ನವದೆಹಲಿ: ಲಷ್ಕರ್-ಎ-ತೈಬಾದ ( Lashkar-e-Taiba) ಸಂಸ್ಥಾಪಕ ಹಫೀಜ್ ಸಯೀದ್ (terrorist Hafiz Saeed) ನನ್ನು ಭೇಟಿಯಾಗಿದ್ದಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Prime Minister Manmohan Singh) ಧನ್ಯವಾದ ಸಮರ್ಪಿಸಿದ್ದಾರೆ ಎಂದು ಭಯೋತ್ಪಾದನೆಗೆ (terror) ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಪ್ರತ್ಯೇಕತಾವಾದಿ ಗುಂಪು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (Jammu and Kashmir Liberation Front) ಮುಖ್ಯಸ್ಥ ಯಾಸಿನ್ ಮಲಿಕ್ (JKLF chief Yasin Malik) ಹೇಳಿರುವುದಾಗಿ ಕಳೆದ ತಿಂಗಳು ದೆಹಲಿ ಹೈಕೋರ್ಟ್‌ಗೆ (Delhi High Court) ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
26/11 ಮುಂಬೈ ದಾಳಿ ಪ್ರಕರಣದ ಸಂಚುಕೋರ ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ನನ್ನು ಭೇಟಿಯಾಗಿದ್ದಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಯೋತ್ಪಾದಕ ಯಾಸಿನ್ ಮಲಿಕ್ ಗೆ ವೈಯಕ್ತಿಕವಾಗಿ ಧನ್ಯವಾದ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಇದು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗಾಗಿ ನಡೆದಿರುವುದು. ಭಾರತೀಯ ಗುಪ್ತಚರ ಅಧಿಕಾರಿಗಳ ಕೋರಿಕೆಯ ಮೇರೆಗೆ ನಡೆಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
2005ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡುವ ಮೊದಲು ಗುಪ್ತಚರ ದಳದ (ಐಬಿ) ಮಾಜಿ ವಿಶೇಷ ನಿರ್ದೇಶಕ ವಿಕೆ. ಜೋಶಿ ನವದೆಹಲಿಯಲ್ಲಿ ತಮ್ಮನ್ನು ಭೇಟಿಯಾಗಿದ್ದರು. ಭಯೋತ್ಪಾದಕರು ಮತ್ತು ರಾಜಕೀಯ ನಾಯಕರ ನಡುವೆ ಶಾಂತಿ ಮಾತುಕತೆಗಾಗಿ ಜೋಶಿ ಮಲಿಕ್ ತಮ್ಮನ್ನು ಒತ್ತಾಯಿಸಿದ್ದರು ಎಂದು ಮಲಿಕ್ ತಿಳಿಸಿದ್ದಾನೆ.
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕಾದರೆ ಭಯೋತ್ಪಾದಕ ನಾಯಕರನ್ನು ಸೇರಿಸಿಕೊಳ್ಳಲೇಬೇಕು ಮಲಿಕ್, ಪಾಕಿಸ್ತಾನದಲ್ಲಿ ನಡೆದ ಸಮಾರಂಭದಲ್ಲಿ ಸಯೀದ್ ಮತ್ತು ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಇತರ ನಾಯಕರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ್ದಾನೆ. ಸಯೀದ್ ಆಯೋಜಿಸಿದ್ದ ಜಿಹಾದಿ ಗುಂಪುಗಳ ಸಭೆಯಲ್ಲಿ ಮಲಿಕ್ ಇಸ್ಲಾಮಿಕ್ ಬೋಧನೆಗಳನ್ನು ಉಲ್ಲೇಖಿಸಿ ಹಿಂಸೆಯ ಬದಲು ಶಾಂತಿಯನ್ನು ಆರಿಸಿಕೊಳ್ಳುವಂತೆ ಒತ್ತಾಯಿಸುವ ಭಾಷಣ ಮಾಡಿದ್ದೆ. ಆದರೆ ಇದನ್ನೇ ತನ್ನ ವಿರುದ್ಧ ಬಳಸಿಕೊಳ್ಳಲಾಗಿದೆ. ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳೊಂದಿಗಿನ ಸಂಪರ್ಕದ ಪುರಾವೆಯಾಗಿ ಈ ಸಭೆಯ ಚಿತ್ರಗಳನ್ನು ಸಾಕ್ಷಿಯಾಗಿ ಮಾಡಲಾಗಿದೆ ಎಂದು ಹೇಳಿದ್ದಾನೆ.
ತಾನು ಅಲ್ಲಿಂದ ಮರಳಿದ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೇರವಾಗಿ ಭೇಟಿಯಾಗುವಂತೆ ಕೇಳಿಕೊಳ್ಳಲಾಗಿತ್ತು. ಆ ದಿನವೇ ಸಂಜೆ ನವದೆಹಲಿಯಲ್ಲಿ ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರ ಸಮ್ಮುಖದಲ್ಲಿ ಸಿಂಗ್ ಅವರನ್ನು ತಾನು ಭೇಟಿಯಾಗಿದ್ದೆ. ಈ ವೇಳೆ ಸಿಂಗ್ ಅವರು ಶಾಂತಿ ಮಾತುಕತೆಗೆ ಸಹಕರಿಸಿರುವುದಕ್ಕಾಗಿ ತಮಗೆ ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಎಂದು ಆತ ತಿಳಿಸಿದ್ದಾನೆ.
ಇದನ್ನೂ ಓದಿ: Earthquake: ರಷ್ಯಾದಲ್ಲಿ 7.8 ರಿಕ್ಟರ್ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ, ಪಾಕ್‌ನಲ್ಲೂ ಭೂಕಂಪ
ತಾನು ಸಿಂಗ್ ಅವರನ್ನು ಮಾತ್ರವಲ್ಲ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಐ.ಕೆ. ಗುಜ್ರಾಲ್, ಮಾಜಿ ಗೃಹ ಮತ್ತು ಹಣಕಾಸು ಸಚಿವ ಪಿ ಚಿದಂಬರಂ, ಮಾಜಿ ಗೃಹ ಸಚಿವ ರಾಜೇಶ್ ಪೈಲಟ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹಲವು ಉನ್ನತ ರಾಜಕೀಯ ನಾಯಕರನ್ನು ಭೇಟಿ ಮಾಡಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಸಿರುವುದಾಗಿ ಮಲಿಕ್ ಹೇಳಿದ್ದಾನೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ.