Plain Crash: ಟೇಕ್ ಆಫ್ ಆದ ನಂತರ ನಿಯಂತ್ರಣ ತಪ್ಪಿ ಪತನಗೊಂಡ ವಿಮಾನ; ವಿಡಿಯೋ ನೋಡಿ
ಉತ್ತರ ಪ್ರದೇಶದ (Uttar Pradesh) ಫರೂಕಾಬಾದ್‌ನಲ್ಲಿ (ಅ. 9) ರಂದು ಖಾಸಗಿ ವಿಮಾನವೊಂದು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ವಿಮಾನವು ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಬಿಯರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರನ್ನು ವಿಮಾನವು ಕರೆದೊಯ್ಯುತ್ತಿತ್ತು.

-

ಲಖನೌ: ಉತ್ತರ ಪ್ರದೇಶದ (Uttar Pradesh) ಫರೂಕಾಬಾದ್‌ನಲ್ಲಿ (ಅ. 9) ರಂದು ಖಾಸಗಿ ವಿಮಾನವೊಂದು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದ್ದು, (Plain Crash) ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಜಿಲ್ಲಾ ಅಧಿಕಾರಿಗಳ ಪ್ರಕಾರ, ಜೆಟ್ ಸರ್ವಿಸ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ VT-DEZ ನೋಂದಣಿ ಸಂಖ್ಯೆಯ ವಿಮಾನವು ಟೇಕಾಫ್ ಆಗುವಾಗ ನಿಯಂತ್ರಣ ಕಳೆದುಕೊಂಡು ಮೊಹಮ್ಮದಾಬಾದ್ ವಾಯುನೆಲೆಯಿಂದ ಹತ್ತಿರದ ಪೊದೆಗಳಿಗೆ ಬೆಳಿಗ್ಗೆ 10.30 ರ ಸುಮಾರಿಗೆ ಉರುಳಿತು.
ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಬಿಯರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರನ್ನು ವಿಮಾನವು ಕರೆದೊಯ್ಯುತ್ತಿತ್ತು, ಅವರು ಯೋಜನಾ ಸ್ಥಳವನ್ನು ಪರಿಶೀಲಿಸಲು ಆಗಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಜೆಟ್ ವಿಮಾನವು ಟೇಕ್ ಆಫ್ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡು ಹತ್ತಿರದ ಪೊದೆಗಳಿಗೆ ಉರುಳಿತು. ಅದೃಷ್ಟವಶಾತ್, ಅದರಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಗಾಯಗಳಾಗಿಲ್ಲ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಕುಮಾರ್ ದ್ವಿವೇದಿ ಹೇಳಿದ್ದಾರೆ.
ಪತನವಾಗಿರುವ ವಿಮಾನದ ವಿಡಿಯೋ
#WATCH | Uttar Pradesh: A private aircraft lost control while taking off from the runway in Farrukhabad and collapsed in bushes nearby. The two pilots and passengers are safe.
— ANI (@ANI) October 9, 2025
(Video Source: Police) pic.twitter.com/pWlZOl3rmG
ಘಟನೆ ನಡೆದ ಕೂಡಲೇ ಎಸ್‌ಡಿಎಂ ಸದರ್ ರಜನಿಕಾಂತ್ ಪಾಂಡೆ, ಸಿಒ ಅಜಯ್ ವರ್ಮಾ ಮತ್ತು ಮೊಹಮ್ಮದಾಬಾದ್ ಪೊಲೀಸರು ಸೇರಿದಂತೆ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದವರೂ ಸಹ ಆಗಮಿಸಿದ್ದರು. ವಿಮಾನದ ಒಂದು ಚಕ್ರದಲ್ಲಿ ಕಡಿಮೆ ಗಾಳಿಯ ಒತ್ತಡವಿದ್ದು, ಅದು ರನ್‌ವೇಯಿಂದ ದಾರಿ ತಪ್ಪಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Helicopter Crash: ನೋಡ ನೋಡುತ್ತಲೇ ಹೆದ್ದಾರಿಯಲ್ಲಿಯೇ ಪತನವಾಯ್ತು ಹೆಲಿಕಾಪ್ಟರ್; ಭಯಾನಕ ವಿಡಿಯೋ ಇಲ್ಲಿದೆ
ಪ್ರತ್ಯೇಕ ಘಟನೆಯಲ್ಲಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋ ನಗರದ ಹೆದ್ದಾರಿಯಲ್ಲಿ ಮಂಗಳವಾರ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ವರದಿಗಳ ಪ್ರಕಾರ ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಈ ಹೆಲಿಕಾಪ್ಟರ್ ಮಕ್ಕಳ ಆಸ್ಪತ್ರೆಯಿಂದ ತೆರಳುತಿತ್ತು ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಈ ಘಟನೆ ಸ್ಥಳೀಯ ಸಮಯ ಸುಮಾರು ಸಂಜೆ 7.10 ಕ್ಕೆ (ಸ್ಥಳೀಯ ಸಮಯ) ಹೋವೆ ಅವೆನ್ಯೂ ಬಳಿಯ ಹೆದ್ದಾರಿ 50 ರ ಪೂರ್ವ ದಿಕ್ಕಿನ ಲೇನ್‌ಗಳಲ್ಲಿ ಸಂಭವಿಸಿದೆ.