ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ 75ನೇ ಹುಟ್ಟುಹಬ್ಬದ ಸಲುವಾಗಿ ಹಲವು ಗಣ್ಯರು ಶುಭಕೋರಿದ್ದಾರೆ. ವಿವಿಧ ದೇಶದ ನಾಯಕರು ಮೋದಿಗೆ ಹುಟ್ಟಿದ ದಿನ ಶುಭಾಶಯ ಕೋರಿದರು. ನಿನ್ನೆ ವಿಶೇಷವಾಗಿ ದುಬೈನ ಐಕಾನಿಕ್ ಬುರ್ಜ್ ಖಲೀಫಾದ (Burj Khalifa) ಮೇಲೆ ಮೋದಿ ಅವರಿಗೆ ಜನ್ಮದ ದಿನದ ಶುಭಾಶಯ ಎಂದು ಬರೆಯಲಾಗಿತ್ತು. ಇದು ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಪಾಲುದಾರಿಕೆಯನ್ನು ಬಲಪಡಿಸುವುದನ್ನು ಸಂಕೇತಿಸುತ್ತದೆ. ವಿಶ್ವದ ಅತಿ ಎತ್ತರದ ಕಟ್ಟಡದ ಮೇಲೆ ಪ್ರಧಾನಿಯ ಚಿತ್ರ ಬೆಳಗಿದೆ.
ಇದಕ್ಕೂ ಮುನ್ನ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸಾಮಾಜಿಕ ಮಾಧ್ಯಮದಲ್ಲಿ ಮುಕ್ತ ಹೃದಯದ ಶುಭಾಶಯ ಕೋರಿದರು. "ನರೇಂದ್ರ ಮೋದಿ ಅವರಿಗೆ ನಿಮ್ಮ ಹುಟ್ಟುಹಬ್ಬದ ಅಭಿನಂದನೆಗಳು. ನೀವು ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಗಳಿಸಬೇಕೆಂದು ನಾನು ಆಶಿಸುತ್ತೇನೆ ಎಂದು ನಾನು ಬಯಸುತ್ತೇನೆ, ಮತ್ತು ಭಾರತದ ಪ್ರಗತಿ ಮತ್ತು ಅದರ ಜನರ ಸಮೃದ್ಧಿಯನ್ನು ಮುನ್ನಡೆಸುವಲ್ಲಿ ನಿರಂತರ ಯಶಸ್ಸನ್ನು ಬಯಸುತ್ತೇನೆ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಜಗತ್ತಿನಾದ್ಯಂತ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬಂದಿವೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿ ಶುಭ ಹಾರೈಸಿದರು. "ಪ್ರಧಾನಿ @narendramodi, 75 ನೇ ಹುಟ್ಟುಹಬ್ಬದ ಶುಭಾಶಯಗಳು! ನಿಮ್ಮ ನಾಯಕತ್ವದ ಕಾರ್ಯದಿಂದ ನಾನು ಪ್ರಭಾವಿತನಾಗಿದ್ದೇನೆ. ನಿಮ್ಮ ವಿಶೇಷ ದಿನದಂದು ಸಹ, ನೀವು ಭಾರತದಲ್ಲಿ ಮಹಿಳೆಯರ ಆರೋಗ್ಯವನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಒಂದು ಪ್ರಮುಖ ಉಪಕ್ರಮವನ್ನು ಪ್ರಾರಂಭಿಸುತ್ತಿದ್ದೀರಿ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi Biopic: ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಅನೌನ್ಸ್ ! ಮೋದಿ ಪಾತ್ರದಲ್ಲಿ ಮಲಯಾಳಂ ನಟ ಉಣ್ಣಿ ಮುಕುಂದನ್
ಯುನೈಟೆಡ್ ಕಿಂಗ್‌ಡಮ್‌ನ ರಾಜ ಚಾರ್ಲ್ಸ್ ಕೂಡ ಮೋದಿಗೆ ಶುಭ ಹಾರೈಸಿದ್ದಾರೆ. 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನದಿಂದ ಪ್ರೇರಿತರಾಗಿ ಅವರು ಭಾರತದ ಪ್ರಧಾನಿಗೆ ಕದಂಬ ಮರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಬ್ರಿಟಿಷ್ ಹೈಕಮಿಷನ್ X ನಲ್ಲಿ ಮಾಹಿತಿ ನೀಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ಶುಭ ಕೋರಿದ್ದಾರೆ.