ನವದೆಹಲಿ: ವೃಂದಾವನದ ಶ್ರೀ ಬಂಕೆ ಬಿಹಾರಿ (Banke Bihari Temple) ದೇವಾಲಯದ ನಿಧಿಯಿಂದ 500 ಕೋಟಿ ರೂಪಾಯಿಗಳನ್ನು ಬಳಸಿಕೊಂಡು ಕಾರಿಡಾರ್‌ನ ಪುನರಾಭಿವೃದ್ಧಿ ಕುರಿತು ಉತ್ತರ ಪ್ರದೇಶ ಸರ್ಕಾರ ಹಾಗೂ ದೇವಾಲಯದ ಟ್ರಸ್ಟ್ ನಡುವೆ ಜಟಾಪಟಿ ಏರ್ಪಟ್ಟಿದೆ. ದೇವಾಲಯದ ನಿರ್ವಹಣೆಯನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್ (Supreme Court) ಅಸಮಾಧಾನ ವ್ಯಕ್ತ ಪಡಿಸಿದೆ. ಶ್ರೀ ಕೃಷ್ಣನೇ ಜಗತ್ತಿನ ಮೊದಲ ಮಧ್ಯವರ್ತಿ. ಇದೀಗ ಆತನ ದೇವಾಲಯವೇ ಸಮಸ್ಯೆಯಲ್ಲಿ ಸಿಲುಕಿದೆ ಎಂದು ಕೋರ್ಟ್ ಹೇಳಿದೆ.
ಕೃಷ್ಣ ಜಗತ್ತಿನ ಮೊದಲ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸಿದ್ದಾನೆ ಈ ವಿಷಯವನ್ನು ಬೇಗ ಬಗೆಹರಿಸಿ ಎಂದು ಎಂದು ನ್ಯಾಯಾಲಯ ಹೇಳಿದೆ. ರಾಜ್ಯ ಸರ್ಕಾರ ಮತ್ತು ದೇವಾಲಯ ಟ್ರಸ್ಟ್ ನಡುವಿನ ಸಮಸ್ಯೆಯನ್ನು ಇತ್ಯರ್ಥಪಡಿಸಲು ಕೋರ್ಟ್ ಈ ಹೇಳಿಕೆಯನ್ನು ನೀಡಿದೆ. ಮೇ 15 ರಂದು ದೇವಾಲಯದ ನಿಧಿಯನ್ನು ಕಾರಿಡಾರ್ ಅಭಿವೃದ್ಧಿಪಡಿಸಲು ಬಳಸಿಕೊಳ್ಳಲು ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆದ "ರಹಸ್ಯ ವಿಧಾನ"ದ ಬಗ್ಗೆ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮೇ ತಿಂಗಳಲ್ಲಿ, 500 ಕೋಟಿ ರೂ. ವೆಚ್ಚದ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲು ಐದು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ದೇವಾಲಯದ ನಿಧಿಯನ್ನು ಬಳಸಲು ಸುಪ್ರೀಂ ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿತ್ತು. ಷರತ್ತಿನ ಪ್ರಕಾರ ಭೂಮಿಯನ್ನು ದೇವರ ಹೆಸರಿನಲ್ಲಿ ನೋಂದಾಯಿಸಬೇಕು ಎಂದು ಹೇಳಿತ್ತು. ಸೋಮವಾರ, ದೇವಾಲಯದ ನಿಧಿಯ ಬಳಕೆಗೆ ಅವಕಾಶ ನೀಡುವ ಕುರಿತು ಮೇ ತಿಂಗಳ ತೀರ್ಪನ್ನು ಹಿಂಪಡೆಯಲು ಪೀಠ ಪ್ರಸ್ತಾಪಿಸಿದೆ.
ಈ ಸುದ್ದಿಯನ್ನೂ ಓದಿ: Rahul Gandhi: "ನಿಜವಾದ ಭಾರತೀಯ ಹೀಗೆ ಹೇಳುವುದಿಲ್ಲ"; ರಾಹುಲ್ ಗಾಂಧಿ ಹೇಳಿಕೆಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್
1862 ರಲ್ಲಿ ನಿರ್ಮಿಸಲಾದ ಬಂಕೆ ಬಿಹಾರಿ ದೇವಾಲಯವು ಉತ್ತರ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ದೈನಂದಿನ ಆಚರಣೆಗಳು ಮತ್ತು ದೇವಾಲಯ ಆಡಳಿತವನ್ನು ನೋಡಿಕೊಳ್ಳುವ ಆನುವಂಶಿಕ ಪುರೋಹಿತಶಾಹಿ ಶೆಬೈಟ್ಸ್ ನಿರ್ವಹಿಸುತ್ತಾರೆ. 2022 ರಲ್ಲಿ ಜನ್ಮಾಷ್ಟಮಿ ಆಚರಣೆಯ ಸಮಯದಲ್ಲಿ ಕಾಲ್ತುಳಿತದಂತಹ ಘಟನೆ ಸಂಭವಿಸಿ ಇಬ್ಬರು ಸಾವನ್ನಪ್ಪಿದ ನಂತರ ಪುನರಾಭಿವೃದ್ಧಿಗೆ ಬೇಡಿಕೆ ಹೆಚ್ಚಿದೆ.