ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Students Missing: ಪ್ರವಾಸಕ್ಕೆ ತೆರಳಿದ್ದ ಮಕ್ಕಳು ನಿಗೂಢ ನಾಪತ್ತೆ- ಕೊನೆಗೆ ಪತ್ತೆಯಾಗಿದ್ದೇ ರೋಚಕ!

ಶಿಮ್ಲಾದ ಪ್ರತಿಷ್ಠಿತ ಬಿಷಪ್ ಕಾಟನ್ ಶಾಲೆಯ 6ನೇ ತರಗತಿಯ ಮೂವರು ವಿದ್ಯಾರ್ಥಿಗಳು ವಿಕೇಂಡ್ ನಲ್ಲಿ ಮಾಲ್ ರಸ್ತೆಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಘಟನೆ ನಡೆದಿತ್ತು. ಶಾಲಾ ಆಡಳಿತ ಮಂಡಳಿಯು ತತ್ ಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿತು, ಇದರಿಂದಾಗಿ ಬಹು ಶೋಧ ತಂಡಗಳನ್ನು ರಚಿಸಲಾಯಿತು. ಕೊನೆಗೂ ಮಕ್ಕಳು ಇರುವ ಜಾಗವನ್ನು ಪೊಲೀಸರು ಪತ್ತೆ ಹಚ್ಚಿದ್ದು ತಿಳಿದು ಬಂದಿದೆ. ಈ ಮೂಲಕ ಆತಂಕದ ಪರಿಸ್ಥಿತಿ ದೂರಾಗುವಂತಾಗಿದೆ.

ನವದೆಹಲಿ: ಶಾಲಾ ಅವಧಿಯಲ್ಲಿ ಪ್ರವಾಸಕ್ಕೆ ಹೋಗುವುದೆಂದರೆ ಬಹುತೇಕರಿಗೆ ಬಹಳ ಇಷ್ಟ ವಾಗಿರುತ್ತದೆ. ಕೆಲವೊಂದು ಶಾಲೆಯಲ್ಲಿ ಪ್ರವಾಸಗಳಿಗೆ ಸಮ್ಮತಿ ಇದ್ದರೆ ಇನ್ನು ಕೆಲವೊಂದು ಕಡೆ ಅನುಮತಿ ಇರಲಾರದು ಹೀಗಾಗಿ ಮಕ್ಕಳೆ ಒಂದು ಗುಂಪಾಗಿ ಪ್ರವಾಸಕ್ಕೆ ತೆರಳಿ ಬಳಿಕ ಸಂಕಷ್ಟಕ್ಕೆ ಸಿಲುಕುವುದು ಇದೆ. ಈ ನಿಟ್ಟಿನಲ್ಲಿ ಶಿಮ್ಲಾದ ಪ್ರತಿಷ್ಠಿತ ಬಿಷಪ್ ಕಾಟನ್ ಶಾಲೆಯ 6ನೇ ತರಗತಿಯ ಮೂವರು ವಿದ್ಯಾರ್ಥಿಗಳು ವಿಕೇಂಡ್‌ನಲ್ಲಿ ಮಾಲ್ ರಸ್ತೆಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ (Students Missing) ಘಟನೆ ನಡೆದಿತ್ತು. ಶಾಲಾ ಆಡಳಿತ ಮಂಡಳಿಯು ತತ್‌ಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿತು, ಇದರಿಂದಾಗಿ ಬಹು ಶೋಧ ತಂಡಗಳನ್ನು ರಚಿಸಲಾಯಿತು. ಕೊನೆಗೂ ಮಕ್ಕಳು ಇರುವ ಜಾಗವನ್ನು ಪೊಲೀಸರು ಪತ್ತೆ ಹಚ್ಚಿದ್ದು ತಿಳಿದು ಬಂದಿದೆ. ಈ ಮೂಲಕ ಆತಂಕದ ಪರಿಸ್ಥಿತಿ ದೂರಾಗುವಂತಾಗಿದೆ.

