ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakshabandhan: ಪಾಕ್‌ ಜೈಲಿನಲ್ಲಿ ತಮ್ಮ ಬಂಧಿ: 14 ವರ್ಷಗಳಿಂದ ರಾಖಿ ಕಟ್ಟಲು ಕಾಯುತ್ತಿರುವ ಸಹೋದರಿಯ ಕರುಣಾಜನಕ ಕಥೆ ಇದು

ಮಧ್ಯ ಪ್ರದೇಶದ ಬಾಲಾಘಾಟ್‌ನ ಸಂಘಮಿತ್ರಾ ಖೋಬ್ರಗಡೆ ಎಂಬ ಮಹಿಳೆ ಕಳೆದ 14 ವರ್ಷಗಳಿಂದ ತನ್ನ ಸಹೋದರ ಪ್ರಸನ್ನಜಿತ್ ರಂಗ ಅವರಿಗೆ ರಾಖಿ ಕಟ್ಟಲು ಕಾಯುತ್ತಿದ್ದಾರೆ. ಪ್ರಸನ್ನಜಿತ್ ಪಾಕಿಸ್ತಾನದ ಲಾಹೋರ್‌ನ ಕೋಟ್ ಲಖ್‌ಪತ್ ಕೇಂದ್ರೀಯ ಜೈಲಿನಲ್ಲಿದ್ದಾರೆ.

ಸಹೋದರನಿಗಾಗಿ ಕಾಯುತ್ತಿರುವ ಮಹಿಳೆ

ಭೋಪಾಲ್‌: ಮಧ್ಯ ಪ್ರದೇಶದ (Madhya Pradesh) ಬಾಲಾಘಾಟ್‌ನ (Balaghat) ಸಂಘಮಿತ್ರಾ ಖೋಬ್ರಗಡೆ ಎಂಬ ಮಹಿಳೆ ಕಳೆದ 14 ವರ್ಷಗಳಿಂದ ತನ್ನ ಸಹೋದರ (Brother) ಪ್ರಸನ್ನಜಿತ್ ರಂಗ ಅವರಿಗೆ ರಾಖಿ ಕಟ್ಟಲು ಕಾಯುತ್ತಿದ್ದಾರೆ. ಪ್ರಸನ್ನಜಿತ್ ಪಾಕಿಸ್ತಾನದ (Pakistan) ಲಾಹೋರ್‌ನ ಕೋಟ್ ಲಖ್‌ಪತ್ ಕೇಂದ್ರೀಯ ಜೈಲಿನಲ್ಲಿದ್ದಾರೆ. ಈ ರಕ್ಷಾ ಬಂಧನವನ್ನೂ ಹಿಂದಿನಂತೆ ತಮ್ಮನನ್ನು ಭೇಟಿಯಾಗದ ದುಃಖದೊಂದಿಗೆ ಸಂಘಮಿತ್ರಾ ಕಳೆದಿದ್ದಾರೆೆ. ಪಹಲ್ಗಾಮ್ ದಾಳಿಯಿಂದಾಗಿ ಪಾಕಿಸ್ತಾನಕ್ಕೆ ಅಂಚೆ ಮತ್ತು ಕೊರಿಯರ್ ಸೇವೆ ಸ್ಥಗಿತಗೊಂಡಿರುವುದರಿಂದ, ಸಂಘಮಿತ್ರಾಳ ಭಾವನಾತ್ಮಕ ಪತ್ರ ತಮ್ಮನಿಗೆ ತಲುಪಿಲ್ಲ.

ಪತ್ರದ ಸಂದೇಶ

“ಸಹೋದರ, ರಕ್ಷಾ ಬಂಧನದಂದು ನಿನ್ನನ್ನು ತುಂಬಾ ನೆನಪಿಸಿಕೊಳ್ಳುತ್ತೇನೆ. ರಾಖಿ ಕಳುಹಿಸಲು ಇಚ್ಛಿಸುತ್ತೇನೆ. ಆದರೆ ನೀನು ಭಾರತದಿಂದ ದೂರದಲ್ಲಿರುವೆ. ಭಾರತ ಸರ್ಕಾರ ನನ್ನ ಪ್ರೀತಿಯ ರಾಖಿಯನ್ನು ಕೋಟ್ ಲಖ್‌ಪತ್ ಜೈಲಿಗೆ ಕಳುಹಿಸಿದರೆ, ಸಹೋದರಿಯ ರಾಖಿ ಕಟ್ಟುವ ಆಸೆ ಈಡೇರುತ್ತಿತ್ತು. ಎಲ್ಲ ಸಹೋದರಿಯರು ತಮ್ಮ ಒಡಹುಟ್ಟಿದವರಿಗೆ ರಾಖಿ ಕಟ್ಟುತ್ತಾರೆ. ಆದರೆ ನಾನು ದುರದೃಷ್ಟದ ಸಹೋದರಿ. ಅಮ್ಮ ಕೂಡ ನಿನ್ನನ್ನು ತುಂಬಾ ನೆನಪು ಮಾಡಿಕೊಳ್ಳುತ್ತಾಳೆ. ಬಂಧು ಬಳಗದವರು ಕೂಡ ನಿನ್ನನ್ನು ಭೇಟಿಯಾಗಲು ಕಾಯುತ್ತಿದ್ದಾರೆ” ಎಂದು ಆಕೆ ಪತ್ರದಲ್ಲಿ ಬರೆದಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಆತನೇ ನನ್ನ ಸಹೋದರ; ಹಿಂದೂ ಯುವಕನಿಗೆ ರಾಖಿ ಕಟ್ಟಿದ ಮುಸ್ಲಿಂ ಹುಡುಗಿಯ ಹೃದಯಸ್ಪರ್ಶಿ ಕಥೆಯಿದು
ಫಾರ್ಮಸಿ ವಿದ್ಯಾರ್ಥಿಯಾಗಿದ್ದ ಪ್ರಸನ್ನಜಿತ್ ಕೆಲ ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಕುಟುಂಬವರು ಆತ ಸತ್ತಿದ್ದಾನೆ ಎಂದು ಭಾವಿಸಿದ್ದರು. ಆದರೆ 2021ರಲ್ಲಿ ಕೋಟ್ ಲಖ್‌ಪತ್ ಜೈಲಿನಿಂದ ಬಿಡುಗಡೆಯಾದ ಭಾರತೀಯ ಕೈದಿಯೊಬ್ಬ ಆತ ಜೀವಂತವಾಗಿರುವುದಾಗಿ ತಿಳಿಸಿದರು. 2019ರ ಅಕ್ಟೋಬರ್‌ನಿಂದ ಅವರನ್ನು ಬಾಟಾಪುರದಿಂದ ಪಾಕಿಸ್ತಾನ ತನ್ನ ವಶಕ್ಕೆ ಪಡೆದುಕೊಂಡಿದೆ. ಆತ ಬೇರೆ ಹೆಸರಿನಲ್ಲಿ ದಾಖಲಾಗಿದ್ದರೂ, ತನ್ನ ನಿಜವಾದ ಗುರುತು ಮತ್ತು ಕುಟುಂಬದ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಪ್ರಸನ್ನಜಿತ್‌ನ ತಂದೆ ಆತನ ಮಗ ವಾಪಸ್ ಬರುತ್ತಾನೆಂದು ಕಾಯುತ್ತಾ ಮೃತಪಟ್ಟಿದ್ದಾರೆ. ತಾಯಿ, ಈಗ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿ ದಿನಗೂಲಿ ಮಾಡುವ ಸಂಘಮಿತ್ರಾ, ಸಹೋದರನ ಬಿಡುಗಡೆಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.