ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chanda Kochhar: 300 ಕೋಟಿ ರೂ. ಸಾಲ ಮಂಜೂರಾತಿ ಕೇಸ್‌ : ICICI ಮಾಜಿ ಸಿಇಒ ಚಂದಾ ಕೊಚ್ಚಾರ್‌ ವಿರುದ್ಧ ಆರೋಪ ಸಾಬೀತು

ಐಸಿಐಸಿಐ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೊಚ್ಚಾರ್‌ಗೆ (ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ವಿಡಿಯೋಕಾನ್ ಗ್ರೂಪ್‌ಗೆ 300 ಕೋಟಿ ರೂ. ಸಾಲ ಮಂಜೂರು ಮಾಡಿದ್ದಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚಾರ್‌ ಅವರನ್ನು 64 ಕೋಟಿ ರೂ. ಲಂಚ ಸ್ವೀಕರಿಸಿದ್ದಕ್ಕಾಗಿ ಮೇಲ್ಮನವಿ ನ್ಯಾಯಮಂಡಳಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.

ನವದೆಹಲಿ: ಐಸಿಐಸಿಐ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೊಚ್ಚಾರ್‌ಗೆ (Chanda Kochhar) ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ವಿಡಿಯೋಕಾನ್ ಗ್ರೂಪ್‌ಗೆ 300 ಕೋಟಿ ರೂ. ಸಾಲ ಮಂಜೂರು ಮಾಡಿದ್ದಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚಾರ್‌ ಅವರನ್ನು 64 ಕೋಟಿ ರೂ. ಲಂಚ ಸ್ವೀಕರಿಸಿದ್ದಕ್ಕಾಗಿ ಮೇಲ್ಮನವಿ ನ್ಯಾಯಮಂಡಳಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಜುಲೈ 3 ರಂದು ಹೊರಡಿಸಲಾದ ವಿವರವಾದ ಆದೇಶದಲ್ಲಿ, ಮೇಲ್ಮನವಿ ನ್ಯಾಯಮಂಡಳಿಯು ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರು ತಮ್ಮ ಪತಿ ದೀಪಕ್ ಕೊಚ್ಚಾರ್ ಮತ್ತು ವಿಡಿಯೋಕಾನ್ ಗ್ರೂಪ್‌ಗೆ ಸಂಬಂಧಿಸಿದ ಕಂಪನಿಯನ್ನು ಒಳಗೊಂಡ "ಕ್ವಿಡ್ ಪ್ರೊ ಕ್ವೋ" ಒಪ್ಪಂದದ ಮೂಲಕ 64 ಕೋಟಿ ರೂ. ಲಂಚವನ್ನು ಪಡೆದಿದ್ದಾರೆ ಎಂದು ತೀರ್ಪು ನೀಡಿದೆ.

ವಿಡಿಯೋಕಾನ್‌ಗೆ 300 ಕೋಟಿ ರೂ. ಸಾಲ ಮಂಜೂರು ಮಾಡುವಾಗ ಕೊಚ್ಚಾರ್ ಸ್ಪಷ್ಟ ಹಿತಾಸಕ್ತಿ ಸಂಘರ್ಷವನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ ನ್ಯಾಯಮಂಡಳಿ ಹೇಳಿದೆ. ವಿಡಿಯೋಕಾನ್ ಗುಂಪಿಗೆ ನೀಡಿದ ಸಾಲಗಳಿಗೆ ಬದಲಾಗಿ ಚಂದಾ ಕೊಚ್ಚರ್ ಮತ್ತು ಅವರ ಉದ್ಯಮಿ ಪತಿ ದೀಪಕ್ ಕೊಚ್ಚರ್ ಅವರ ಅಧಿಕಾರಾವಧಿಯಲ್ಲಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ವಿಡಿಯೋಕಾನ್ ಇಂಟರ್ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ವೇಣುಗೋಪಾಲ್ ನಂದಲಾಲ್ ಧೂತ್, ಚಂದಾ ಕೊಚ್ಚರ್, ದೀಪಕ್ ವೀರೇಂದ್ರ ಕೊಚ್ಚರ್, ನುಪವರ್ ರಿನ್ಯೂವೇಬಲ್ಸ್ ಲಿಮಿಟೆಡ್, ಸುಪ್ರೀಂ ಎನರ್ಜಿ ಮತ್ತು ಅಪರಿಚಿತ ಸಾರ್ವಜನಿಕ ಸೇವಕರ ವಿರುದ್ಧ ಮೊದಲು ಜನವರಿ 22, 2019 ರಂದು ಪ್ರಕರಣ ದಾಖಲಾಗಿತ್ತು.

ಏನಿದು ಪ್ರಕರಣ?

ಐಸಿಐಸಿಐ ಬ್ಯಾಂಕ್​ನಿಂದ ವಿಡಿಯೋಕಾನ್ ಗ್ರೂಪ್​ನ ವಿವಿಧ ಕಂಪನಿಗಳಿಗೆ ಸಾಲಗಳನ್ನು ನೀಡಲಾಗಿತ್ತು. ಆಗ ಐಸಿಐಸಿಐ ಬ್ಯಾಂಕ್​ನ ಸಿಇಒ ಆಗಿದ್ದವರು ಚಂದಾ ಕೋಚರ್. ವಿಡಿಯೋಕಾನ್ ಇಂಟರ್​ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಗೆ 300 ಕೋಟಿ ರೂ ಸಾಲವನ್ನು 2009ರ ಆಗಸ್ಟ್​ನಲ್ಲಿ ಮಂಜೂರು ಮಾಡಲಾಗಿತ್ತು. ಚಂದಾ ಕೋಚರ್ ನೇತೃತ್ವದ ಸಮಿತಿಯಿಂದ ಸಾಲಕ್ಕೆ ಅನುಮೋದನೆ ಸಿಕ್ಕಿತ್ತು.

ಈ ಸುದ್ದಿಯನ್ನೂ ಓದಿ: KRIDL: ವಾಲ್ಮೀಕಿ ನಿಗಮದ ಹಗರಣದ ಮಾದರಿಯಲ್ಲೇ ‘KRIDL’ ನಲ್ಲಿ ಭಾರೀ ಅಕ್ರಮ ಆರೋಪ; ಲೋಕಾಯುಕ್ತಕ್ಕೆ ದೂರು

ವಿವಿಧ ವಿಡಿಯೋಕಾನ್ ಕಂಪನಿಗಳ ಸಂಕೀರ್ಣ ಜಾಲದ ಮೂಲಕ ಸಾಲದ ಹಂಚಿಕೆ ಆಗಿತ್ತು. ಇದರಲ್ಲಿ 64 ಕೋಟಿ ರೂ ಹಣವು ಚಂದಾ ಕೋಚರ್ ಅವರ ಪತಿ ದೀಪಕ್ ಕೋಚರ್ ಮಾಲತ್ವದ ನುಪವರ್ ರಿನಿವಬಲ್ ಲಿಮಿಟೆಡ್ ಕಂಪನಿಗೆ ಹೂಡಿಕೆಯಾಗಿ ರವಾನೆ ಆಗಿತ್ತು.