ಪಟನಾ: ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ(Heavy Rain) ಪರಿಣಾಮವಾಗಿ ದೆಹಲಿ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯ ಸಂಚಾರದಲ್ಲಿ ಭಾರೀ ಅಸ್ತವ್ಯಸ್ತತೆ ಉಂಟಾಗಿದ್ದು, ಕಳೆದ ನಾಲ್ಕು ದಿನಗಳಿಂದ ಸಾವಿರಾರು ವಾಹನಗಳು ಕಿಲೋಮೀಟರ್‌ಗಳಷ್ಟು ದೂರ ವಾಹನ ಸರಣಿಯಾಗಿ ನಿಂತಿವೆ. ಇದರಿಂದ ಚಾಲಕರು ಮತ್ತು ಪ್ರಯಾಣಿಕರು ತೊಂದರೆಗೀಡಾಗಿದ್ದು, ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಹೌದು ಬಿಹಾರದಾದ್ಯಂತ(Bihar) ಭಾರಿ ಮಳೆಯಾಗಿದ್ದು(Heavy Rain) , ಅಪಾರ ಹಾನಿಯಾಗಿದೆ. ಅಲ್ಲಲ್ಲಿ ರಸ್ತೆಗಳು ಕುಸಿದಿದ್ದು, ತೀವ್ರ ಪ್ರವಾಹ (Bihar flood) ಪರಿಸ್ಥಿತಿ ಉಂಟಾಗಿದೆ. ರೋಹ್ತಾಸ್, ಮೋತಿಹಾರಿ, ಸಸಾರಾಮ್ ಮತ್ತು ಗೋಪಾಲ್‌ಗಂಜ್‌ಗಳಲ್ಲಿ ಆಸ್ಪತ್ರೆಗಳು ಜಲಾವೃತಗೊಂಡಿವೆ. ಹಲವೆಡೆ ರಸ್ತೆಗಳು ಸಂಪರ್ಕ ಕಡಿದುಕೊಂಡಿದ್ದು, ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಇದೀಗ ವರುಣನ ಆರ್ಭಟದಿಂದ ವಾಹನ ದಟ್ಟನೆ ಸಮಸ್ಯೆಯೂ ಉಂಟಾಗಿದ್ದು, ದೆಹಲಿ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಯ್ಯೋಮಯವಾಗಿದೆ. ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಸಾವಿರಾರು ವಾಹನಗಳು ಕಿಲೋಮೀಟರ್‌ಗಟ್ಟಲೆ ನಿಂತಿದ್ದು, ಚಾಲಕರು ಮತ್ತು ಪ್ರಯಾಣಿಕರು ಟ್ರಾಫಿಕ್‌ನಲ್ಲಿ ಸಿಲುಕಿ ಜನರು ಪರದಾಡುತ್ತಿದ್ದಾರೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ಬಿಹಾರದ ಹಲವು ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದ್ದು, ಅಲ್ಲಲ್ಲಿ ರಸ್ತೆಗಳು ಕುಸಿದಿದ್ದು, ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆಸ್ಪತ್ರಗಳು, ಮನೆಗಳು ಜಲಾವೃತಗೊಂಡಿದ್ದು, ಹಲವೆಡೆ ರಸ್ತೆಗಳು ಸಂಪರ್ಕ ಕಡಿದುಕೊಂಡಿವೆ. ರೋಹ್ತಾಸ್, ಸಸಾರಾಮ್, ಮೋತಿಹಾರಿ ಮತ್ತು ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (State Disaster Response Force) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (National Disaster Response Force) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.
ಈ ಮಧ್ಯೆ ವಾಹನ ದಟ್ಟನೆ ಸಮಸ್ಯೆ ತಲೆ ದೂರಿದ್ದು, ಕಳೆದ ಶುಕ್ರವಾರ ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ 19ರಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹೆದ್ದಾರಿ ವಿಸ್ತರಣೆಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ತಿರುವು ರಸ್ತೆ ಹಾಗೂ ಸರ್ವಿಸ್ ರಸ್ತೆಗಳು ಜಲಾವೃತಗೊಂಡಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ರಸ್ತೆ ತುಂಬಾ ಗುಂಡಿಗಳೇ ತುಂಬಿ ಹೋಗಿದ್ದು, ಮಳೆ ನೀರು ಸಂಗ್ರಹವಾಗಿರುವ ಕಾರಣದಿಂದಾಗಿ ವಾಹನಗಳು ಸ್ಕಿಡ್ ಆಗುತ್ತಿರುವ ಘಟನೆಯು ಹೆಚ್ಚಾಗಿದೆ. ಇದರಿಂದ ಸಂಚಾರ ಅವ್ಯವಸ್ಥೆಯನ್ನು ಮತ್ತಷ್ಟು ಗಂಭೀರಗೊಳಿಸಿದ್ದು, ಚಾಲಕರು ತೀವ್ರ ಕಿರಿಕಿರಿಗೆ ಒಳಗಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Chirag Paswan: ಬಿಹಾರ ಚುನಾವಣೆ; ಎಲೆಕ್ಷನ್ ಹೊಸ್ತಿಲಲ್ಲಿ ಉಲ್ಟಾ ಹೊಡೆದ್ರಾ ಚಿರಾಗ್ ಪಾಸ್ವಾನ್..?
ಸುಮಾರು 20 ಕಿಲೋಮೀಟರ್ ನಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಗಿದ್ದು, ಔರಂಗಾಬಾದ್‌ವರೆಗೂ ವಾಹನ ದಟ್ಟನೆ ಸಮಸ್ಯೆ ಹರಡಿದೆ. ಸಾಕಷ್ಟು ಪ್ರಯಾಣಿಕರು ನಾಲ್ಕು ದಿನಗಳಿಂದ ಈ ಹೆದ್ದಾರಿಯಲ್ಲಿಯೇ ಇದ್ದು, ಸಾಗಣೆ ಹಾಗೂ ಸಾಮಾನ್ಯ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನಸಾಮಾನ್ಯರು, ಚಾಲಕರು, ವ್ಯಾಪಾರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ವಾಹನಗಳ ಚಲನೆ ಎಷ್ಟು ನಿಧಾನವಾಗಿದೆಯೆಂದರೆ, ಕೆಲವರಿಗೆ 24 ಗಂಟೆಗಳಲ್ಲಿ ಕೇವಲ ಐದು ಕಿಲೋಮೀಟರ್ ದೂರ ಮಾತ್ರವೇ ಸಾಗಲು ಸಾಧ್ಯವಾಗಿದೆ. "ಕಳೆದ 30 ಗಂಟೆಗಳಲ್ಲಿ ನಾವು ಕೇವಲ 7 ಕಿಮೀ ದೂರವಷ್ಟೇ ಸಾಗಿದ್ದೇವೆ. ಟೋಲ್ ಹಾಗೂ ರಸ್ತೆ ತೆರಿಗೆಗಳನ್ನು ಪಾವತಿಸಿದ್ದರೂ, ಯಾವುದೇ ಸಹಾಯವಿಲ್ಲದೆ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಬೇಕಾದ ಸ್ಥಿತಿಯಿದೆ," ಎಂದು ಹಲವು ಟ್ರಕ್ ಚಾಲಕರು ಅಳಲು ತೋಡಿಕೊಂಡಿದ್ದಾರೆ.
ಎರಡು ದಿನಗಳಿಂದ ಕುಡಿಯಲು ನೀರಿಲ್ಲದೇ ದಾಹ, ಬಾಯಾರಿಕೆ ಹಾಗೂ ತಿನ್ನಲು ಆಹಾರವಿಲ್ಲದೇ ಹಸಿವಿನಿಂದ ಪರದಾಡುತ್ತಿದ್ದೇವೆ. ಪರಿಸ್ಥಿತಿ ದಯನೀಯವಾಗಿದೆ. ಯಾರೂ ಸಹಾಯಕ್ಕೆ ಬರುವ ಸ್ಥಿತಿಯಲ್ಲಿ ಇಲ್ಲ ಎಂದು ಮತ್ತೊಬ್ಬ ವಾಹನ ಸವಾರರು ಅಸಮಾಧನ ಹೊರಹಾಕಿದ್ದಾರೆ.