ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಹವಾಮಾನ ವೈಪರಿತ್ಯ; ಹೆಲಿಕಾಪ್ಟರ್‌ ಬಿಟ್ಟು ಒಂದುವರೆ ಗಂಟೆ ಕಾರಿನಲ್ಲಿ ಚುರಚಂದಪುರಕ್ಕೆ ಪ್ರಯಾಣಿಸಿದ ಮೋದಿ

ಪ್ರಧಾನಿ ಮೋದಿ (Narendra Modi) ಇಂದು ಮಣಿಪುರಕ್ಕೆ ಭೇಟಿ ನೀಡಿದ್ದಾರೆ. 2023 ರ ಗಲಭೆ ಬಳಿಕ ಪ್ರಧಾನಿ ಮೊದಲ ಬಾರಿಗೆ ಇಲ್ಲಿ (Manipur) ಭೇಟಿ ನೀಡಿದ್ದಾರೆ. ಅವರು ಇಂಫಾಲಕ್ಕೆ ಬಂದಿಳಿದಾಗ ಮಣಿಪುರದಾದ್ಯಂತ ಜೋರಾಗಿ ಮಳೆಯಾಗುತ್ತಿತ್ತು.

ಇಂಫಾಲ್‌: ಪ್ರಧಾನಿ ಮೋದಿ (Narendra Modi) ಇಂದು ಮಣಿಪುರಕ್ಕೆ ಭೇಟಿ ನೀಡಿದ್ದಾರೆ. 2023 ರ ಗಲಭೆ ಬಳಿಕ ಪ್ರಧಾನಿ ಮೊದಲ ಬಾರಿಗೆ ಇಲ್ಲಿ (Manipur) ಭೇಟಿ ನೀಡಿದ್ದಾರೆ. ಅವರು ಇಂಫಾಲಕ್ಕೆ ಬಂದಿಳಿದಾಗ ಮಣಿಪುರದಾದ್ಯಂತ ಜೋರಾಗಿ ಮಳೆಯಾಗುತ್ತಿತ್ತು. ಮಳೆಯಿಂದಾಗಿ ಚುರಚಂದಪುರಕ್ಕೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಹವಾಮಾನ ಅನುಕೂಲಕರವಾಗಿಲ್ಲ ಎಂದು ಅಧಿಕಾರಿಗಳು ಪ್ರಧಾನಿಯವರಿಗೆ ಮಾಹಿತಿ ನೀಡಿದರು. ರ‍್ಯಾಲಿ ನಡೆಯುವ ಸ್ಥಳವು ವಿಮಾನ ನಿಲ್ದಾಣದಿಂದ ಸಮಾರು ಒಂದು ವರೆಗೆ ಪ್ರಯಾಣಿಸುವಷ್ಟು ದೂರವಿತ್ತು. ಹೀಗಾಗಿ ಮೋದಿ ಕಾರಿನಲ್ಲಿಯೇ ನಿಲ್ದಾಣಕ್ಕೆ ಪ್ರಯಾಣಿಸಿದ್ದಾರೆ.

ಚುರಚಂದಪುರವು ಕುಕಿ-ಝೋ ಜನರು ವಾಸಿಸುವ ಸ್ಥಳವಾಗಿದೆ ಮತ್ತು ಮೈತೈ ಜನರ ಭದ್ರಕೋಟೆಯಾದ ಇಂಫಾಲ್ 61 ಕಿ.ಮೀ ದೂರದಲ್ಲಿದೆ. ಮಳೆಯಿಂದಾಗಿ ಚುರಚಂದಪುರಕ್ಕೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಹವಾಮಾನ ಅನುಕೂಲಕರವಾಗಿಲ್ಲ ಎಂಬ ಮಾಹಿತಿ ತಿಳಿದ ಬಳಿಕ ಪ್ರಧಾನ ಮಂತ್ರಿಯವರು ರಸ್ತೆ ಮೂಲಕ ರ್ಯಾಲಿ ಸ್ಥಳವನ್ನು ತಲುಪಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ. ಜನರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುವಂತೆ, ಎಷ್ಟೇ ಸಮಯ ತೆಗೆದುಕೊಂಡರೂ ಹೋಗುವುದಾಗಿ ಪ್ರಧಾನಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

"ಮಣಿಪುರದ ಜನರ ಉತ್ಸಾಹಕ್ಕೆ ನಾನು ನಮಸ್ಕರಿಸುತ್ತೇನೆ. ಇಷ್ಟು ಭಾರೀ ಮಳೆಯಲ್ಲೂ ನೀವು ಇಲ್ಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮ ಪ್ರೀತಿಗೆ ನಾನು ನಿಮಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಭಾರೀ ಮಳೆಯಿಂದಾಗಿ ನನ್ನ ಹೆಲಿಕಾಪ್ಟರ್ ಬರಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾನು ರಸ್ತೆಯ ಮೂಲಕ ಬರಲು ನಿರ್ಧರಿಸಿದೆ. ಇಂದು ರಸ್ತೆಯಲ್ಲಿ ನಾನು ಕಂಡ ದೃಶ್ಯಗಳು ನೋಡಿ ಹೆಲಿಕಾಪ್ಟರ್‌ ಹಾರದಿದ್ದೇ ಒಳ್ಳೆಯದು. ಮತ್ತು ನಾನು ರಸ್ತೆಯ ಮೂಲಕ ಬಂದಿದ್ದು ಒಳ್ಳೆಯದು ಎಂದು ನನ್ನ ಹೃದಯ ಹೇಳುತ್ತದೆ. ದಾರಿಯುದ್ದಕ್ಕೂ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಎಲ್ಲರೂ ನನಗೆ ನೀಡಿದ ಪ್ರೀತಿ ಮತ್ತು ವಾತ್ಸಲ್ಯ, ನನ್ನ ಜೀವನದಲ್ಲಿ ಈ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ತಲೆಬಾಗಿ ಮಣಿಪುರದ ಜನರಿಗೆ ನಮಸ್ಕರಿಸುತ್ತೇನೆ" ಎಂದು ಪ್ರಧಾನಿ ಮೋದಿ ಚುರಾಚಂದ್‌ಪುರದಲ್ಲಿ ಸಾವಿರಾರು ಜನರ ಸಭೆಯಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Narendra Modi: "ಇದು ಧೈರ್ಯಶಾಲಿಗಳ ನಾಡು"; ಮಣಿಪುರದ ಸಂತ್ರಸ್ತರನ್ನು ಭೇಟಿ ಮಾಡಿದ ಮೋದಿ

ಮಣಿಪುರದಲ್ಲಿ ಜೀವನವನ್ನು ಮತ್ತೆ ಹಳಿಗೆ ತರಲು, ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು. "ನಾನು ಇಂದು ನಿಮ್ಮೊಂದಿಗಿದ್ದೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ. ಭಾರತ ಸರ್ಕಾರ ಮಣಿಪುರದ ಜನರೊಂದಿಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು, "ಎಲ್ಲಾ ಗುಂಪುಗಳು ತಮ್ಮ ಕನಸುಗಳನ್ನು ನನಸಾಗಿಸಲು ಶಾಂತಿಯ ಹಾದಿಯನ್ನು ಹಿಡಿಯಬೇಕೆಂದು ಅವರು ಮನವಿ ಮಾಡಿದ್ದಾರೆ.