ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Agni-5: ಒಡಿಶಾದಲ್ಲಿ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಯಶಸ್ವಿ; ಶತ್ರುಗಳ ಎದೆಯಲ್ಲಿ ನಡುಕ ಶುರು

Ballistic Missile Agni-5: ಆಗಸ್ಟ್‌ 20ರಂದು ಒಡಿಶಾದ ಚಂಡಿಪುರದಿಂದ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ‘ಅಗ್ನಿ 5’ ಅನ್ನು ಯಶಸ್ವಿಯಾಗಿ ಭಾರತ ಪರೀಕ್ಷಿಸಿದೆ. ಆ ಮೂಲಕ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಒಡಿಶಾದಲ್ಲಿ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಯಶಸ್ವಿ

Ramesh B Ramesh B Aug 20, 2025 11:11 PM

ಭುವನೇಶ್ವರ: ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬುಧವಾರ (ಆಗಸ್ಟ್‌ 20) ಒಡಿಶಾದ (Odisha) ಚಂಡಿಪುರದಿಂದ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ (Ballistic Missile) ‘ಅಗ್ನಿ 5’ (Agni-5) ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಆ ಮೂಲಕ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. "ಆಗಸ್ಟ್ 20ರಂದು ಒಡಿಶಾದ ಚಂಡಿಪುರದ ಸಮಗ್ರ ಪರೀಕ್ಷಾ ಶ್ರೇಣಿಯಿಂದ ಅಗ್ನಿ 5 ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆʼʼ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯಾದ ಅಗ್ನಿ-5 ಅನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದೆ. ಪರೀಕ್ಷೆಯನ್ನು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಆಶ್ರಯದಲ್ಲಿ ನಡೆಸಲಾಯಿತು ಎಂದು ಸಚಿವಾಲಯ ಹೇಳಿದೆ.

ಅಗ್ನಿ-5 ಕ್ಷಿಪಣಿಯನ್ನು ರಸ್ತೆ ಅಥವಾ ರೈಲು ಹಳಿಯಿಂದಲೂ ಉಡಾವಣೆ ಮಾಡಬಹುದಾಗಿದೆ. ಅಲ್ಲದೆ ಇದು ಉಡಾವಣಾ ಸಮಯವನ್ನು ಕಡಿಮೆ ಮಾಡುತ್ತದೆ. ಇದು 5,000 ಕಿ.ಮೀ.ಗಿಂತ ಹೆಚ್ಚು ದೂರದ ಗುರಿಗಳನ್ನು ಹೊಡೆಯಬಲ್ಲದು ಮತ್ತು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಪಂಚದಾದ್ಯಂತ ಕೆಲವೇ ಕೆಲವು ದೇಶಗಳು ಮಾತ್ರ 5,000 ಕಿ.ಮೀ.ವರೆಗೆ ಸಾಗುವ ಕ್ಷಿಪಣಿಗಳನ್ನು ಪರೀಕ್ಷಿಸಿದ್ದು, ಈ ಸಾಲಿಗೆ ಭಾರತವೂ ಸೇರಿದೆ. ಈ ಕ್ಷಿಪಣಿಯು ಮೂರು ಹಂತದ, ಘನ-ಇಂಧನ ವ್ಯವಸ್ಥೆ ಹೊಂದಿದೆ.



ಜುಲೈ 18ರಂದು ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಶಾರ್ಟ್-ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿ(SRBM)ಗಳಾದ ಪೃಥ್ವಿ-II ಮತ್ತು ಅಗ್ನಿ-I ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Indian Navy: "ಯುದ್ಧಕ್ಕೆ ನಾವು ರೆಡಿ"; ಕ್ಷಿಪಣಿ ಪರೀಕ್ಷೆ ನಡೆಸಿದ ಭಾರತೀಯ ನೌಕಾಪಡೆ

ಕ್ಷಿಪಣಿ ಪರೀಕ್ಷೆ ನಡೆಸಿದ ಭಾರತೀಯ ನೌಕಾಪಡೆ

ಏಪ್ರಿಲ್‌ನಲ್ಲಿ ಭಾರತವು ಸಮುದ್ರದ ಮಧ್ಯದಲ್ಲಿ ಯುದ್ಧನೌಕೆಗಳಿಂದ (Indian Navy) ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿತ್ತು. ಈ ಯುದ್ಧನೌಕೆಗಳಲ್ಲಿ ಕೋಲ್ಕತಾ-ವರ್ಗದ ವಿಧ್ವಂಸಕ ನೌಕೆಗಳು ಮತ್ತು ನೀಲಗಿರಿ ಮತ್ತು ಕ್ರಿವಾಕ್-ವರ್ಗದ ಯುದ್ಧನೌಕೆಗಳು ಸೇರಿದ್ದವು. ಭಾರತೀಯ ನೌಕಾಪಡೆಯು ರಾಷ್ಟ್ರದ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ, ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ಹೇಗಾದರೂ ಯುದ್ಧಕ್ಕೆ ಸಿದ್ಧವಾಗಿದೆ ಎಂದು ನೌಕಾ ಸೇನೆ ಎಕ್ಸ್‌ನಲ್ಲಿ ತಿಳಿಸಿತ್ತು. ಮತ್ತೊಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಐಎನ್ಎಸ್ ಸೂರತ್, ಅರೇಬಿಯನ್ ಸಮುದ್ರದಲ್ಲಿ ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ (MR-SAM) ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು.