ನವದೆಹಲಿ: ಆಪರೇಷನ್ ಸಿಂದೂರ್ (Operation Sindoor) ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಹಾಗೂ ಅದರ ಯಶಸ್ಸನ್ನು ಕಡಿಮೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ವಿರೋಧ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಾರಣಾಸಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, "ಅನ್ಯಾಯ ಮತ್ತು ಭಯೋತ್ಪಾದನೆ ಎದುರಿಗೆ ಇದ್ದಾಗ, ಮಹಾದೇವ ತನ್ನ 'ರುದ್ರ ರೂಪವನ್ನು ತಾಳುತ್ತಾನೆ. ಭಾರತವನ್ನು ಕೆಣಕಿದರೆ ಏನಾಗುತ್ತದೆ ಎಂಬುದನ್ನು ಜಗತ್ತು ನೋಡಿದೆ. ಅವರು ಪಾತಾಳ ಲೋಕದಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗಗೆ ಕಾರ್ಯಾಚರಣೆಯ ಯಶಸ್ಸನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ ಎಂಬ ಅಂಶವನ್ನು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ. ಭಾರತೀಯ ಸೇನೆಯ ಶೌರ್ಯವನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಲಿದೆ. ಆಪರೇಷನ್ ಸಿಂದೂರ್ ಕಾರ್ಯಚರಣೆಯನ್ನು ಕಾಂಗ್ರೆಸ್ ನಾಯಕರು ತಮಾಷೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದ್ದು, ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುತ್ತಿವೆ ಎಂದು ಆರೋಪಿಸಿದರು.
#WATCH | Varanasi, UP: Prime Minister Narendra Modi says, "Everyone understands that Pakistan is upset. But Congress and the Samajwadi Party cannot handle the pain that Pakistan is going through. Pakistan is crying, and here, Congress and SP are crying, seeing the condition of… pic.twitter.com/y861CEtnBE
— ANI (@ANI) August 2, 2025
ಭಯೋತ್ಪಾದಕರನ್ನು ಕೊಲ್ಲಲು ಪಾಕಿಸ್ತಾನದ ಬಳಿ ಅನುಮತಿ ಕೇಳಬೇಕಾಗಿಲ್ಲ. ಅಧಿಕಾರದಲ್ಲಿದ್ದಾಗ ಭಯೋತ್ಪಾದಕರಿಗೆ ಕ್ಲೀನ್ ಚಿಟ್ ನೀಡುತ್ತಿದ್ದರು. ಇದೀಗ ಭಯೋತ್ಪಾದಕರನ್ನು ಕೊಂದರೆ ಅವರ ಮೇಲೆ ಸಹಾನುಭೂತಿ ತೋರುತ್ತಾರೆ. ಕಾಶ್ಮೀರದಲ್ಲಿ ನಮ್ಮವರು ಮೃತಪಟ್ಟಾಗ ಇವರಿಗೆ ಯಾವುದೇ ಸಹಾನುಭೂತಿ ಇರಲಿಲ್ಲ. 26 ಮುಗ್ಧ ಜೀವಗಳು ಬಲಿಯಾದವು. ನನ್ನ ಹೃದಯ ನೋವು ಮತ್ತು ದುಃಖದಿಂದ ತುಂಬಿತ್ತು. ಕುಟುಂಬಗಳಿಗೆ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡುವಂತೆ ನಾನು ಬಾಬಾ ವಿಶ್ವನಾಥ್ ಅವರನ್ನು ಪ್ರಾರ್ಥಿಸಿದ್ದೆ. ಅದನ್ನು ದೇವರು ನೀಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: PM Modi: ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಗುಜರಾತ್ ಭೇಟಿ ಶ್ಲಾಘಿಸಿದ ಪ್ರಧಾನಿ ಮೋದಿ
ಇಂದು ವಾರಣಾಸಿಯಲ್ಲಿ 2,200 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ 20000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು 9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಮೋದಿ ಜಮಾ ಮಾಡಿದರು.