ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naval Exercises: ಇಂಡೋ - ಪಾಕ್ ಸಮರಾಭ್ಯಾಸ; ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಗೆ ಎದುರಾಗಲಿದೆ ಪಾಕ್‌ ನೌಕೆ!

India-Pakistan Naval Exercises: ಸರಣಿ ವೈಮಾನಿಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಹಗೆತನ ಹೆಚ್ಚುತ್ತಿದ್ದಂತೆ ಎರಡೂ ರಾಷ್ಟ್ರಗಳ ನೌಕಾಪಡೆಗಳು ಕೇವಲ 60 ಕಿ.ಮೀ ಅಂತರದಲ್ಲಿ ಮಿಲಿಟರಿ ಕವಾಯತುಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತೀಯ ನೌಕಾಪಡೆಯು ನಾಳೆ ಅರಬ್ಬಿ ಸಮುದ್ರದಲ್ಲಿ ತನ್ನ ಕವಾಯತು ಪ್ರಾರಂಭಿಸಲಿದ್ದು, ಆಗಸ್ಟ್ 12ರವರೆಗೆ ಇವು ಮುಂದುವರಿಯಲಿವೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಸರಣಿ ವೈಮಾನಿಕ ದಾಳಿಯ ಬಳಿಕ ಭಾರತ(India) ಹಾಗೂ ಪಾಕಿಸ್ತಾನ(Pakistan)ದ ನಡುವಿನ ಹಗೆತನ ಹೆಚ್ಚುತ್ತಿದ್ದಂತೆ ಎರಡೂ ರಾಷ್ಟ್ರಗಳ ನೌಕಾಪಡೆಗಳು ಕೇವಲ 60 ಕಿ.ಮೀ ಅಂತರದಲ್ಲಿ ಮಿಲಿಟರಿ ಕವಾಯತುಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದೆ.

ಹೌದು ತೀವ್ರವಾದ ವಾಯುದಾಳಿಗಳು ಮತ್ತು ಗಡಿಯಾಚೆಗಿನ ಘರ್ಷಣೆಗಳ ನಂತರ ಈ ನೌಕಾ ಕಾರ್ಯಾಚರಣೆಗಳು ನಡೆಯುತ್ತಿವೆ. ಪಾಕಿಸ್ತಾನ ನಡೆಸಿದ ಎಲ್ಲಾ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಭಾರತೀಯ ವಾಯುಪಡೆ ಯಶಸ್ವಿಯಾಗಿ ತಡೆದು ತಟಸ್ಥಗೊಳಿಸಿತು. ಪ್ರತೀಕಾರದ ದಾಳಿಯಲ್ಲಿ, ಭಾರತವು ಹಲವಾರು ನಗರಗಳಲ್ಲಿ ಪಾಕಿಸ್ತಾನದ ಬಹು ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಪಡಿಸಿತು.

ಇದೀಗ ಭಾರತ (India) ಮತ್ತು ಪಾಕಿಸ್ತಾನ (Pakistan) ಸಮರಾಭ್ಯಾಸಕ್ಕೆ ಸಿದ್ಧತೆ ನಡೆಸುತ್ತಿದ್ದು, ಎರಡೂ ದೇಶಗಳು ಅರೇಬಿಯನ್ ಸಮುದ್ರದಲ್ಲಿ (Arabian Sea) ಆಗಸ್ಟ್ 11-12, 2025 ರಂದು ಪ್ರತ್ಯೇಕ ನೌಕಾ ಅಭ್ಯಾಸಗಳನ್ನು (Naval Exercises) ನಡೆಸಲಿವೆ. ಈ ಅಭ್ಯಾಸಗಳು ಪರಸ್ಪರ ಸುಮಾರು 60 ನಾಟಿಕಲ್ ಮೈಲುಗಳ ದೂರದಲ್ಲಿ ನಡೆಯಲಿದೆ. ಎರಡೂ ದೇಶಗಳ ನೌಕಾಪಡೆಗಳು ಅರೇಬಿಯನ್ ಸಮುದ್ರದಲ್ಲಿ ಗುಂಡಿನ ದಾಳಿಯ ಅಭ್ಯಾಸಕ್ಕಾಗಿ ಪ್ರತ್ಯೇಕ ಸೂಚನೆಗಳನ್ನು ಜಾರಿಗೊಳಿಸಿವೆ.

ಭಾರತೀಯ ನೌಕಾಪಡೆಯು ಗುಜರಾತ್‌ನ ಪೋರ್‌ಬಂದರ್ ಮತ್ತು ಒಖಾ ಕರಾವಳಿಯಲ್ಲಿ ಆಗಸ್ಟ್ 11 ರಿಂದ 12 ರವರೆಗೆ ತನ್ನ ಸಮುದ್ರ ಅಭ್ಯಾಸವನ್ನು ನಡೆಸಲಿದೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. ಇಂತಹ ಸೇನಾ ಅಭ್ಯಾಸಗಳು ಎರಡೂ ರಾಷ್ಟ್ರಗಳಿಗೆ ಸಾಮಾನ್ಯವಾದರೂ, ಸದ್ಯದ ಪರಿಸ್ಥಿತಿಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳಿಗೆ ಕಾರಣವಾಗಬಹುದು ಎಂದು ರಕ್ಷಣಾ ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಬಿಜೆಪಿ ಸಂಸದ ನಾಪತ್ತೆ ; ವಿದ್ಯಾರ್ಥಿ ನಾಯಕನಿಂದ ಪೊಲೀಸರಿಗೆ ದೂರು

ಏಪ್ರಿಲ್ 22, 2025 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಬಲಿಯಾದ ನಂತರ, ಭಾರತವು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ವಿರುದ್ಧ ಸೇನಾ ದಾಳಿಗಳನ್ನು ನಡೆಸಿತು. ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾಗೆ ಸಂಬಂಧಿತ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಟ್ಟ ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ಕಾರ್ಯನಿರ್ವಹಿಸಿದವು. ಈ ದಾಳಿಯು ಎರಡೂ ದೇಶಗಳ ಸಂಬಂಧವನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ಈ ನೌಕಾ ಅಭ್ಯಾಸಗಳು ಕೇವಲ ಸೇನಾ ತರಬೇತಿಯ ಭಾಗವಲ್ಲ, ರಾಜಕೀಯವಾಗಿ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಭಾರತ-ಪಾಕಿಸ್ತಾನ ತಮ್ಮ ವಾಯುಪ್ರದೇಶವನ್ನು ಪರಸ್ಪರ ರಾಷ್ಟ್ರಗಳಿಗೆ ಮುಚ್ಚಿರುವುದು, ಈಗ ಸಮುದ್ರದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿವೆ. ಭಾರತವು ಆಗಸ್ಟ್ 23 ರವರೆಗೆ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನಕ್ಕೆ ಮುಚ್ಚಿದ್ದರೆ, ಪಾಕಿಸ್ತಾನವು ಆಗಸ್ಟ್ ಕೊನೆಯವರೆಗೆ ತನ್ನ ನಿರ್ಬಂಧವನ್ನು ವಿಸ್ತರಿಸಿದೆ.