ನವದೆಹಲಿ: ಸೆ. 9ರಂದು ನಡೆಯಲಿರುವ ಭಾರತದ ಉಪರಾಷ್ಟ್ರಪತಿ ಹುದ್ದೆಯ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯಾಗಿ (MP Tiruchi Siva) ಕಣಕ್ಕಿಳಿಯಲಿರುವ ಹೆಸರನ್ನು ಎನ್‌ಡಿಎ ಬಹಿರಂಗಪಡಿಸಿದೆ. ಮಹಾರಾಷ್ಟ್ರದ ಪ್ರಸ್ತುತ ರಾಜ್ಯಪಾಲ ರಾಧಾಕೃಷ್ಣನ್ ಅವರು 'ತಮಿಳುನಾಡಿನ ಮೋದಿ' ಎಂದೇ ಖ್ಯಾತರಾಗಿದ್ದವರು. ಇದೀಗ ಇಂಡಿಯಾ ಮೈತ್ರಿಕೂಟವು ಎನ್‌ಡಿಎಗೆ ಟಕ್ಕರ್ ಕೊಡಲು, ಡಿಎಂಕೆಯ ರಾಜ್ಯಸಭಾ ಸಂಸದ ತಿರುಚಿ ಶಿವ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಅನಾರೋಗ್ಯದ ಕಾರಣದಿಂದಾಗಿ ಉಪರಾಷ್ಟ್ರಪತಿ ಸ್ಥಾನಕ್ಕೆ (Voice President) ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿದ ನಂತರ ತೆರವಾಗಿದ್ದ ಸ್ಥಾನದ ಚುನಾವಣೆಗೆ ಚುನಾವಣಾ (Election Commission) ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ 9 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 21 ಆಗಿದೆ. ಚುನಾವಣಾ ಫಲಿತಾಂಶಗಳನ್ನು ಮತದಾನದ ದಿನದಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಎನ್‌ಡಿಎ ಅಭ್ಯರ್ಥಿಯಾದ ರಾಧಾಕೃಷ್ಣನ್ ಅವರು ಮೂಲತಃ ತಮಿಳುನಾಡಿನವರು. ಅವರು, 1957ರ ಅ. 20ರಂದು, ಆಗಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ ತಿರುಪ್ಪೂರ್ ನಲ್ಲಿ ಜನಿಸಿದ್ದರು. ಅವರ ಪೂರ್ಣ ಹೆಸರು ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್. ತಮ್ಮ ವಿದ್ಯಾರ್ಥಿ ದೆಸಯಿಂದಲೇ ಆರ್ ಎಸ್ ಎಸ್ ಜೊತೆಗೆ ನಂಟು ಬೆಳೆಸಿಕೊಂಡಿದ್ದ ಅವರು, ಆ ಮೂಲಕ, ಬಿಜೆಪಿಯ ಹಿಂದಿನ ಪಕ್ಷವಾಗಿದ್ದ ಜನಸಂಘಕ್ಕೆ ಕಾಲಿಟ್ಟಿದ್ದರು. ತಮಿಳುನಾಡಿನಲ್ಲಿ ಬಿಜೆಪಿಯನ್ನು ತಕ್ಕಮಟ್ಟಿಗೆ ಪ್ರಸಿದ್ಧಿಗೆ ತಂದ ಹಿರಿಮೆ ಇವರಿಗಿದೆ. 2003ರಿಂದ 2006ರವರೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. 1998 ಹಾಗೂ 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕೊಯಮತ್ತೂರಿನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು.
ಈ ಸುದ್ದಿಯನ್ನೂ ಓದಿ: Vice President Election: ಉಪರಾಷ್ಟ್ರಪತಿ ಚುನಾವಣೆ- NDA ಅಭ್ಯರ್ಥಿ ಘೋಷಣೆ ಬೆನ್ನಲ್ಲೇ INDI ಒಕ್ಕೂಟ ನಾಯಕರ ಹೈವೋಲ್ಟೇಜ್ ಮೀಟಿಂಗ್
ತಿರುಚಿ ಶಿವ ಅವರು ಇಂಡಿಯಾ ಮೈತ್ರಿಕೂಟದಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಡಿಎಂಕೆ ಪಕ್ಷದಿಂದ ರಾಜ್ಯಸಭಾ ಸಂಸದರಾದ ಇವರು ಹಿರಿಯ ರಾಜಕಾರಣಿ. ಇವರೂ ಕೂಡ ತಮಿಳು ನಾಡಿನವರೇ ಆದ್ದರಿಂದ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ದಕ್ಷಿಣದ ರಾಜ್ಯದ ಬೆಂಬಲ ಸಿಗಬಹುದು.