಧ್ಯವಾಗುವಂತೆ ತನ್ನ ದಾಖಲೆಗಳನ್ನು ನೀಡಲು ಮತ್ತು ಅಮೆರಿಕಕ್ಕೆ ಮರಳಲು ಸಹಾಯ ಮಾಡಲು ಅವರು ವಿದೇಶಾಂಗ ಸಚಿವರ ಸಹಾಯವನ್ನು ಕೋರಿದ್ದಾರೆ.