ರಾಂಚಿ: ಜಾರ್ಖಂಡ್‌ನ (Jharkhand) ರಾಂಚಿಯಿಂದ (Ranchi) ಜೌನ್‌ಪುರಕ್ಕೆ ಕರೆದುಕೊಂಡು ಹೋಗುತ್ತಿದ್ದ ಆನೆಯೊಂದು ಕಳ್ಳತನವಾದ (Elephant theft case) ಬಗ್ಗೆ ವ್ಯಕ್ತಿಯೊಬ್ಬ ಸುಮಾರು ಎರಡು ವಾರಗಳ ಹಿಂದೆ ಪಲಾಮು ಜಿಲ್ಲೆಯ ಪೊಲೀಸರಿಗೆ ದೂರು ನೀಡಿದ್ದ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ಹಲವು ಆಘಾತಕಾರಿ ಅಂಶಗಳನ್ನು ಬಹಿರಂಗ ಪಡಿಸಿದ್ದಾರೆ. ಉತ್ತರ ಪ್ರದೇಶದ (Uttar Pradesh) ಜೌನ್‌ಪುರದ ನಿವಾಸಿ ನರೇಂದ್ರ ಕುಮಾರ್ ಶುಕ್ಲಾ ಈ ಕುರಿತು ದೂರು ದಾಖಲಿಸಿದ್ದು ಆನೆಯ ಮಾವುತನೇ ಆನೆಯನ್ನು ಕದ್ದಿದ್ದಾನೆ ಎಂದು ಆರೋಪಿಸಿದ್ದರು.
ಆನೆ ಕಳ್ಳತನದ ದೂರಿನೊಂದಿಗೆ ಆರಂಭವಾದ ತನಿಖೆಯಲ್ಲಿ ಈಗ ಹಲವು ಆಘಾತಕಾರಿ ವಿವರಗಳು ಬಹಿರಂಗಗೊಂಡಿವೆ.ಸುಮಾರು ಎರಡು ವಾರಗಳ ಹಿಂದೆ ರಾಂಚಿಯಲ್ಲಿ ಜಯಮತಿ ಎಂಬ ಹೆಣ್ಣು ಆನೆಯನ್ನು ಕಳ್ಳತನ ಮಾಡಲಾಗಿತ್ತು. ನರೇಂದ್ರ ಕುಮಾರ್ ಶುಕ್ಲಾ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಜಾರ್ಖಂಡ್‌ನ ರಾಂಚಿಯಿಂದ ಜೌನ್‌ಪುರಕ್ಕೆ ತನ್ನ ಆನೆಯನ್ನು ಕರೆದೊಯ್ಯುವಾಗ ಅದನ್ನು ಕದ್ದೊಯ್ಯಲಾಗಿದೆ. ಇದಕ್ಕೆ ಮಾವುತನೇ ಕಾರಣ ಎಂದು ಆರೋಪಿಸಿದರು.
ತಮ್ಮ ಕುಟುಂಬ ಹಿಂದಿನಿಂದಲೂ ಆನೆಗಳನ್ನು ಸಾಕುತ್ತದೆ. ಈ ಸಂಪ್ರದಾಯವನ್ನು ಮುಂದಿವರಿಸಲು ತಾವು ಈ ಆನೆಯನ್ನು ಖರೀದಿಸಿರುವುದಾಗಿ ಹೇಳಿದ್ದರು. ಆಗಸ್ಟ್ ಮಧ್ಯ ಪಲಮುವಿನ ಜೋರ್ಕಟ್ ನಿಂದ ಆನೆ ಮತ್ತು ಮಾವುತ ಕಾಣೆಯಾಗಿದ್ದಾರೆ ಎಂದು ಶುಕ್ಲಾ ದೂರಿನಲ್ಲಿ ತಿಳಿಸಿದ್ದಾರೆ.
