ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pak Conflict: ಇಂದು ನಿನ್ನೆಯದ್ದಲ್ಲ ಇಂಡಿಯಾ-ಪಾಕ್‌ ಸಂಘರ್ಷ; ಇಲ್ಲಿದೆ ಸಂಪೂರ್ಣ ಮಾಹಿತಿ

ಏಪ್ರಿಲ್ 22, 2025 ರಂದು 26 ನಾಗರಿಕರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಮೊದಲೇ ಬೂದಿ ಮುಚ್ಚಿದ ಕೆಂಡದಂತಿದ್ದ ಭಾರತ-ಪಾಕಿಸ್ತಾನ ನಡುವಿನ ಪ್ರಕ್ಷುಬ್ಧತೆ ಕಿಡಿಗೆ ಕಿಚ್ಚು ಹಚ್ಚಿದೆ. ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಪಾಕಿಸ್ತಾನವನ್ನು ಪತರುಗುಟ್ಟುವಂತೆ ಮಾಡಿದೆ. ಉಭಯ ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣ ದಟ್ಟವಾಗಿದೆ. ಆದರೆ ಈ ಯುದ್ಧ, ಸಂಘರ್ಷ ಇಂದು ನಿನ್ನೆಯದ್ದಲ್ಲ. 1947 ರಲ್ಲಿ ಸ್ವಾತಂತ್ರ್ಯ ಪಡೆದಾಗಿನಿಂದ ಭಾರತ ಮತ್ತು ಪಾಕಿಸ್ತಾನ ಹಲವಾರು ಯುದ್ಧಗಳು ಮತ್ತು ಸಂಘರ್ಷಗಳಲ್ಲಿ ಭಾಗಿಯಾಗಿವೆ. ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಸ್ಕ್ರಾಲ್ ಮಾಡಿ.

1/8

ಮೊದಲ ಭಾರತ-ಪಾಕಿಸ್ತಾನ ಯುದ್ಧ (1947-48): ಮೊದಲ ಕಾಶ್ಮೀರ ಯುದ್ಧ ಎಂದೂ ಕರೆಯಲ್ಪಡುವ ಇದು ಅಕ್ಟೋಬರ್ 1947 ರಲ್ಲಿ ಪ್ರಾರಂಭವಾಯಿತು. ಸ್ವಾತಂತ್ರ್ಯದ ನಂತರ ಕಾಶ್ಮೀರ ಪ್ರದೇಶದ ಮೇಲೆ ಈ ಯುದ್ಧ ನಡೆಯಿತು. ಜನವರಿ 1, 1949 ರ ರಾತ್ರಿ 23:59 ಕ್ಕೆ ಔಪಚಾರಿಕ ಕದನ ವಿರಾಮವನ್ನು ಘೋಷಿಸಲಾಯಿತು. ಇದು ಗಡಿ ನಿಯಂತ್ರಣ ರೇಖೆಯ ಸ್ಥಾಪನೆಗೆ ಕಾರಣವಾಯಿತು.

2/8

1965 ರ ಇಂಡೋ-ಪಾಕಿಸ್ತಾನಿ ಯುದ್ಧ: ಕಾಶ್ಮೀರ ಪ್ರದೇಶಕ್ಕೆ ತನ್ನ ಪಡೆಗಳನ್ನು ಒಳನುಸುಳಲು ಪಾಕಿಸ್ತಾನ ನಡೆಸಿದ ಆಪರೇಷನ್ ಜಿಬ್ರಾಲ್ಟರ್ ನಂತರ 17 ದಿನಗಳ ಯುದ್ಧ ಪ್ರಾರಂಭವಾಯಿತು. ಇದು 1966 ರಲ್ಲಿ ಸೋವಿಯತ್ ಒಕ್ಕೂಟ ಮತ್ತು ಯುಎಸ್ ಮಧ್ಯಸ್ಥಿಕೆಯಲ್ಲಿ ತಾಷ್ಕೆಂಟ್ ಒಪ್ಪಂದದೊಂದಿಗೆ ಕದನ ವಿರಾಮದಲ್ಲಿ ಕೊನೆಗೊಂಡಿತು.

3/8

1971 ರ ಭಾರತ-ಪಾಕಿಸ್ತಾನ ಯುದ್ಧ: ಇದು ಕಾಶ್ಮೀರಕ್ಕಾಗಿ ನಡೆದ ಯುದ್ಧ ಅಲ್ಲ. ಆದರೆ ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಯಿಂದ ಹುಟ್ಟಿಕೊಂಡಿತು, ಇದು ಅಂತಿಮವಾಗಿ ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. ಇದು ಭಾರತಕ್ಕೆ ನಿರ್ಣಾಯಕ ವಿಜಯವಾಗಿತ್ತು.

4/8

1999 ರ ಕಾರ್ಗಿಲ್ ಯುದ್ಧ: ಪಾಕಿಸ್ತಾನಿ ಸೈನ್ಯಕ್ಕೆ ದೊಡ್ಡ ಸೋಲುನುಸಿದ ಯುದ್ಧ ಇದು. ಪಾಕಿಸ್ತಾನಿ ಪಡೆಗಳು ಎಲ್‌ಒಸಿಯಾದ್ಯಂತ ನುಸುಳಿ ಕಾರ್ಗಿಲ್ ಜಿಲ್ಲೆಯ ಪ್ರಮುಖ ಭಾಗಗಳನ್ನು ಆಕ್ರಮಿಸಿಕೊಂಡ ನಂತರ ಯುದ್ಧ ನಡೆಯಿತು. ಸಂಘರ್ಷದ ಎರಡು ತಿಂಗಳ ನಂತರ, ಭಾರತವು ಪ್ರದೇಶಗಳ ಮೇಲೆ ಮತ್ತೆ ಹಿಡಿತ ಸಾಧಿಸಿತು.

5/8

ಇವುಗಳ ಹೊರತಾಗಿ, ಹಲವಾರು ಇತರ ಸಂಘರ್ಷಗಳು ಮತ್ತು ಬಿಕ್ಕಟ್ಟುಗಳು ನಡೆದಿವೆ. ಅತ್ಯಂತ ಗಮನಾರ್ಹ ಮತ್ತು ದೀರ್ಘಕಾಲೀನವಾದದ್ದು ಸಿಯಾಚಿನ್ ಸಂಘರ್ಷ (1984-2003). ಕದನ ವಿರಾಮದ ಹೊರತಾಗಿಯೂ, ಎರಡೂ ಕಡೆಯವರು ಈ ಪ್ರದೇಶದಲ್ಲಿ ಭಾರೀ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

6/8

2008 ರ ಮುಂಬೈ ಭಯೋತ್ಪಾದಕ ದಾಳಿಯ ನಂತರ, ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟನ್ನು ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಶಮನಗೊಳಿಸಲಾಯಿತು.

7/8

2016 ರಲ್ಲಿ ಕಾಶ್ಮೀರದ ಉರಿಯಲ್ಲಿರುವ ಭಾರತೀಯ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಎಲ್‌ಒಸಿಯಾದ್ಯಂತ ಪ್ರತೀಕಾರದ "ಸರ್ಜಿಕಲ್ ಸ್ಟ್ರೈಕ್"ಗಳನ್ನು ನಡೆಸಿತು.

8/8

2019ರಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ಆತ್ಮಾಹುತಿ ದಾಳಿ ನಡೆದ ನಂತರ ಭಾರತವು ಪಾಕಿಸ್ತಾನದ ಮೇಲೆ ವೈಮಾನಿಕದಾಳಿ ನಡೆಸಿತು.