ಕಾಣೆಯಾದ ಬಾಲಕರಲ್ಲಿ ಮೂವರು ಕೂಡ ಬೇರೆ ಬೇರೆ ಪ್ರಾದೇಶಿಕ ಹಿನ್ನೆಲೆಯಿಂದ ಬಂದವ ರಾಗಿದ್ದು ಇವರನ್ನು ಪತ್ತೆ ಮಾಡುವುದು ಪೊಲೀಸರಿಗೆ ಮತ್ತು ಆಡಳಿತ ವರ್ಗಕ್ಕೂ ದೊಡ್ಡ ಸವಾ ಲಾಗಿ ಪರಿಣಮಿಸಿತ್ತು. ತಮ್ಮ ಸಹಪಾಠಿಗಳ ಜೊತೆಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹರಿ ಯಾಣ ಮೂಲದ ಕರ್ನಾಲ್, ಪಂಜಾಬ್ ಮೂಲದ ಮೊಹಾಲಿ ಹಾಗೂ ಹಿಮಾಚಲ ಮೂಲದ ಕುಲ್ಲು ಹೆಸರಿನ ಮೂವರು ಮಕ್ಕಳು ಕಾಣೆಯಾಗಿದ್ದಾರೆ. ಉಳಿದ ಮಕ್ಕಳು ಸುರಕ್ಷಿತವಾಗಿ ಹಿಂದಿರುಗಿದರೂ ಈ ಮೂವರು ಮಾತ್ರ ಕಾಣೆಯಾಗಿದ್ದು ದೊಡ್ಡ ಆತಂಕವನ್ನೇ ಸೃಷ್ಟಿಸಿದೆ. ಈ ಮೂಲಕ ಮಕ್ಕಳು ಅಪಹರಣ ಆಗಿರಬಹುದೆಂದು ಕೂಡ ಪೊಲೀಸರು ಸಂಶಯಿಸಿ ಸಂಪೂರ್ಣ ಹುಡುಕಾಟ ಮಾಡಿದ್ದಾರೆ.

ಇದನ್ನು ಓದಿ:Indians Missing: ದೇವಸ್ಥಾನಕ್ಕೆ ಹೋದವರು ತಿರುಗಿ ಬರಲೇ ಇಲ್ಲ... ಅಮೆರಿಕದಲ್ಲಿ ಭಾರತೀಯ ಮೂಲದ ನಾಲ್ವರು ಮಿಸ್ಸಿಂಗ್‌!

ನಾಪತ್ತೆಯಾದ ಮಕ್ಕಳನ್ನು ಶಿಮ್ಲಾ ಸುತ್ತಮುತ್ತ ಪ್ರದೇಶದಲ್ಲಿ ಹುಡುಕಾಟ ನಡೆಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಶೋಘಿ ಮತ್ತು ಇತರ ನಿರ್ಗಮನ ಸ್ಥಳಗಳ ಕಡೆಗೆ ಹೋಗುವ ಎಲ್ಲಾ ವಾಹನ ಗಳನ್ನು ಸಂಪೂರ್ಣವಾಗಿ ಪೊಲೀಸರು ಪರಿಶೀಲಿಸಿದ್ದರು. ನಗರದಾದ್ಯಂತ ಶೋಧ ತಂಡ ಗಳನ್ನು ನಿಯೋಜಿಸಲಾಗಿದ್ದು ಈ ಮೂಲಕ ಮಕ್ಕಳ ಚಲನವಲನ ಗಳನ್ನು ಪತ್ತೆಹಚ್ಚಲು ವಿವಿಧ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲಿಸಲಾಯಿತು.

ಪೊಲೀಸರನ್ನು ಹೊರತುಪಡಿಸಿ, ಇತರ ತನಿಖಾ ಸಂಸ್ಥೆಗಳು ಕೂಡ ಹುಡುಕಾಟವನ್ನು ನಡೆ ಸಿತ್ತು. ಈ ತನಿಖಾ ಸಂಸ್ಥೆಗಳು ಸಾರ್ವ ಜನಿಕ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಕೊನೆಗೂ ಮಕ್ಕಳು ಇರುವ ಜಾಗ ಪತ್ತೆಯಾಗಿದೆ. ಕಾಣೆಯಾದ ಮೂವರು ಮಕ್ಕಳು ಶಿಮ್ಲಾದ ಕೋಟ್‌ಖೈ ಪ್ರದೇಶದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು ತಿಳಿದು ಬಂದಿದೆ.

ಶಿಮ್ಲಾ ನಗರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಗ್ರಾಮೀಣ ಪ್ರದೇಶವಾದ ಕೊಟ್ಖೈನಲ್ಲಿ ಬಾಲಕರು ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅವರು ಅಲ್ಲಿಗೆ ಹೇಗೆ ಬಂದರು? ಯಾರು ಕರೆತಂದರು? ಎಂಬ ಮಾಹಿತಿ ಇನ್ನೂ ಕೂಡ ಬಹಿರಂಗವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ಕೂಡ ನಡೆಯುತ್ತಿದೆ. ಮುಂದಿನ ದಿನದಲ್ಲಿ ಎಲ್ಲ ಪ್ರಶ್ನೆಗೂ ಉತ್ತರ ಸಿಗುವ ಸಾಧ್ಯತೆ ಕೂಡ ಇರಲಿದೆ.