ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahindra Group Staffs Threat: ಮಹೀಂದ್ರಾ ಗ್ರೂಪ್‌ನ ಸಿಬ್ಬಂದಿಯಿಂದ ಬಿಜೆಡಿ ಸಂಸದರಿಗೆ ಅತ್ಯಾಚಾರ, ಕೊಲೆ ಬೆದರಿಕೆ

ಮಹೀಂದ್ರಾ ಗ್ರೂಪ್ ಸಿಬ್ಬಂದಿಯಿಂದ ಬಿಜೆಡಿ ಸಂಸದರಿಗೆ ಅತ್ಯಾಚಾರ, ಕೊಲೆ ಬೆದರಿಕೆ ಬಂದಿರುವುದಾಗಿ ಸುಲತಾ ಡಿಯೋ ಆರೋಪಿಸಿದ್ದಾರೆ. ಸತ್ಯಬ್ರತ ನಾಯಕ್ ಎಂಬ ಹೆಸರಿನಲ್ಲಿ ಬಂದಿರುವ ಸಂದೇಶಗಳನ್ನು ಅವರು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಮಹೀಂದ್ರಾ ಕಂಪೆನಿಯ ಮಾಲಕ ಆನಂದ್ ಮಹೀಂದ್ರಾ ಭರವಸೆ ನೀಡಿದ್ದಾರೆ.

ನವದೆಹಲಿ: ಬಿಜೆಡಿ ಸಂಸದರಿಗೆ (BJD MP) ಅತ್ಯಾಚಾರ, ಕೊಲೆ ಬೆದರಿಕೆ ಒಡ್ಡಿರುವ ಮಹೀಂದ್ರಾ ಗ್ರೂಪ್ (Mahindra Group) ಸಿಬ್ಬಂದಿಯ ಮೇಲೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಕಂಪೆನಿ ಹೇಳಿದೆ. ಈ ರೀತಿಯ ದುಷ್ಕೃತ್ಯ, ಬೆದರಿಕೆಗಳನ್ನು ಕಂಪೆನಿ ಸಹಿಸುವುದಿಲ್ಲ ಎಂದು ಹೇಳಿರುವ ಕಂಪೆನಿ, ಇದರ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವುದಾಗಿ ತಿಳಿಸಿದೆ. ವಿವಿಧ ರೀತಿಯ ಕಾರ್ಯಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸದಾ ಸುದ್ದಿಯಲ್ಲಿರುವ ಆನಂದ್ ಮಹೀಂದ್ರಾ (Anand Mahindra) ಅವರ ಒಡೆತನದ ಕಂಪೆನಿ ಈಗ ಬಿಜೆಡಿ ಸಂಸದರ ಆರೋಪಗಳಿಗೆ ತಕ್ಷಣ ಸ್ಪಂದಿಸಿರುವುದಕ್ಕೆ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.



ಸಾಮಾಜಿಕ ಮಾಧ್ಯಮದ ಮೂಲಕ ಮಹೀಂದ್ರಾ ಕಂಪೆನಿಯ ಸಿಬ್ಬಂದಿಯೊಬ್ಬ ಬಿಜೆಡಿ ಸಂಸದರಿಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿರುವುದಾಗಿ ಬಿಜು ಜನತಾದಳ (ಬಿಜೆಡಿ) ಸಂಸದೆ ಸುಲತಾ ಡಿಯೋ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹೀಂದ್ರಾ ಗ್ರೂಪ್ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಘಟನೆಯ ತನಿಖೆಯನ್ನು ಆರಂಭಿಸಲಾಗಿದೆ. ಆನಂದ್ ಮಹೀಂದ್ರಾ ಒಡೆತನದ ಕಂಪೆನಿಯು ಯಾವುದೇ ರೀತಿಯ ದುಷ್ಕೃತ್ಯ, ಬೆದರಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವುದಾಗಿ ತಿಳಿಸಿದೆ.

ನಮ್ಮ ಉದ್ಯೋಗಿಗಳಲ್ಲಿ ಒಬ್ಬರು ಫೇಸ್‌ಬುಕ್‌ನಲ್ಲಿ ರಾಜಕೀಯ ನಾಯಕರೊಬ್ಬರಿಗೆ ಅಗೌರವ ಮತ್ತು ಅತ್ಯಂತ ಅನುಚಿತ ಸಂದೇಶಗಳನ್ನು ಕಳುಹಿಸಿರುವ ಮಾಹಿತಿ ಸಿಕ್ಕಿದೆ. ಮಹೀಂದ್ರಾ ಗ್ರೂಪ್ ಯಾವಾಗಲೂ ಮಾನವ ಘನತೆಯ ಮಹತ್ವವನ್ನು ಪ್ರತಿಪಾದಿಸುತ್ತದೆ. ಈ ತತ್ತ್ವಗಳ ಉಲ್ಲಂಘನೆಯನ್ನು ಸಹಿಸಲಾಗದು ಎಂದು ಕಂಪೆನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.



ನಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ತಕ್ಷಣ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಆರೋಪಗಳನ್ನು ದೃಢವಾದರೆ ನಡವಳಿಕೆ ಮತ್ತು ಮೌಲ್ಯಗಳಿಗೆ ಅನುಗುಣವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪೆನಿ ಹೇಳಿದೆ.

ಇದನ್ನೂ ಓದಿ: Vasanth Giliyar: ಸೌಜನ್ಯಾ ಹೋರಾಟ ಹಾದಿ ತಪ್ಪಿದ್ದೇ ತಿಮರೋಡಿಯಿಂದ: ವಸಂತ್‌ ಗಿಳಿಯಾರ್‌

ಸಂಸದೆ ಸುಲತಾ ಡಿಯೋ ಮಹೀಂದ್ರಾ ಗ್ರೂಪ್ ಉದ್ಯೋಗಿ ಸತ್ಯಬ್ರತ ನಾಯಕ್ ಬರೆದಿರುವ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದರು. ಫೇಸ್‌ಬುಕ್ ಪ್ರೊಫೈಲ್ ಪ್ರಕಾರ, ಆತ ಕಂಪೆನಿಯ ನಾಸಿಕ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಡಿಯೋ ತಿಳಿಸಿದ್ದು, ಈ ಕುರಿತು ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದರು. ಅನೇಕ ವಿರೋಧ ಪಕ್ಷದ ಕಾರ್ಯಕರ್ತರು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author