ನವದೆಹಲಿ: ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆಯ (Vote Chori Protest) ವಿರುದ್ಧ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಲೇ ಇವೆ. ಮಂಗಳವಾರವೂ ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ, ವಿರೋಧ ಪಕ್ಷದ ಸಂಸದರು ಮತದಾರರ ಪಟ್ಟಿಯಲ್ಲಿರುವ 124 ವರ್ಷದ 'ಮಿಂಟಾ ದೇವಿ ಅವರ ಫೋಟೋ ಇರುವ ಟಿಶರ್ಟ್ ಧರಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಟಿ ಶರ್ಟ್ ಹಿಂಬದಿ 124 ನಾಟ್ ಔಟ್ ಎಂದು ಬರೆಯಲಾಗಿದ್ದು ಬಹು ದೊಡ್ಡ ಪ್ರತಿಭಟನೆ ನಡೆಸಲಾಗುತ್ತಿದೆ.
124 ವರ್ಷದ ಮಿಂಟಾ ದೇವಿ ಬಿಹಾರ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವವರು ಎಂದು ಪಟ್ಟಿಯಲ್ಲಿ ಅವರ ಹೆಸರು ಕಂಡುಬಂದಿದೆ . ಇದೇ ರೀತಿ ಸಾವಿರ ಅಕ್ರಮಗಳು ಇವೆ ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಂಬಂಧಿಕರ ವಿಳಾಸಗಳು ಮತ್ತು ಹೆಸರುಗಳು ಇತ್ಯಾದಿಗಳು ನಕಲಿಯಾಗಿರುವ ಹಲವಾರು ಪ್ರಕರಣಗಳಿವೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ಮತ್ತು ಚುನಾವಣೆ (Congress Protest) ನಡೆಯಲಿರುವ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ (Election Commission) ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ಪ್ರತಿಭಟಿಸಿ ವಿರೋಧ ಪಕ್ಷದ ಸಂಸದರು ಬೃಹತ್ ಪ್ರತಿಭಟನೆಯನ್ನು ನಿನ್ನಡ ನಡೆಸಿದ್ದಾರೆ. ಸಮಾಜವಾದಿ ಪಕ್ಷ, ಟಿಎಂಸಿ, ಡಿಎಂಕೆ, ಎಎಪಿ, ಎಡ ಪಕ್ಷಗಳು, ಆರ್‌ಜೆಡಿ, ಎನ್‌ಸಿಪಿ (ಎಸ್‌ಪಿ), ಶಿವಸೇನೆ (ಯುಬಿಟಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಹಲವಾರು ಪಕ್ಷಗಳು ಬೆಳಿಗ್ಗೆ 11.30 ಕ್ಕೆ ಸಂಸತ್ತಿನ ಮಕರ ದ್ವಾರದಿಂದ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಲಾಗಿತ್ತು.
ಪೊಲೀಸರು ಹಾಗೂ ಸಂಸದರ ನಡುವೆ ವಾಗ್ವಾದ ನಡೆಯಿತು. ಚುನಾವಣಾ ಆಯೋಗದ ಕಚೇರಿ ಎದುರು ಸಂಸದರು ಪ್ರತಿಭಟನೆ ನಡೆಸಿದರು. ಬಿಜೆಪಿ ಮತ್ತು ಚುನಾವಣಾ ಆಯೋಗವು ಮತದಾರರ ಪಟ್ಟಿಗಳನ್ನು ತಿರುಚುತ್ತಿದೆ ಎಂದು ಈ ಬಣ ಆರೋಪಿಸಿದೆ ಮತ್ತು ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಒತ್ತಾಯಿಸಿದೆ. ಬಿಹಾರದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿ ನಾಯಕರು ಈ ಹಿಂದೆ ಚುನಾವಣಾ ಸಮಿತಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದರು.