ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Patani: ಗುಂಡಿನ ದಾಳಿ ನಡೆಸಿದ ಆರೋಪಿಗಳಿಬ್ಬರ ಎನ್‌ಕೌಂಟರ್‌; ಸಿಎಂ ಯೋಗಿಗೆ ಧನ್ಯವಾದ ಹೇಳಿದ ದಿಶಾ ಪಟಾನಿ ತಂದೆ

ಉತ್ತರ ಪ್ರದೇಶದ ಬರೇಲಿಯಲ್ಲಿರುವ ದಿಶಾ ಪಟಾನಿ ನಿವಾಸದ ಮೇಲೆ ಗುಂಡು ಹಾರಿಸಿದ ಇಬ್ಬರು ಆರೋಪಿಗಳು ಬುಧವಾರ ಸಂಜೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನಿವೃತ್ತ ಸರ್ಕಲ್ ಆಫೀಸರ್, ದಿಶಾ ಪಟಾನಿ ತಂದೆ ಜಗದೀಶ್ ಪಟಾನಿ ತಿಳಿಸಿದ್ದು, ಈ ಕುರಿತು ವಿಡಿಯೊ ಸಂದೇಶವೊಂದನ್ನು ಬಿಡುಗಡೆಗೊಳಿಸಿದ್ದಾರೆ.

ಲಖನೌ: ನಟಿ ದಿಶಾ ಪಟಾನಿ (Actress Disha Patani) ಅವರ ಮನೆ ಮೇಲೆ ದಾಳಿ ನಡೆಸಿದ ಇಬ್ಬರು ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ (Police encounter) ಸಾವನ್ನಪ್ಪಿದ್ದಾರೆ. ಹೀಗಾಗಿ ದಿಶಾ ಪಟಾನಿ ಅವರ ತಂದೆ ಮತ್ತು ನಿವೃತ್ತ ಸರ್ಕಲ್ ಆಫೀಸರ್ ಜಗದೀಶ್ ಪಟಾನಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ಗಳಿಗೆ ಸೇರಿದ ಶೂಟರ್‌ಗಳು ಬರೇಲಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬುಧವಾರ ಸಂಜೆ ಸಾವನ್ನಪ್ಪಿದ್ದಾರೆ.

ಬರೇಲಿಯಲ್ಲಿರುವ ತಮ್ಮ ನಿವಾಸದ ಮೇಲೆ ಗುಂಡು ಹಾರಿಸಿದ ಇಬ್ಬರು ಆರೋಪಿಗಳು ಬುಧವಾರ ಸಂಜೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನಿವೃತ್ತ ಸರ್ಕಲ್ ಆಫೀಸರ್ ಜಗದೀಶ್ ಪಟಾನಿ ಗುರುವಾರ ತಿಳಿಸಿದ್ದಾರೆ.

ಈ ಕುರಿತು ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಜಗದೀಶ್ ಪಟಾನಿ, ರಾಜ್ಯ ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳು ತೆಗೆದುಕೊಂಡ ತ್ವರಿತ ಕ್ರಮವನ್ನು ಶ್ಲಾಘಿಸಿದರು.

ʼʼನನ್ನ ಮತ್ತು ಕುಟುಂಬದ ಪರವಾಗಿ ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರು ನನಗೆ ಭರವಸೆ ನೀಡಿದಂತೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡರು. ಈ ಬಗ್ಗೆ ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಯುಪಿ ಸರ್ಕಾರ ಮತ್ತು ಯುಪಿ ಪೊಲೀಸರು ಭಯಮುಕ್ತ ಸಮಾಜವನ್ನು ನಿರ್ಮಿಸುತ್ತಿದೆʼʼ ಎಂದರು.

ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಹರಿಯಾಣ ಮತ್ತು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಗಾಜಿಯಾಬಾದ್‌ನ ಟ್ರೋನಿಕಾ ನಗರದಲ್ಲಿ ಆರೋಪಿಗಳಾದ ರೋಹ್ಟಕ್‌ನ ರವೀಂದರ್ ಮತ್ತು ಸೋನೆಪತ್‌ನ ಅರುಣ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ವೇಳೆ ನಾಲ್ವರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ಇದನ್ನೂ ಓದಿ: India vs Oman: ಸೂಪರ್‌-4 ಪಂದ್ಯಕ್ಕೂ ಮುನ್ನ ಭಾರತೀಯ ಬ್ಯಾಟರ್‌ಗಳಿಗೆ ಒಮಾನ್ ಪರೀಕ್ಷೆ

ದಿಶಾ ಪಟಾನಿ ಮನೆ ಮೇಲೆ ಸೆಪ್ಟೆಂಬರ್ 12ರಂದು ಮುಂಜಾನೆ ದಾಳಿಯಾಗಿದ್ದು, ಇದರ ಹೊಣೆಯನ್ನು ದರೋಡೆಕೋರ ಗೋಲ್ಡಿ ಬ್ರಾರ್‌ನ ಸಹಚರರು ಹೊತ್ತಿದ್ದರು.

ವಿದ್ಯಾ ಇರ್ವತ್ತೂರು

View all posts by this author