Jyothi Labs: ಬದುಕಿಗೆ ಬಣ್ಣ ತುಂಬಿದ ಉಜಾಲಾ; ಇದು 17,000 ಕೋಟಿಯ ಸಾಮ್ರಾಜ್ಯ ಕಟ್ಟಿದ ರಾಮಚಂದ್ರನ್ ಯಶೋಗಾಥೆ
Moothedath Panjan Ramachandran: ಕೇರಳದ ತ್ರಿಶೂರಿನಲ್ಲಿ ಜನಿಸಿದ ರಾಮಚಂದ್ರನ್ ಬಾಲ್ಯದಿಂದಲೇ ಬಿಳಿ ಬಟ್ಟೆ ಧರಿಸುವ ಅಭ್ಯಾಸ ಹೊಂದಿದ್ದರು. ಆದರೆ ಬಟ್ಟೆ ಬಿಳಿಯಾಗಿ ಉಳಿಯದ ತೊಂದರೆ ಅವರಿಗೆ ಸಣ್ಣಗೆ ಚಿಂತೆ ಕೊಟ್ಟಿತು. ಈ ಚಿಂತೆಯೇ ಮುಂದೊಂದು ದಿನ ಸಾವಿರಾರು ಕೋಟಿ ಮೌಲ್ಯದ ಉದ್ಯಮಕ್ಕೆ ಮೂಲ ಕಾರಣವಾಯಿತು. ಫೈನಾನ್ಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ ಅವರು ಉದ್ಯಮ ಆರಂಭಿಸಲು ಮುಂಬೈಗೆ ಬಂದರು. ಕೇವಲ 2 ರೂ.ಗೆ ಸಿಗುವ ಡಿಟರ್ಜೆಂಟ್ ಪೌಡರ್‌ನಿಂದ ಆರಂಭವಾದ ಅವರ ಪ್ರಯಾಣ ಇಂದು ರೂ.17,000 ಕೋಟಿ ಮೌಲ್ಯದ ಆಸ್ತಿಗೆ ಬಂದು ನಿಂತಿದೆ. ಅವರ ಯಶೋಗಾಥೆಯ ಬಗ್ಗೆ ಇಲ್ಲಿದೆ ಮಾಹಿತಿ.

ರಾಮಚಂದ್ರನ್ -

ತ್ರಿಶೂರ್: ಕೇರಳದ (Kerala) ತ್ರಿಶೂರ್‌ನ (Thrissur) ರಾಮಚಂದ್ರನ್ (Ramachandran) ಅವರ ಯಶಸ್ಸಿನ ಕತೆ ಸಿನಿಮಾದಂತೆ ರೋಮಾಂಚಕವಾಗಿದೆ. ದೊಡ್ಡ ಹೂಡಿಕೆಯಿಲ್ಲದೆ, ಕೇವಲ ₹2ರ ಲಾಂಡ್ರಿ ವೈಟ್‌ನರ್ (ದ್ರವ ರೂಪದ ಬ್ಲೀಚ್) ಆರಂಭಿಸಿ, ಇಂದು ₹17,000 ಕೋಟಿ ಮೌಲ್ಯದ ಜ್ಯೋತಿ ಲ್ಯಾಬ್ಸ್ (Jyothy Labs) ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಈ ಕತೆ ಸಾಮಾನ್ಯ ಉತ್ಪನ್ನದಿಂದ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಸಾಧನೆಯನ್ನು ಎತ್ತಿಹೇಳುತ್ತದೆ.
ತ್ರಿಶೂರ್‌ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ರಾಮಚಂದ್ರನ್, ಸ್ನಾತಕೋತ್ತರ ಪದವಿ ಮುಗಿಸಿ ಲೆಕ್ಕಿಗರಾಗಿ ಕೆಲಸ ಆರಂಭಿಸಿದರು. ಆದರೆ, ಸ್ವಂತ ಉದ್ಯಮದ ಕನಸು ಆತನನ್ನು ಕಾಡಿತು. ಚಿಕ್ಕ ವಯಸ್ಸಿನಿಂದಲೇ ಸೃಜನಶೀಲ ಆಲೋಚನೆಗಳನ್ನು ಹೊಂದಿದ್ದ ಅವರು, ಲಾಂಡ್ರಿ ವೈಟ್‌ನರ್ ತಯಾರಿಕೆಯ ಕಲ್ಪನೆಯನ್ನು ರೂಪಿಸಿದದರು.
ಅಡುಗೆಮನೆಯೇ ಪ್ರಯೋಗ ಶಾಲೆ
ರಾಮಚಂದ್ರನ್ ತಮ್ಮ ಅಡುಗೆಮನೆಯನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡರು. ಅಲ್ಲಿ ವೈಟ್‌ನರ್ ತಯಾರಿಕೆಗೆ ಪ್ರಯೋಗ ಆರಂಭಿಸಿದರು. ಹಲವು ವಿಫಲತೆಗಳ ನಂತರ, ಒಂದು ದಿನ ರಾಮಚಂದ್ರನ್ ಅವರು ಕೆಮಿಕಲ್ ಇಂಡಸ್ಟ್ರಿ ಮ್ಯಾಗಜೀನ್ ನಲ್ಲಿ ಪ್ರಕಟವಾದ ಲೇಜನ ನೋಡಿದರು. ಅಲ್ಲಿ ಇವರ ಪ್ರಯೋಗಕ್ಕೆ ಉಪಯೋಗವಾಗುವ ಮಾಹಿತಿ ಸಿಕ್ಕಿತು. ಅದು ಜವಳಿ ತಯಾರಕರಿಗೆ ಸಾಧ್ಯವಾದಷ್ಟು ಬಿಳಿ ಮತ್ತು ಪ್ರಕಾಶಮಾನವಾದ ಬಣ್ಣಗಳನ್ನು ನೀಡಲು ಸಹಾಯ ಮಾಡಲು ನೇರಳೆ ಬಣ್ಣಗಳನ್ನು ಬಳಸಬಹುದು ಎಂದು ಹೇಳಿತ್ತು. ಇದಾದ ನಂತರ, ರಾಮಚಂದ್ರನ್ ಒಂದು ವರ್ಷ ನೇರಳೆ ಬಣ್ಣಗಳ ಪ್ರಯೋಗವನ್ನು ಮುಂದುವರೆಸಿದರು.
