ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Supreme Court: ಜೀವನಾಂಶಕ್ಕೆ 12 ಕೋಟಿ ರೂ, BMW ಕಾರು, ಮುಂಬೈನಲ್ಲಿ ಐಷಾರಾಮಿ ಮನೆ- ಪತ್ನಿಯ ಡಿಮ್ಯಾಂಡ್ಸ್‌ ನ್ಯಾಯಾಧೀಶರೇ ಶಾಕ್‌!

ಜೀವನಾಂಶಕ್ಕೆ 12 ಕೋಟಿ ರೂ, ಮುಂಬೈನಲ್ಲಿ ಮನೆ ಕೇಳಿದ ಮಹಿಳೆಗೆ ‘ನೀವೇಕೆ ಗಳಿಸಬಾರದು? ಎಂದ ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಜೀವನಾಂಶ ವಿವಾದದ ವಿಚಾರಣೆಯಲ್ಲಿ, “ನೀವು ಉನ್ನತ ಶಿಕ್ಷಣ ಪಡೆದಿದ್ದೀರಿ, ಸ್ವತಃ ಗಳಿಸಬೇಕು, ಜೀವನಾಂಶಕ್ಕಾಗಿ ಕೇಳಬಾರದು” ಎಂದು ಮಹಿಳೆಯೊಬ್ಬರಿಗೆ ತರಾಟೆಗೆ ತೆಗೆದುಕೊಂಡರು.

ನವದೆಹಲಿ: ಉತ್ತಮ ಶಿಕ್ಷಣ (Good Education) ಪಡೆದ ಮಹಿಳೆಯರು ತಮ್ಮ ಜೀವನಾಧಾರಕ್ಕಾಗಿ (Livelihood) ಕೆಲಸ ಮಾಡಿ ಗಳಿಸಬೇಕು, ಜೀವನಾಂಶಕ್ಕಾಗಿ ಪತಿಯನ್ನು ಅವಲಂಬಿಸಬಾರದು ಎಂದು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (BR Gavai), ಜೀವನಾಂಶ ವಿವಾದದ ವಿಚಾರಣೆಯಲ್ಲಿ, “ನೀವು ಉನ್ನತ ಶಿಕ್ಷಣ ಪಡೆದಿದ್ದೀರಿ, ಸ್ವತಃ ಗಳಿಸಬೇಕು, ಜೀವನಾಂಶಕ್ಕಾಗಿ ಕೇಳಬಾರದು” ಎಂದು ಮಹಿಳೆಯೊಬ್ಬರಿಗೆ ತರಾಟೆಗೆ ತೆಗೆದುಕೊಂಡರು.

18 ತಿಂಗಳ ವಿವಾಹದ ಬಳಿಕ ಪತಿಯಿಂದ ಬೇರ್ಪಟ್ಟ ಮಹಿಳೆಯೊಬ್ಬರು ಮುಂಬೈನಲ್ಲಿ ಮನೆ ಮತ್ತು 12 ಕೋಟಿ ರೂ. ಜೀವನಾಂಶಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, “ನೀವು ಐಟಿ ವೃತ್ತಿಪರರು, ಎಂಬಿಎ ಪದವೀಧರರು. ಬೆಂಗಳೂರು, ಹೈದರಾಬಾದ್‌ನಂತಹ ನಗರಗಳಲ್ಲಿ ನಿಮಗೆ ಬೇಡಿಕೆಯಿದೆ. ಏಕೆ ಕೆಲಸ ಮಾಡಬಾರದು? ಕೇವಲ 18 ತಿಂಗಳ ವಿವಾಹದ ಬಳಿಕ BMW ಕೂಡ ಬೇಕೇ?” ಎಂದು ಪ್ರಶ್ನಿಸಿದರು.

ಮಹಿಳೆಯು ತನ್ನ ಆರೋಪವನ್ನು ಸಮರ್ಥಿಸಿಕೊಂಡು, “ನನ್ನ ಪತಿ ಶ್ರೀಮಂತ, ಆತ ನನ್ನನ್ನು ಸ್ಕಿಜೋಫ್ರೇನಿಕ್ ಎಂದು ಕರೆದು ವಿವಾಹ ರದ್ದತಿಗೆ ಒತ್ತಾಯಿಸಿದ್ದಾನೆ,” ಎಂದಿದ್ದಾರೆ. ಆದರೆ, ನ್ಯಾಯಮೂರ್ತಿಗಳು, “ನೀವು ಉನ್ನತ ಶಿಕ್ಷಣ ಪಡೆದವರಾಗಿದ್ದರೂ ಸ್ವಯಂ ಇಚ್ಛೆಯಿಂದ ಕೆಲಸ ಮಾಡದಿದ್ದರೆ, ಯಾವುದೇ ಒತ್ತಡವಿಲ್ಲದ ಮನೆ ಒದಗಿಸಲು ಆಗುವುದಿಲ್ಲ” ಎಂದಿದ್ದಾರೆ.

