ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yamuna flood: ದೆಹಲಿಯಲ್ಲಿ ಅಪಾಯ ಮಟ್ಟ ಮೀರಿದ ಯಮುನಾ ನದಿ, ಸಚಿವಾಲಯಕ್ಕೂ ನುಗ್ಗಿದ ನೀರು

Yamuna River: ದೆಹಲಿ ಮುಖ್ಯಮಂತ್ರಿ (Delhi CM), ಸಂಪುಟ ಸಚಿವರು ಮತ್ತು ಪ್ರಮುಖ ಅಧಿಕಾರಿಗಳ ಕಚೇರಿಗಳನ್ನು ಹೊಂದಿರುವ ದೆಹಲಿ ಸಚಿವಾಲಯದ (Delhi Ministry) ಬಳಿಗೂ ಪ್ರವಾಹ ನೀರು ನುಗ್ಗಿದೆ. ವಾಸುದೇವ್ ಘಾಟ್ ಸುತ್ತಮುತ್ತಲಿನ ಪ್ರದೇಶಗಳು ಸಹ ಜಲಾವೃತಗೊಂಡಿವೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ಉಕ್ಕಿ ಹರಿಯುತ್ತಿರುವ ಯಮುನಾ ನದಿಯಿಂದ (Yamuna river) ಬರುವ ಪ್ರವಾಹದ (Yamuna flood) ನೀರು ಹತ್ತಿರದ ಪ್ರದೇಶಗಳನ್ನು ಮುಳುಗಿಸಿವೆ. ಅಲ್ಲದೇ ಪ್ರವಾಹದ ನೀರು ದೆಹಲಿ ಸಚಿವಾಲಯಕ್ಕೂ (ministry) ನುಗ್ಗಿದೆ. ದೆಹಲಿಯ ಹಾಗೂ ಯಮುನಾ ನದಿಯ ಜಲಾನಯನ ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ಪರಿಣಾಮವಾಗಿ ಯಮುನಾ ನದಿಯಲ್ಲಿ ನೀರು ಉಕ್ಕಿದೆ ಹಾಗೂ ತಗ್ಗು ಪ್ರದೇಶಗಳಿಗೆ ನುಗ್ಗಿದೆ.

ಅಧಿಕೃತ ಮಾಹಿತಿಯ ಪ್ರಕಾರ, ನಸುಕಿನ ಜಾವ 2 ಗಂಟೆಯಿಂದ 5ರ ವರೆಗೆ ನೀರಿನ ಮಟ್ಟ 207.47 ಮೀಟರ್‌ನಲ್ಲಿ ಸ್ಥಿರವಾಗಿತ್ತು. ಬೆಳಗ್ಗೆ 6 ರಿಂದ 7ರ ವರೆಗೂ 207.48 ಮೀಟರ್‌ನಲ್ಲಿ ನೀರಿನ ಮಟ್ಟ ಇತ್ತು. ಬಳಿಕ ನೀರಿನ ಪ್ರಮಾಣ ಹೆಚ್ಚಾಗಿದ್ದು, ಯಮುನೆಯ ಆಕ್ರೋಶ ಕಟ್ಟೆಯೊಡೆದಂತಾಗಿದೆ. ದೆಹಲಿ ಮುಖ್ಯಮಂತ್ರಿ (Delhi CM), ಸಂಪುಟ ಸಚಿವರು ಮತ್ತು ಪ್ರಮುಖ ಅಧಿಕಾರಿಗಳ ಕಚೇರಿಗಳನ್ನು ಹೊಂದಿರುವ ದೆಹಲಿ ಸಚಿವಾಲಯದ (Delhi Ministry) ಬಳಿಗೂ ಪ್ರವಾಹ ನೀರು ನುಗ್ಗಿದೆ. ವಾಸುದೇವ್ ಘಾಟ್ ಸುತ್ತಮುತ್ತಲಿನ ಪ್ರದೇಶಗಳು ಸಹ ಜಲಾವೃತಗೊಂಡಿವೆ.

ಕಾಶ್ಮೀರಿ ಗೇಟ್ ಬಳಿಯ ಶ್ರೀ ಮಾರ್ಗಟ್ ವಾಲೆ ಹನುಮಾನ್ ಬಾಬಾ ಮಂದಿರಕ್ಕೂ ಪ್ರವಾಹ ನೀರು ಆವರಿಸಿದೆ. ಕಂದಾಯ ಇಲಾಖೆಯ ಪ್ರಕಾರ, 8,018 ಜನರನ್ನ ಡೇರೆಗಳಿಗೆ ಸ್ಥಳಾಂತರಿಸಲಾಗಿದ್ದು, 2,030 ಜನರನ್ನು 13 ಶಾಶ್ವತ ಆಶ್ರಯಗಳಿಗೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರ 24/7 ನಿಗಾ ಇಡುತ್ತಿದೆ.

ಇದನ್ನೂ ಓದಿ: Pak Defence Minister: ಮನೆಯ ಟಬ್‌ಗಳಲ್ಲಿ ಪ್ರವಾಹದ ನೀರನ್ನು ಸಂಗ್ರಹಿಸಿ; ನೆರೆ ಹಾನಿಗೆ ಪರಿಹಾರ ಸೂಚಿಸಿದ ಪಾಕ್‌ ರಕ್ಷಣಾ ಸಚಿವ

ಹರೀಶ್‌ ಕೇರ

View all posts by this author