ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rekha Gupta: ದೆಹಲಿ ಸಿಎಂ ಹತ್ಯೆಗೆ ಸಂಚು; ವಿಚಾರಣೆಯಲ್ಲಿ ಬಯಲಾಯ್ತು ಘನಘೋರ ಸತ್ಯ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಬುಧವಾರ ಬೆಳಿಗ್ಗೆ ಅವರ ನಿವಾಸದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯುತ್ತಿದ್ದಾಗ ಹಲ್ಲೆ ನಡೆದಿದೆ. 35 ವರ್ಷದ ವ್ಯಕ್ತಿಯೊಬ್ಬ ದಾಖಲೆಗಳೊಂದಿಗೆ ಬಂದು ಮಾತನಾಡುತ್ತಾ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಗಳಿಗೆ ಕಪಾಳಕ್ಕೆ ಹೊಡೆದು, ಕೂದಲನ್ನು ಎಳೆದಿದ್ದ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ (Rekha Gupta) ಬುಧವಾರ ಬೆಳಿಗ್ಗೆ ಅವರ ನಿವಾಸದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯುತ್ತಿದ್ದಾಗ ಹಲ್ಲೆ ನಡೆದಿದೆ. 35 ವರ್ಷದ ವ್ಯಕ್ತಿಯೊಬ್ಬ ದಾಖಲೆಗಳೊಂದಿಗೆ ಬಂದು ಮಾತನಾಡುತ್ತಾ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಗಳಿಗೆ ಕಪಾಳಕ್ಕೆ ಹೊಡೆದು, ಕೂದಲನ್ನು ಎಳೆದಿದ್ದ. ಗುಜರಾತ್‌ನ ರಾಜ್‌ಕೋಟ್‌ನ ರಾಜೇಶ್ ಸಕಾರಿಯಾ ಎಂಬಾತ ಈ ದಾಳಿಯನ್ನು ನಡೆಸಿದ್ದ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ.

ವಿಚಾರಣೆಯ ಸಮಯದಲ್ಲಿ, ರಾಜೇಶ್ ಭಾಯ್ ಖಿಮ್ಜಿ, ಮುಖ್ಯಮಂತ್ರಿಯ ಮೇಲೆ ಚಾಕುವಿನಿಂದ ದಾಳಿ ಮಾಡುವ ಉದ್ದೇಶ ಹೊಂದಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಆತ ಯೋಜನೆಯನ್ನೂ ರೂಪಿಸಿದ್ದ. ಆದರೆ ಬಿಗಿ ಭದ್ರತಾ ವ್ಯವಸ್ಥೆಗಳನ್ನು ನೋಡಿ, ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಚಾಕುವನ್ನು ಎಸೆದಿದ್ದ. ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಹೋಗುವ ಮೊದಲು ಸುಪ್ರೀಂ ಕೋರ್ಟ್‌ಗೆ ಹೋಗಿದ್ದೆ, ಆದರೆ ನ್ಯಾಯಾಲಯದ ಹೊರಗೆ ಭಾರೀ ಭದ್ರತೆಯನ್ನು ನೋಡಿದ ನಂತರ ಹಿಂತಿರುಗಿದ್ದೆ ಎಂದು ಅವರು ತನಿಖಾಧಿಕಾರಿಗಳಿಗೆ ತಿಳಿಸಿದರು.

ರೇಖಾ ಗುಪ್ತಾ ಅವರ ನಿವಾಸದ ಆವರಣದಲ್ಲಿ 'ಜನ್ ಸುನ್ವಾಯಿ' ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ದೂರು ನೀಡಲು ಬಂದ 40 ವರ್ಷದ ವ್ಯಕ್ತಿಯೊಬ್ಬರು ಸಿಎಂ ರೇಖಾ ಗುಪ್ತಾ ಅವರ ಕಪಾಳಕ್ಕೆ ಬಾರಿಸಿ, ಕೂದಲು ಎಳೆದಾಡಿದ್ದಾನೆ. ಸ್ಥಳದಲ್ಲೇ ಇದ್ದ ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿಯ ವಿಚಾರಣೆ ಮಾಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Devarayanadurga Temple: ಕುಂಕುಮ ಇಡುವಾಗ ಅನುಚಿತ ವರ್ತನೆ; ವೃದ್ಧ ಅರ್ಚಕನ ಮೇಲೆ ಯುವಕರಿಂದ ಮನಸೋ ಇಚ್ಛೆ ಹಲ್ಲೆ

ಸಿಎಂ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಕೆಲವು ಪೇಪರ್‌ಗಳೊಂದಿಗೆ ಬಂದಿದ್ದನು. ಆತ ಮುಖ್ಯಮಂತ್ರಿಯವರ ಬಳಿ ಮಾತನಾಡುತ್ತಿದ್ದನು. ಮಾತನಾಡುತ್ತಾ ಇದ್ದಕ್ಕಿದ್ದಂತೆ ಹಲ್ಲೆ ಮಾಡಿದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು. ದೆಹಲಿ ಪೊಲೀಸರು ಖಿಮ್ಜಿ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಮ್ಮ ಮೇಲೆ ದಾಳಿ ನಡೆದ ಕೆಲವೇ ಗಂಟೆಗಳ ನಂತರ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಘಟನೆಯ ನಂತರ ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ. ರೇಖಾಗುಪ್ತಾ ಅವರ ಕಾರ್ಯವೈಖರಿ ಯಾರಿಗೋ ಸಹಿಸಲಾಗುತ್ತಿಲ್ಲ. ಹೀಗಾಗಿ ಬೇಕಂತಲೇ ದಾಳಿ ನಡೆಸಲು ಸುಪಾರಿ ಕೊಟ್ಟಿದ್ದಾರೆ. ಈ ಘಟನೆಯ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಬಿಜೆಪಿ ಹೇಳಿದೆ.