ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anil Ambani: 2,000 ಕೋಟಿ ರೂ. ಬ್ಯಾಂಕ್‌ ವಂಚನೆ ಆರೋಪ; ಅನಿಲ್ ಅಂಬಾನಿ ಕಂಪನಿ ಮೇಲೆ ಸಿಬಿಐ ದಾಳಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ 2,000 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟುಮಾಡಿದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಶನಿವಾರ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್‌ಸಿಒಎಂ) ಮತ್ತು ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ 2,000 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟುಮಾಡಿದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಶನಿವಾರ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್‌ಸಿಒಎಂ) ಮತ್ತು ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿಗೆ (Anil Ambani) ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಮುಂಬೈನ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಈ ಹಿಂದೆ ಕೂಡ ಅನಿಲ್‌ ಅಂಬಾನಿಗೆ ಸೇರಿದ ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿತ್ತು.

ರಿಲಯನ್ಸ್ ಗ್ರೂಪ್‌ಗೆ ಸಂಬಂಧಿಸಿದ ಮುಂಬೈನಲ್ಲಿ ಸುಮಾರು 35 ಸ್ಥಳಗಳ ಮೇಲೆ ED ದಾಳಿ ನಡೆಸಿತ್ತು. ಸೆಬಿ ವರದಿಯ ಪ್ರಕಾರ, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ (ಆರ್ ಇನ್ಫ್ರಾ), ಸಿಎಲ್ಇ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಮೂಲಕ 10,000 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದೆ. ಈ ಕಂಪನಿಯು ರಿಲಯನ್ಸ್ ಗ್ರೂಪ್‌ನೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ. ಅನಿಲ್ ಅಂಬಾನಿ ಮತ್ತು ಅವರ ಕಂಪನಿ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಅನ್ನು 'ವಂಚನೆ' ಎಂದು ಎಸ್‌ಬಿಐ ಇತ್ತೀಚೆಗೆ ಘೋಷಿಸಿದ ನಂತರ ಇಡಿ ಈ ಕ್ರಮವನ್ನು ಕೈಗೊಂಡಿದೆ. ಎಸ್‌ಬಿಐ, ಅನಿಲ್ ಅಂಬಾನಿ ಹಾಗೂ ಕಂಪನಿಯನ್ನು ಜೂ.13ರಂದು ‘ವಂಚಕ’ ಎಂದು ವರ್ಗೀಕರಿಸಿ, ಆರ್‌ಬಿಐಗೆ ವರದಿ ನೀಡಿತ್ತು.

ಇ.ಡಿ.ಯಿಂದ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬ್ಯಾಂಕುಗಳು, ಷೇರುದಾರರು, ಹೂಡಿಕೆದಾರರು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನು ವಂಚಿಸುವ ಮೂಲಕ ಸಾರ್ವಜನಿಕ ಹಣವನ್ನು ಬೇರೆಡೆಗೆ ತಿರುಗಿಸಲು ಮತ್ತು ವಂಚಿಸಲು ಯೋಜನೆ ರೂಪಿಸಿರುವುದು ಬಯಲಾಗಿದೆ. ಯೆಸ್​ ಬ್ಯಾಂಕ್​ ಅಧಿಕಾರಿಗೆ ಲಂಚ ನೀಡಿರುವುದೂ ತನಿಖೆಗೆ ಒಳಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ: K.C.Veerendra Puppy: ಅಕ್ರಮ ಹಣ ವರ್ಗಾವಣೆ ಕೇಸ್‌; ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿ ಇಡಿ ವಶಕ್ಕೆ

ಅಷ್ಟೇ ಅಲ್ಲದೇ ಯೆಸ್​ ಬ್ಯಾಂಕ್​ನಿಂದ 2017ರಿಂದ 2019ರವರೆಗೆ ಅಕ್ರಮವಾಗಿ ಸಾಲ ಪಡೆದಿವುದು ಬಹಿರಂಗವಾಗಿದೆ. ಹಣಕಾಸು ಅಕ್ರಮಗಳು ಮತ್ತು ಅಕ್ರಮ ಹಣ ವರ್ಗಾವಣೆ ತಡೆ (PMLA) ಕಾಯ್ದೆಯಡಿ ಆರ್ಥಿಕ ನಿಯಮಗಳು ಉಲ್ಲಂಘನೆಯಾಗಿರುವ ಅನಾಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಅನಿಲ್​ ಅಂಬಾನಿಗೆ ಸೇರಿದ ಅನೇಕ ಆಸ್ತಿ ಮತ್ತು ಘಟಕಗಳಲ್ಲಿನ ಪಾತ್ರದ ಕುರಿತು ಕೂಡ ಇ.ಡಿ. ಪರಿಶೀಲನೆ ನಡೆಸುತ್ತಿದೆ.