ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tirupati Temple: 3 ಕೋಟಿ ರೂ. ಹೆಚ್ಚು ಮೌಲ್ಯದ ಆಸ್ತಿಯನ್ನು ತಿರುಪತಿ ತಿಮ್ಮಪ್ಪನಿಗೆ ದಾನ ನೀಡಿದ ನಿವೃತ್ತ ಐಆರ್‌ಎಸ್ ಅಧಿಕಾರಿ

ತಿರುಪತಿ ತಿಮ್ಮಪ್ಪನ ಮೇಲೆ ಅಪಾರ ಭಕ್ತಿ, ವಿಶ್ವಾಸ ಹೊಂದಿದ್ದ ಭಾರತದ ಕಂದಾಯ ಸೇವೆ ಅಧಿಕಾರಿಯೊಬ್ಬರು (IRS officer) ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಿರುಮಲ ತಿರುಪತಿ ದೇವಸ್ಥಾನಗಳಿಗೆ ( Tirumala Tirupati Devasthanams) ದಾನ ಮಾಡಿದ್ದಾರೆ. ಈ ಆಸ್ತಿಗಳನ್ನು ಇತ್ತೀಚೆಗೆ ದೇವಾಲಯದ ಟ್ರಸ್ಟ್‌ಗೆ ಔಪಚಾರಿಕವಾಗಿ ಹಸ್ತಾಂತರಿಸಲಾಗಿದೆ.

ತಿರುಪತಿ:ತಿರುಪತಿ ತಿಮ್ಮಪ್ಪನ ಮೇಲೆ ಅಪಾರ ಭಕ್ತಿ, ವಿಶ್ವಾಸ ಹೊಂದಿದ್ದ ಭಾರತದ ಕಂದಾಯ ಸೇವೆ ಅಧಿಕಾರಿಯೊಬ್ಬರು (IRS officer) ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಿರುಮಲ ತಿರುಪತಿ ದೇವಸ್ಥಾನಗಳಿಗೆ ( Tirumala Tirupati Devasthanams ) ದಾನ ಮಾಡಿದ್ದಾರೆ. ಈ ಆಸ್ತಿಗಳನ್ನು ಇತ್ತೀಚೆಗೆ ದೇವಾಲಯದ ಟ್ರಸ್ಟ್‌ಗೆ ಔಪಚಾರಿಕವಾಗಿ ಹಸ್ತಾಂತರಿಸಲಾಗಿದೆ. ನಿವೃತ್ತ ಐಆರ್‌ಎಸ್ ಅಧಿಕಾರಿಯಾಗಿದ್ದ ದಿವಂಗತ ವೈವಿಎಸ್‌ಎಸ್ ಭಾಸ್ಕರ್ ರಾವ್ ಅವರ 3.66 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಿರುಮಲ (Tirumala) ತಿರುಪತಿ (Tirupati) ದೇವಸ್ಥಾನಗಳಿಗೆ ಹಸ್ತಾಂತರಿಸುವುದಾಗಿ ಟಿಟಿಡಿ ತಿಳಿಸಿದೆ.

ಹೈದರಾಬಾದ್‌ನ ನಿವೃತ್ತ ಐಆರ್‌ಎಸ್ ಅಧಿಕಾರಿಯಾಗಿದ್ದ ದಿವಂಗತ ವೈವಿಎಸ್‌ಎಸ್ ಭಾಸ್ಕರ್ ರಾವ್ ಅವರು ತಿರುಮಲ ತಿರುಪತಿ ದೇವಸ್ಥಾನಗಳಿಗೆ ಒಟ್ಟು 3 ಕೋಟಿ ರೂ. ಮೌಲ್ಯದ ವಸತಿ ಆಸ್ತಿ ಮತ್ತು 66 ಲಕ್ಷ ರೂ. ನಗದನ್ನು ದಾನ ಮಾಡಿದ್ದಾರೆ. ಅವರು ತಮ್ಮ ಆಸ್ತಿಯನ್ನು ತಿರುಮಲ ತಿರುಪತಿ ದೇವಸ್ಥಾನಗಳಿಗೆ ದಾನವಾಗಿ ನೀಡಲು ವಿಲ್ ಬರೆದಿಟ್ಟಿದ್ದರು. ಅದರ ಪ್ರಕಾರ ಈಗ ಅವರ ಆಸ್ತಿಯನ್ನು ದೇವಾಲಯದ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು.



ವಿಲ್ ನಲ್ಲಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲಿನ ತಮ್ಮ ಅಚಲ ಭಕ್ತಿಯನ್ನು ವ್ಯಕ್ತಪಡಿಸಿದ್ದ ಅವರ ಹೈದರಾಬಾದ್‌ನ ವನಸ್ಥಲಿಪುರಂನಲ್ಲಿರುವ 3,500 ಚದರ ಅಡಿ ವಿಸ್ತೀರ್ಣದ ‘ಆನಂದ ನಿಲಯಂ’ ನಿವಾಸವನ್ನು ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಮೀಸಲಿಡುವುದಾಗಿ ಟಿಟಿಡಿ ತಿಳಿಸಿದೆ.

ಇದನ್ನೂ ಓದಿ: Thailand-Cambodia War: ಗಡಿ ಪ್ರದೇಶಕ್ಕೆ ತೆರಳಬೇಡಿ; ರಾಯಭಾರಿ ಕಚೇರಿಯಿಂದ ಕಾಂಬೋಡಿಯಾದಲ್ಲಿರುವ ಭಾರತೀಯರಿಗೆ ಸೂಚನೆ

ಅವರ ಬ್ಯಾಂಕ್ ಖಾತೆಗಳಿಂದ ಬಂದಿರುವ 66 ಲಕ್ಷ ರೂಪಾಯಿಗಳ ನಗದು ಹಣವನ್ನು ಟಿಟಿಡಿ ಟ್ರಸ್ಟ್‌ಗಳಿಗೆ ವಿತರಿಸಲಾಗುವುದು. ಇದರಲ್ಲಿ ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್‌ಗೆ 36 ಲಕ್ಷ ರೂಪಾಯಿ, ಶ್ರೀ ವೆಂಕಟೇಶ್ವರ ಸರ್ವ ಶ್ರೇಯಸ್ ಟ್ರಸ್ಟ್, ವೇದ ಪರಿರಕ್ಷಣ ಟ್ರಸ್ಟ್, ಗೋ ಸಂರಕ್ಷಣ ಟ್ರಸ್ಟ್, ವಿದ್ಯಾದಾನ ಟ್ರಸ್ಟ್ ಮತ್ತು ಶ್ರೀವಾನಿ ಟ್ರಸ್ಟ್‌ಗೆ ತಲಾ 6 ಲಕ್ಷ ರೂಪಾಯಿಗಳು ಸೇರಿವೆ. ರಾವ್ ಅವರ ಮೂವರು ಟ್ರಸ್ಟಿಗಳು ಅವರ ಆಸ್ತಿ ದಾಖಲೆಗಳು, ದೇಣಿಗೆ ಚೆಕ್‌ಗಳನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಟಿಟಿಡಿ ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author