ಈ ಸುದ್ದಿಯನ್ನು ಓದಿ: Self Harmed: ಆಫೀಸ್‌ನಲ್ಲಿ ‘ನಾಯಿಮರಿ’ ಎಂದು ಕರೆದಿದ್ದಕ್ಕೆ ಯುವತಿ ಆತ್ಮಹತ್ಯೆ; 90 ಕೋಟಿ ರೂ. ಪರಿಹಾರ ನೀಡುವಂತೆ ಬಾಸ್‌ಗೆ ಆದೇಶ
ಜ್ಯೋತಿ ಲ್ಯಾಬೊರೇಟರಿಯ ಪ್ರಾರಂಭ
1983ರಲ್ಲಿ ₹5,000 ಸಾಲ ಪಡೆದು, ತಮ್ಮ ಮಗಳ ಹೆಸರಿನಲ್ಲಿ ಜ್ಯೋತಿ ಲ್ಯಾಬೊರೇಟರಿಯನ್ನು ತಮ್ಮ ಪೂರ್ವಜರ ಭೂಮಿಯಲ್ಲಿ ಸ್ಥಾಪಿಸಿದರು. ಈ ಸಣ್ಣ ಘಟಕದಿಂದ ಉಜಾಲ ಉತ್ಪಾದನೆ ಆರಂಭವಾಯಿತು. ಕೈಗೆಟಕುವ ಬೆಲೆ ಮತ್ತು ಉತ್ತಮ ಗುಣಮಟ್ಟದಿಂದ ಉಜಾಲ ಶೀಘ್ರವೇ ದೇಶಾದ್ಯಂತ ಜನಪ್ರಿಯವಾಯಿತು. ಜ್ಯೋತಿ ಲ್ಯಾಬ್ಸ್ ಮೊದಲಿಗೆ ದಕ್ಷಿಣ ಭಾರತದಲ್ಲಿ ಯಶಸ್ಸು ಕಂಡಿತು. 1997ರ ವೇಳೆಗೆ ಉತ್ತರ ಭಾರತಕ್ಕೆ ವಿಸ್ತರಿಸಿತು. ರಾಮಚಂದ್ರನ್‌ರ ಅವಿರತ ಪ್ರಯತ್ನದಿಂದ, ಕಂಪನಿಯು ದೇಶಾದ್ಯಂತ ಜನಪ್ರಿಯವಾಯಿತು. ಇಂದು ಜ್ಯೋತಿ ಲ್ಯಾಬ್ಸ್‌ನ ಮಾರುಕಟ್ಟೆ ಮೌಲ್ಯ ₹17,000 ಕೋಟಿಗೆ ತಲುಪಿದೆ.
ಉತ್ಪನ್ನಗಳ ವೈವಿಧ್ಯ
ಉಜಾಲದ ಯಶಸ್ಸಿನ ನಂತರ, ಕಂಪನಿಯು ಹೆಂಕೊ, ಎಕ್ಸೋ, ಪ್ರಿಲ್‌ನಂತಹ ಡಿಶ್‌ವಾಶಿಂಗ್ ಉತ್ಪನ್ನಗಳು, ಮಾರ್ಗೊ, ನೀಮ್ ಸಾಬೂನುಗಳು, ಮತ್ತು ಮ್ಯಾಕ್ಸೊ, ಟಿ-ಶೈನ್, ಮಾಯಾ ಅಗರಬತ್ತಿಗಳಂತಹ ಗೃಹೋಪಯೋಗಿ ಉತ್ಪನ್ನಗಳನ್ನು ಪರಿಚಯಿಸಿತು. ಕೀಟನಾಶಕ ಮತ್ತು ಸೊಳ್ಳೆ ನಿವಾರಕಗಳನ್ನೂ ತಯಾರಿಸುತ್ತದೆ. ರಾಮಚಂದ್ರನ್ ಅವರ ಪಯ ಸಾಮಾನ್ಯ ಉತ್ಪನ್ನದಿಂದ ಅಸಾಮಾನ್ಯ ಯಶಸ್ಸಿನ ಸಾಧನೆಯಾಗಿದೆ. ಸೃಜನಶೀಲತೆ, ಶ್ರಮ, ಮತ್ತು ದೃಢತೆಯಿಂದ ಯಾವುದೇ ಹಿನ್ನೆಲೆಯಿಂದ ದೊಡ್ಡ ಕನಸುಗಳನ್ನು ಸಾಕಾರಗೊಳಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.