ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಜ್‌ಪುರದ ಬುಡಕಟ್ಟು ಮಹಿಳೆಯಿಂದ 3 ಅಮೂಲ್ಯ ವಜ್ರಗಳು ವಶಕ್ಕೆ

ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯಲ್ಲಿ ಬುಡಕಟ್ಟು ಮಹಿಳೆ ವಿನಿತಾ ಗೊಂಡ್ ಅವರಿಗೆ ಲಕ್ಷಾಂತರ ರೂ. ಮೌಲ್ಯದ ವಜ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೂರು ಅಮೂಲ್ಯ ವಜ್ರಗಳಲ್ಲಿ ಒಂದು ರತ್ನವಾಗಿದ್ದು, ಅವುಗಳ ನಿಜವಾದ ಮೌಲ್ಯವನ್ನು ನಿರ್ಧರಿಸಲು ಹರಾಜು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಪಾಲ್‌: ಬುಡಕಟ್ಟು ಮಹಿಳೆಯೊಬ್ಬರ (Tribal Woman) ಬಳಿ ಇದ್ದ ಮೂರು ವಜ್ರಗಳನ್ನು (Precious Diamonds) ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮಧ್ಯ ಪ್ರದೇಶದ (Madhyapradesh) ಪನ್ನಾದಲ್ಲಿ (Panna district) ನಡೆದಿದೆ. ರಾಜ್‌ಪುರದ ಬುಡಕಟ್ಟು ಮಹಿಳೆ ವಿನಿತಾ ಗೊಂಡ್ ಗಣಿಯಿಂದ ಪಡೆದಿದ್ದ ಹಲವು ಲಕ್ಷ ರೂಪಾಯಿ ಮೌಲ್ಯದ ಮೂರು ಅಮೂಲ್ಯ ವಜ್ರಗಳಲ್ಲಿ ಒಂದು ರತ್ನದ ಗುಣಮಟ್ಟದ್ದಾಗಿದೆ. ಇವುಗಳ ನಿಖರವಾದ ಮೌಲ್ಯವನ್ನು ನಿರ್ಧರಿಸಲು ಹರಾಜು ಹಾಕುವುದಾಗಿ ಪನ್ನಾ ವಜ್ರ ಅಧಿಕಾರಿ ಅನುಪಮ್ ಸಿಂಗ್ ತಿಳಿಸಿದ್ದಾರೆ.

ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಗಣಿಯಲ್ಲಿ ಬುಡಕಟ್ಟು ಮಹಿಳೆ ವಿನಿತಾ ಗೊಂಡ್ ಹಲವಾರು ಲಕ್ಷ ರೂಪಾಯಿ ಮೌಲ್ಯದ ಮೂರು ಅಮೂಲ್ಯ ವಜ್ರಗಳನ್ನು ಕಂಡುಕೊಂಡಿದ್ದಾರೆ. ವಿನಿತಾ ಗೊಂಡ್ ಬಳಿ ಇದ್ದ 1.48 ಕ್ಯಾರೆಟ್ ಮತ್ತು 20 ಮತ್ತು 7 ಸೆಂಟ್ಸ್ ತೂಕದ ವಜ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವುಗಳ ನಿಜವಾದ ಮೌಲ್ಯವನ್ನು ನಿರ್ಧರಿಸಲು ಹರಾಜು ಮಾಡಲಾಗುವುದು ಎಂದು ಅನುಪಮ್ ಸಿಂಗ್ ವಿವರಿಸಿದ್ದಾರೆ.

ಈ ಮೂರು ವಜ್ರಗಳಲ್ಲಿ ಒಂದು ರತ್ನದ ಗುಣಮಟ್ಟ ಹೊಂದಿದೆ. ಉಳಿದ ಎರಡು ಸ್ವಲ್ಪ ಕೆಳಮಟ್ಟದ ಗುಣಮಟ್ಟದ್ದಾಗಿವೆ. ವಿನಿತಾ ಗೊಂಡ್ ವಜ್ರ ಕಚೇರಿಯಿಂದ ಗುತ್ತಿಗೆ ಪಡೆದ ಅನಂತರ ತಮ್ಮ ಸಹಚರರೊಂದಿಗೆ ಪಾಟಿ ಪ್ರದೇಶದಲ್ಲಿ ಇದನ್ನು ಕಂಡುಕೊಂಡಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಉಗ್ರರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದು ಪಾಕ್‌ ಸೇನೆಯ ಮುಖ್ಯಸ್ಥ; ರಹಸ್ಯ ಬಹಿಂಗಪಡಿಸಿದ ಜೈಶ್‌ ಕಮಾಂಡರ್‌

ಪನ್ನಾ ಗಣಿಯಲ್ಲಿ ವಜ್ರ ಸಿಕ್ಕಿರುವುದು ಇದೇ ಮೊದಲೇನಲ್ಲ. ಕಳೆದ ಜುಲೈಯಲ್ಲಿ ಕಾರ್ಮಿಕ ದಂಪತಿ ಮಧ್ಯ ಪ್ರದೇಶದ ಗಣಿಯಲ್ಲಿ ಎಂಟು ವಜ್ರಗಳನ್ನು ಕಂಡುಕೊಂಡಿದ್ದರು. ಛತ್ತರ್‌ಪುರ ಜಿಲ್ಲೆಯ ದಂಪತಿ ಹರ್‌ಗೋವಿಂದ್ ಯಾದವ್ ಮತ್ತು ಅವರ ಪತ್ನಿ ಪವನ್ ದೇವಿ ಯಾದವ್ ಸ್ಥಳೀಯ ಗಣಿಯಿಂದ 10ರಿಂದ 12 ಲಕ್ಷ ರೂಪಾಯಿ ಮೌಲ್ಯದ ಕನಿಷ್ಠ ಎಂಟು ವಜ್ರಗಳನ್ನು ಕಂಡುಹಿಡಿದ್ದರು. ಅಮೂಲ್ಯವಾದ ಕಲ್ಲು ಸಿಗುವ ಭರವಸೆಯಲ್ಲಿ ಅವರು ಕಳೆದ ಐದು ವರ್ಷಗಳಿಂದ ಅಗೆಯುತ್ತಿದ್ದರು.

ವಿದ್ಯಾ ಇರ್ವತ್ತೂರು

View all posts by this author