ಈ ಸುದ್ದಿಯನ್ನು ಓದಿ: viral Lucknow Murder: 10 ವರ್ಷಗಳ ಹಿಂದೆ ತಾಯಿಯನ್ನು ಅವಮಾನಿಸಿದ್ದ ವ್ಯಕ್ತಿಯ ಕೊಲೆ; ಆರೋಪಿಗಳು ಸಿಕ್ಕಿಬಿದ್ದಿದೇ ರೋಚಕ

ಈ ವರ್ಷದ ಮಾರ್ಚ್‌ನಲ್ಲಿ ದೆಹಲಿ ಹೈಕೋರ್ಟ್ ಕೂಡ ಇದೇ ರೀತಿಯ ತೀರ್ಪು ನೀಡಿತ್ತು. ಶಿಕ್ಷಣ ಪಡೆದಿರುವ ಮತ್ತು ಸಂಪಾದಿಸುವ ಸಾಮರ್ಥ್ಯವಿರುವ ಮಹಿಳೆಯರು ಜೀವನಾಂಶಕ್ಕಾಗಿ ಅವಲಂಬಿಸಬಾರದು ಎಂದು ನ್ಯಾಯಮೂರ್ತಿ ಚಂದ್ರ ಧರಿ ಸಿಂಗ್ ಹೇಳಿದ್ದರು. ಸಿಆರ್‌ಪಿಸಿಯ ಸೆಕ್ಷನ್ 125ರ ಉದ್ದೇಶವು ಸಂಗಾತಿಗಳ ನಡುವೆ ಸಮಾನತೆಯನ್ನು ಕಾಪಾಡುವುದು ಮತ್ತು ಪತ್ನಿ, ಮಕ್ಕಳು ಮತ್ತು ಪೋಷಕರಿಗೆ ರಕ್ಷಣೆ ಒದಗಿಸುವುದು, ಆದರೆ “ಜಡತ್ವವನ್ನು ಉತ್ತೇಜಿಸುವುದಿಲ್ಲ” ಎಂದಿದ್ದರು. ದೆಹಲಿ ಹೈಕೋರ್ಟ್‌ನ ತೀರ್ಪಿನಲ್ಲಿ, “ಉನ್ನತ ಶಿಕ್ಷಣ ಮತ್ತು ಉದ್ಯೋಗ ಅನುಭವವಿರುವ ಮಹಿಳೆಯು ಕೇವಲ ಜೀವನಾಂಶಕ್ಕಾಗಿ ಜಡವಾಗಿರಬಾರದು. ಆಕೆಯ ಶಿಕ್ಷಣವನ್ನು ಬಳಸಿಕೊಂಡು ಗಳಿಸುವ ಸಾಮರ್ಥ್ಯವಿದೆ” ಎಂದು ತಿಳಿಸಲಾಗಿತ್ತು.

ಇನ್ನೂ ಇತ್ತೀಚಿಗಂತೂ ಸಣ್ಣಪುಟ್ಟ ಜಗಳ, ವರದಕ್ಷಿಣೆಯ ಕಿರುಕುಳ ಇತ್ಯಾದಿ ಕಾರಣಗಳಿಗೆ ಡಿವೋರ್ಸ್‌ ಗಾಗಿ ಗಂಡ-ಹೆಂಡ್ತಿ ಕೋರ್ಟ್‌ ಮೆಟ್ಟಿಲೇರಿದಂತಹ ಪ್ರಕರಣಗಳು ಹೆಚ್ಚುತ್ತಲೇ ಇದೆ. ಈ ಹಿಂದೆ ಜೈಪುರದಲ್ಲಿಯೂ ಇಂತದೆ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿತ್ತು, ವಾಯುಪಡೆಯ ಮಹಿಳಾ ಅಧಿಕಾರಿಯೊಬ್ಬರು ತನ್ನ ಪತಿಯ ಮುಂದೆ ವಧುದಕ್ಷಿಣೆಗೆ ಬೇಡಿಕೆಯಿಟ್ಟಿದ್ದರು. ನೀವು ನಾವು ಕೇಳಿದ್ದನ್ನು ಕೊಡಲಿಲ್ಲವೆಂದರೆ ನಿನಗೆ ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದರು, ಇದರಿಂದ ನೊಂದ ಮರ್ಚೆಂಟ್ ನೇವಿ ಅಧಿಕಾರಿ ಅಭಿನವ್ ಜೈನ್ ತನಗೆ ನ್ಯಾಯ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೂ ಮರ್ಚೆಂಟ್ ನೇವಿ ಅಧಿಕಾರಿಯ ಪರವಾಗಿ ಜೈಪುರ ಮೆಟ್ರೋ ನ್ಯಾಯಾಲಯವು ತೀರ್ಪು ನೀಡಿತ್ತು.