ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mumbai Bomb Threat: 400 ಕೆ.ಜಿ RDX ಸ್ಫೋಟದ ಬೆದರಿಕೆ ಹಾಕಿದ್ದವ ಅರೆಸ್ಟ್‌- ಸ್ನೇಹಿತನ ಮೇಲಿನ ದ್ವೇಷಕ್ಕೆ ಈ ಕೃತ್ಯ!

ಶನಿವಾರ ಅನಂತ ಚತುರ್ದಶಿಯಂದು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಮುಂಬೈ ನಗರದಾದ್ಯಂತ ಬಾಂಬ್ ಸ್ಫೋಟಿಸುವ ಬೆದರಿಕೆ ನಿನ್ನೆ ಬಂದಿತ್ತು. ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಯಲ್ಲಿ ಬಂದ ಸಂದೇಶದಲ್ಲಿ ಮುಂಬೈನಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟಗಳಿಂದ ಇಡೀ ನಗರವು ನಡುಗುತ್ತದೆ ಎಂದು ಹೇಳಲಾಗಿತ್ತು.

ಮುಂಬೈ: ಅನಂತ ಚತುರ್ದಶಿ ಸಂದರ್ಭದಲ್ಲಿ ನಗರದ ಕೆಲವು ಭಾಗಗಳಲ್ಲಿ ಬಾಂಬ್ ದಾಳಿ(Terror Attack alert) ನಡೆಸುವುದಾಗಿ ಬೆದರಿಕೆವೊಡ್ಡಿದ್ದ ಕಿಡಿಗೇಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು 51 ವರ್ಷದ ಅಶ್ವಿನಿ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಬಿಹಾರದ ಪಾಟಲಿಪುತ್ರದವನು. ಕಳೆದ ಐದು ವರ್ಷಗಳಿಂದ ನೋಯ್ಡಾದಲ್ಲಿ ವಾಸಿಸುತ್ತಿದ್ದ ಈತ ವೃತ್ತಿಯಲ್ಲಿ ಜ್ಯೋತಿಷಿ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆ ವ್ಯಕ್ತಿಯ ಫೋನ್ ಮತ್ತು ಸಿಮ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ ಮತ್ತು ಆತನನ್ನು ನೋಯ್ಡಾದಿಂದ ಮುಂಬೈಗೆ ಕರೆತರಲಾಗುತ್ತಿದೆ.

ಶನಿವಾರ ಅನಂತ ಚತುರ್ದಶಿಯಂದು ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಮುಂಬೈ ನಗರದಾದ್ಯಂತ ಬಾಂಬ್ ಸ್ಫೋಟಿಸುವ ಬೆದರಿಕೆ ನಿನ್ನೆ ಬಂದಿತ್ತು. ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಯಲ್ಲಿ ಬಂದ ಸಂದೇಶದಲ್ಲಿ ಮುಂಬೈನಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಸ್ಫೋಟಗಳಿಂದ ಇಡೀ ನಗರವು ನಡುಗುತ್ತದೆ ಎಂದು ಹೇಳಲಾಗಿತ್ತು. ಇನ್ನು ಈ ಸಂದೇಶ ಕಳುಹಿಸಿದವರು ತಮ್ಮನ್ನು ಲಷ್ಕರ್-ಎ-ಜಿಹಾದಿ ಎಂದು ಗುರುತಿಸಿಕೊಂಡಿದ್ದರು ಮತ್ತು ಪೊಲೀಸರ ಪ್ರಕಾರ 14 ಪಾಕಿಸ್ತಾನಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಿದ್ದಾರೆ. ಅವರ ಬಳಿ ಇರುವ 400 ಕೆಜಿ ಆರ್‌ಡಿಎಕ್ಸ್ ಸ್ಫೋಟಿಸಲಾಗುವುದು ಮತ್ತು ಒಂದು ಕೋಟಿ ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಬೆದರಿಕೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Terror Attack alert: 14 ಪಾಕ್‌ ಉಗ್ರರು... 400 kg RDX- ಬರೋಬ್ಬರಿ 1ಕೋಟಿ ಜನರ ಹತ್ಯೆಗೆ ಭಾರೀ ಸಂಚು- ಮುಂಬೈನಲ್ಲಿ ಹೈ ಅಲರ್ಟ್‌

ಸ್ನೇಹಿತನ ಮೇಲಿನ ದ್ವೇಷಕ್ಕೆ ಈ ಕೃತ್ಯ!

ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಅಶ್ವಿನ್‌ ತನ್ನ ಸ್ನೇಹಿತನ ಮೇಲಿನ ಕೋಪಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ತನ್ನ ಸ್ನೇಹಿತ ಫಿರೋಜ್‌ನನ್ನು ಭಯೋತ್ಪಾದಕಾ ಎಂದು ಬಿಂಬಿಸಲು ಅಶ್ವಿನ್‌ ಈ ರೀತಿ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. 2023 ರಲ್ಲಿ ಪಾಟ್ನಾದ ಫುಲ್ವಾರಿ ಶರೀಫ್‌ನಲ್ಲಿ ಫಿರೋಜ್ ದಾಖಲಿಸಿದ ಪ್ರಕರಣದ ಆಧಾರದ ಮೇಲೆ ಬಂಧನಕ್ಕೊಳಗಾದ ನಂತರ ಅಶ್ವಿನಿ ಮೂರು ತಿಂಗಳು ಜೈಲಿನಲ್ಲಿದ್ದ. ಇದಕ್ಕೆ ಸೇಡು ತೀರಿಸಿಕೊಳ್ಳಲು, ಅಶ್ವಿನಿ ಫಿರೋಜ್ ಹೆಸರಿನಲ್ಲಿ ಮುಂಬೈಗೆ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾನೆ. .