Banni Stick Festival: ಹಿಂಸಾಚಾರಕ್ಕೆ ತಿರುಗಿದ ಧಾರ್ಮಿಕ ಆಚರಣೆ; ಇಬ್ಬರು ದಾರುಣ ಸಾವು- 100ಕ್ಕೂ ಹೆಚ್ಚು ಜನರಿಗೆ ಗಾಯ
Devaragattu Banni festival: ಬನ್ನಿ ಉತ್ಸದ ಸಂದರ್ಭದಲ್ಲಿ ಸಾಂಪ್ರದಾಯಿಕ ಆಚರಣೆಯೊಂದು ಹಿಂಸಾತ್ಮಕ ರೂಪ ಪಡೆದಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಬಲಿಯಾಗಿದ್ದು, ನೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

-

ಕರ್ನೂಲ್: ಆಂಧ್ರ ಪ್ರದೇಶದಲ್ಲಿ ವಿಜಯದಶಮಿ ಪ್ರಯುಕ್ತ ಆಯೋಜಿಸಿದ್ದ ಸಾಂಪ್ರದಾಯಿಕ ಆಚರಣೆ ವೇಳೆ ಭಾರೀ ಅವಘಡವೊಂದು ಸಂಭವಿಸಿದ್ದು, ಇಬ್ಬರು ಬಲಿಯಾಗಿದ್ದಾರೆ(Banni Stick Festival). ಘಟನೆಯಲ್ಲಿ ನೂರಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಕರ್ನೂಲ್ ಜಿಲ್ಲೆಯ ದೇವರಗಟ್ಟು ಬನ್ನಿ ಉತ್ಸವದ ಅಂಗವಾಗಿ ಆಯೋಜಿಸಲಾದ ಕೋಲು ಕಾಳಗದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಪ್ರತಿವರ್ಷವೂ ವಿಜಯ ದಶಮಿಯಂದು ಆಚರಿಸಲಾಗುವ ಬನ್ನಿ ಉತ್ಸವವು ಮಾಲೆ ಮಲ್ಲೇಶ್ವರ ಸ್ವಾಮಿಯ ವಿವಾಹ ಮಹೋತ್ಸವದ ನಂತರ ಪ್ರಾರಂಭವಾಗಿ ಮುಂಜಾನೆ ಮುಕ್ತಾಯಗೊಳ್ಳುತ್ತಿತ್ತು. ಸುತ್ತಮುತ್ತಲಿನ ಹತ್ತಾರು ಪ್ರದೇಶಗಳಿಂದ ಸಾವಿರಾರು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಭಾಗವಹಿಸುವವರು ಉಪವಾಸ, ಬ್ರಹ್ಮಚರ್ಯ ಮತ್ತು ಆಹಾರ ಪದ್ಧತಿಯ ಕಟ್ಟುನಿಟ್ಟಿನ ಪ್ರತಿಜ್ಞೆಗಳನ್ನು ಅನುಸರಿಸಿ, ವಿಗ್ರಹವನ್ನು ಸಾಂಕೇತಿಕವಾಗಿ ಸೆರೆಹಿಡಿಯಲು ಸಾಂಪ್ರದಾಯಿಕ ಕೋಲು ಕಾಳಗಗಳಲ್ಲಿ ತೊಡಗುತ್ತಾರೆ, ಕಾರ್ಯಕ್ರಮದ ಸಮಯದಲ್ಲಿ ಸಣ್ಣಪುಟ್ಟ ಗಾಯಗಳಿಗೆ ಅರಿಶಿನವನ್ನು ಹಚ್ಚುತ್ತಾರೆ.
కర్నూలు జిల్లాలో దేవరగట్టు సాంప్రదాయ బన్ని ఉత్సవం పురస్కరించుకొని కర్రలసమరం.#Devaragattu#Andrapradesh pic.twitter.com/OSLYaCXZTo
— Duddakunta Venkateswara Reddy/వెంకటేశ్వర రెడ్డి (@DuddakuntaBJP) October 3, 2025
ಅಂತೆಯೇ ಈ ಬಾರಿ ನಡೆದ ಈ ಧಾರ್ಮಿಕ ಕಾರ್ಯಕ್ರಮದ ಹಿಂಸಾಚಾರಕ್ಕೆ ತಿರುಗಿದೆ. ಪರಿಣಾಮವಾಗಿ ಒಬ್ಬ ವ್ಯಕ್ತಿಯ ತಲೆಗೆ ಗಂಭೀರವಾದ ಏಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊರ್ವ ವ್ಯಕ್ತಿ ಹೃದಯಾಘಾದಿಂದ ಸಾವನ್ನಪ್ಪಿದ್ದಾನೆ. ನೂರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Karur Stampede: ಕರೂರು ಕಾಲ್ತುಳಿತ; "ಸ್ಟಾಲಿನ್ ನೀವು ನನ್ನ ಮೇಲೆ ಸೇಡು ತೀರಿಸಿಕೊಳ್ಳಿ.... " ಸರ್ಕಾರಕ್ಕೆ ವಿಜಯ್ ಸವಾಲ್
ಇನ್ನು ಈ ವರ್ಷ ಭದ್ರತೆಗಾಗಿ ಈ ವರ್ಷ ಸುಮಾರು 1,000 ಪೊಲೀಸ್ ಸಿಬ್ಬಂದಿ ಮತ್ತು 10 ಡ್ರೋನ್‌ಗಳನ್ನು ನಿಯೋಜಿಸಲಾಗಿದೆ ಮತ್ತು 16 ಗ್ರಾಮಗಳಲ್ಲಿ 32 ಕ್ಕೂ ಹೆಚ್ಚು ಜಾಗೃತಿ ಅಭಿಯಾನಗಳು ಹಿಂಸಾತ್ಮಕ ಘರ್ಷಣೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಕ್ರಾಂತ್ ಪಾಟೀಲ್ ಹೇಳಿದ್ದಾರೆ.