ಜಯಮತಿ ಬಿಹಾರದ ಛಪ್ರಾದಲ್ಲಿ ಪಸಿಕ್ಕಿದ್ದು, ಅಲ್ಲಿ ಅದು ಗೋರಖ್ ಸಿಂಗ್ ಎಂಬವರ ಜೊತೆ ಇದ್ದಳು. ಸಿಂಗ್ ಅದನ್ನು 27 ಲಕ್ಷ ರೂ.ಗೆ ಖರೀದಿಸಿರುವುದಾಗಿ ಹೇಳಿದ್ದಾನೆ. ಮಾವುತನೇ ಆನೆಯನ್ನು ಮಾರಾಟ ಮಾಡುವ ಯೋಜನೆಯನ್ನು ರೂಪಿಸಿದ್ದಾಗಿ ಆರಂಭದಲ್ಲಿ ಪೊಲೀಸರು ಶಂಕಿಸಿದ್ದರು. ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಈ ವೇಳೆ ಶುಕ್ಲಾ ಆನೆಯನ್ನು ಒಬ್ಬರೇ ಖರೀದಿ ಮಾಡಿರಲಿಲ್ಲ ಎನ್ನುವುದು ಬಹಿರಂಗವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಲಮು ಪೊಲೀಸ್ ಮುಖ್ಯಸ್ಥೆ ರೀಷ್ಮಾ ರಮೇಶನ್, ಶುಕ್ಲಾ ಮತ್ತು ಇತರ ಮೂವರು ಆನೆಯನ್ನು 40 ಲಕ್ಷ ರೂ.ಗೆ ಖರೀದಿಸಿದ್ದಾರೆ. ಈ ವಿಷಯವನ್ನು ಮುಚ್ಚಿಟ್ಟ ಶುಕ್ಲಾ ಇದನ್ನು ಕಳ್ಳತನ ಎಂದು ಹೇಳಿ ದೂರು ದಾಖಲಿಸಿದ್ದಾರೆ. ಆನೆ ಸುಮಾರು 1 ಕೋಟಿ ರೂ. ಮೌಲ್ಯದ್ದಾಗಿತ್ತು. ಸೋಮವಾರ ಛಪ್ರಾದಲ್ಲಿ ಆನೆ ಪತ್ತೆಯಾದಾಗ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Delhi Baba: ದುಬೈ ಶೇಖ್‌ಗೆ ಹುಡುಗಿಯರನ್ನು ಸಪ್ಲೈ ಮಾಡ್ತಿದ್ದನೇ ದೆಹಲಿ ಬಾಬಾ? ಚಾಟ್‌ನಲ್ಲಿ ಬಯಲಾಯ್ತು ಭಯಾನಕ ಸಂಗತಿ!
ಆನೆಯನ್ನು ನಾಲ್ಕು ಮಂದಿ ಒಟ್ಟಿಗೆ ಖರೀದಿಸಿದ್ದಾರೆ. ಮೂವರು ಪಾಲುದಾರರು ಸೇರಿ ಆನೆಯನ್ನು ಛಪ್ರಾದಲ್ಲಿರುವ ವ್ಯಕ್ತಿಗೆ 27 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ಗೋರಖ್ ಸಿಂಗ್ ಆನೆ ಖರೀದಿಗೆ ದಾಖಲೆಗಳನ್ನು ಪ್ರಸ್ತುತಪಡಿಸಿದ್ದಾರೆ. ಆನೆ ಈಗ ಗೋರಖ್ ಸಿಂಗ್ ಬಳಿ ಕಸ್ಟಡಿ ಬಾಂಡ್‌ನಲ್ಲಿದೆ. ದಾಖಲೆಗಳ ಪರಿಶೀಲನೆ ಬಳಿಕ ಆನೆಯನ್ನು ಕಾನೂನುಬದ್ಧ ಮಾಲೀಕರಿಗೆ ಒಪ್ಪಿಸುವುದಾಗಿ ಅವರು ಹೇಳಿದರು.